ಕನಕಗಿರಿ ಉತ್ಸವ : ಮುಕ್ತ ವಿವಿಧ ಪಂದ್ಯಾವಳಿಗೆ ಆಹ್ವಾನ

 ಕನಕಗಿರಿ ಉತ್ಸವ-೨೦೧೫ ರ ಅಂಗವಾಗಿ ಈ ಬಾರಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಕ್ರೀಡೆಗಳ ಮುಕ್ತ ಪಂದ್ಯಾವಳಿಗೆ ಪುರುಷ ಮತ್ತು ಮಹಿಳೆಯರ ಆಸಕ್ತ ತಂಡಗಳನ್ನು ಆಹ್ವಾನಿಸಲಾಗಿದೆ.
  ಕನಕಗಿರಿ ಉತ್ಸವ ಫೆ. ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಕನಕಗಿರಿಯಲ್ಲಿ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಪಂದ್ಯಾವಳಿಯನ್ನು ಫೆ. ೨೧ ಮತ್ತು ೨೨ ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗಿದೆ.  ಮಹಿಳೆಯರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
  ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಗಳು ಫೆ. ೨೧ ಮತ್ತು ೨೨ ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹೊನಲು ಬೆಳಕಿನಡಿ ನಡೆಯಲಿವೆ.  ರಂಗೋಲಿ ಸ್ಪರ್ಧೆ ಪೆ. ೨೩ ರಂದು ಬೆಳಿಗ್ಗೆ ೮-೩೦ ಗಂಟೆಗೆ ಕನಕಗಿರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಕುಸ್ತಿ ಪಂದ್ಯಗಳು ಫೆ. ೨೪ ರಂದು ಬೆಳಿಗ್ಗೆ ೯ ರಿಂದ ನಡೆಯಲಿದೆ.  ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೨೫ ಸಾವಿರ ರೂ., ದ್ವಿತೀಯ- ೨೦ ಸಾವಿರ, ತೃತೀಯ- ೧೫ ಸಾವಿರ, ಚತುರ್ಥ- ೧೨ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  ಮಲ್ಲಕಂಬ ಪ್ರದರ್ಶನ ಮಾಡುವ ಪುರುಷರ ಮತ್ತು ಮಹಿಳೆಯರ ೦೫ ತಂಡಗಳಿಗೆ ತಲಾ ೫ ಸಾವಿರ ರೂ. ನಗದು ಬಹುಮಾನ ವಿತರಿಸಲಾಗುವುದು.  ಮಹಿಳೆಯರಿಗಾಗಿ ನಡೆಯುವ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ೦೪ ಸಾವಿರ ರೂ., ದ್ವಿತೀಯ- ೦೩ ಸಾವಿರ, ತೃತೀಯ- ೦೨ ಸಾವಿರ, ಚತುರ್ಥ- ೦೧ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.   ಪುರುಷರಿಗಾಗಿ ಏರ್ಪಡಿಸಲಾಗಿರುವ ಕುಸ್ತಿ ಪಂದ್ಯಗಳಲ್ಲಿ ೫೭ ಕೆ.ಜಿ. ವಿಭಾಗ, ೬೧ ಕೆ.ಜಿ., ೬೫ ಕೆ.ಜಿ., ೭೦ ಕೆ.ಜಿ, ೭೪ ಕೆ.ಜಿ. ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು.  ೫೭ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೪ ಸಾವಿರ ರೂ., ದ್ವಿತೀಯ- ೦೩ ಸಾವಿರ, ತೃತೀಯ ಹಾಗೂ ಚತುರ್ಥ- ೦೨ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  ೬೧ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೫ ಸಾವಿರ ರೂ., ದ್ವಿತೀಯ- ೦೪ ಸಾವಿರ,  ತೃತೀಯ ಹಾಗೂ ಚತುರ್ಥ- ೦೩ ಸಾವಿರ ರೂ. ನಗದು ಬಹುಮಾನ.  ೬೫ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೬ ಸಾವಿರ ರೂ., ದ್ವಿತೀಯ- ೦೫ ಸಾವಿರ,  ತೃತೀಯ ಹಾಗೂ ಚತುರ್ಥ- ೦೪ ಸಾವಿರ ರೂ. ನಗದು ಬಹುಮಾನ.  ೭೦ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೦೮ ಸಾವಿರ ರೂ., ದ್ವಿತೀಯ- ೦೬ ಸಾವಿರ,  ತೃತೀಯ ಹಾಗೂ ಚತುರ್ಥ- ೦೫ ಸಾವಿರ ರೂ. ನಗದು ಬಹುಮಾನ.  ೭೪ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೧೦ ಸಾವಿರ ರೂ., ದ್ವಿತೀಯ- ೦೮ ಸಾವಿರ,  ತೃತೀಯ ಹಾಗೂ ಚತುರ್ಥ- ೦೬ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  ೭೫ ಕೆ.ಜಿ. ಮೇಲ್ಪಟ್ಟ ಕುಸ್ತಿಪಟುಗಳ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಗಧೆ, ಕನಕಗಿರಿ ಕೇಸರಿ ಬಿರುದಾಂಕಿತ ಬೆಲ್ಟ್ ಹಾಗೂ ಪೇಟಾದೊಂದಿಗೆ ಗೌರವಿಸಲಾಗುವುದು. 
  ಕ್ರೀಡಾಕೂಟದಲ್ಲಿ ಭಾಗವಹಸಿಸುವ ಕ್ರೀಡಾಪಟುಗಳಿಗೆ ಫೆ. ೨೧ ರಿಂದ ೨೪ ರವರೆಗೆ ಊಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಗಿದೆ.  ರಂಗೋಲಿ ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವವರು ಫೆ. ೨೩ ರಂದು ಬೆಳಿಗ್ಗೆ ೮-೩೦ ಗಂಟೆಗೆ ಕನಕಗಿರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವರದಿ ಮಾಡಿಕೊಳ್ಳಬೇಕು.  ಆಸಕ್ತ ಕ್ರೀಡಾ ಪಟುಗಳು ಫೆ. ೧೯ ರ ಒಳಗಾಗಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ಶಾಮೀದ್ ಪಾಷಾ- ೯೪೮೧೪೪೪೦೬೮೩.  ಸಿ.ಎ. ಪಾಟೀಲ್- ೯೩೪೨೩೮೭೯೩೫.  ಯತಿರಾಜು- ೯೪೪೮೬೩೩೧೪೬.  ತಿಪ್ಪೆಸ್ವಾಮಿ- ೯೦೦೮೩೬೩೬೭೦. ರಾಮಕೃಷ್ಣಯ್ಯ-೯೯೭೨೮೦೧೫೦೫ ಕ್ಕೆ ಸಂಪರ್ಕಿಸುವಂತೆ   ತಿಳಿಸಿದೆ.
Please follow and like us:
error