You are here
Home > Koppal News > ವಿವಿಧ ಕ್ರೀಯಾಶೀಲ ಚಟುವಟಿಕೆಗಳಿಂದ ಸಾಹಿತ್ಯ ಸಮೃದ್ಧಿ ಸಾಧ್ಯವಿದೆ – ಪ್ರೋ;ಚಲುವರಾಜು

ವಿವಿಧ ಕ್ರೀಯಾಶೀಲ ಚಟುವಟಿಕೆಗಳಿಂದ ಸಾಹಿತ್ಯ ಸಮೃದ್ಧಿ ಸಾಧ್ಯವಿದೆ – ಪ್ರೋ;ಚಲುವರಾಜು

ಕೊಪ್ಪಳ :- ಇಂದು ನಗರದಲ್ಲಿ ಶ್ರೀ ವರಸಿದ್ದಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ದಿ ಮತ್ತು ಕಲ್ಯಾಣ ಸಂಸ್ಥೆ (ರಿ) ಮಾದುನೂರು. ತಿರುಳ್ಗನ್ನಡ ಕ್ರೀಯಾ ಸಮಿತಿ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ, ಶ್ರೀ ನಿಮಿಷಾಂಬ ಪ್ರಕಾಶನ, ಅರಳು ಪ್ರಕಾಶನಗಳ ಸಂಯುಕ್ತಾಶ್ರಯದಲ್ಲಿ ಪದಕಿ ಲೇಔಟ್ ನಲ್ಲಿರುವ ಪತ್ರಕರ್ತರಾದ ಜಿ.ಎಸ್.ಗೋನಾಳರ “ಶ್ರೀ ವಿಷ್ಣುತೀರ್ಥರ ಸದನ” ನೂತನ ಗೃಹಪ್ರವೇಶ ಸಂದರ್ಭದಲ್ಲಿ ಏರ್ಪಡಿಸಿದ್ದ ಯುಗಾದಿ-ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಚೆಲುವರಾಜು ರವರು ವಿವಿಧ ಸಂಘಟನೆಗಳು ತಮ್ಮ ಬಗೆ ಬಗೆಯ ಕ್ರೀಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾಹಿತ್ಯವನ್ನು ಧಾರ್ಮಿಕ ಚೌಕಟ್ಟಿನೊಳಗೆ ಸೀಮಿತವಾಗಿ ನಡೆಯದೇ ವಿಶಾಲ ಮನೋಭಾವದಿಂದ ರೂಪಿಸಿದಲ್ಲಿ ಸಾಹಿತ್ಯ ಸಮೃದ್ದಿಯಾಗಿ ಜನರ ಮನ ತಲುಪಬಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಕವಿಗೋಷ್ಠಿಯಲ್ಲಿ ಶ್ರೀಕಾಂತ ಪೂಜಾರ, ವಿರಣ್ಣ ಹುರಕಡ್ಲಿ, ಮಹೇಶ ಬಳ್ಳಾರಿ,ಪರಮೇಶಗೌಡ, ಎಸ್.ಬಿ.ಗೊಂಡಬಾಳ, ಜೀವನಸಾಬ ಬಿನ್ನಾಳ, ಶಿ.ಕಾ.ಬಡಿಗೇರ, ಶಿವಕುಮಾರ.ಎಸ್.ಪೂಜಾರ, ಸಿರಾಜ್ ಬಿಸರಳ್ಳಿ, ರಾಮ ಚಂದ್ರಗೌಡ ಗೊಂಡಬಾಳ, ಕಲ್ಲನಗೌಡ ಮಾಲಿಪಾಟೀಲ, ಗವಿಸಿದ್ದಪ್ಪ ಬಾರಕೇರ,ಶ್ರೀನಿವಾಸ ಚಿತ್ರಗಾರ, ಎ.ಪಿ ಅಂಗಡಿ ಪುಷ್ಪಲತಾ ಏಳುಭಾವಿ, ವಿಮಲಾ ಇನಾಮದಾರ, ಶಿಲ್ಪಕುರಿ, ಮೊದಲಾದವರು ಕವನ ವಾಚನ ಮಾಡಿದರು. 
ಡಾ. ಮಹಾಂತೇಶ ಮಲ್ಲನಗೌಡ್ರ ಆಶೆಯ ಮಾತುಗಳನ್ನಾಡಿ  ಪ್ರತಿಯೊಬ್ಬ ಬರಹಗಾರರು ತಮ್ಮ ಕಾರ್ಯ ಚಟುವಟಿಕೆಗಳನ್ನೊಡನೆ ಸಾಹಿತ್ಯ ವಾತವರಣವ್ನನು ಬೆಳಸುವಲ್ಲಿ ಪ್ರಯತ್ನ ಮಾಡಬೇಕೆಂದರು. ಇದಕ್ಕೆ ಅತ್ಯುತ್ತಮ ಉದಾಹರಣೆ ಗ್ರಹ ಪ್ರವೇಶದಲ್ಲಿ ಕವಿಗೋಷ್ಠಿ ಸನ್ಮಾನ್ಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು. ಸ್ತುತ್ಯಾರ್ಹವದದ್ದು ಎಂದರು. 
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಪ್ರೋ. ಬಿ.ಎಸ್ ದುಂಡರಡ್ಡಿಯವರು ಮಾತನಾಡಿ ಕವಿಗಳು ಹೆಚ್ಚು ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿ. ಕವಿತೆಗಳನ್ನು ಕೇಳುವುದರ ಮನ ಮುಟ್ಟುವಂತೆ ವಾಚನ ಮಾಡುವುದುರ ಜೊತೆಗೆ ಅವರಲ್ಲಿ ಕ್ರಿಯಾತ್ಮಕ ಭಾವನೆಗಳು ಮೂಡುವಂತೆ ಪ್ರೆರಣೆಯಾದಲ್ಲಿ ಕವಿಯ ಶ್ರಮ ಸಾರ್ಥಕವಾದಂತೆ ಎಂದು ನುಡಿದರು. 
ವೇದಿಕೆಯ ಮೇಲೆ ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಘೋರಂಟ್ಲಿ, ಬಿ.ಎಸ್.ಪಾಟೀಲ, ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಶರಣಪ್ಪ ಬಾಚಲಾಪೂರ, ಸುರೇಶ ಸಿಂಗನಾಳ, ಜಿ.ಎನ್.ಗೋನಾಳ, ಮಹಾಮತಗೌಡ ಪಾಟೀಲ, ಇಂದಿರಾ ಭಾವಿಕಟ್ಟಿ, ವಿಜಯಲಕ್ಷ್ಮೀ ಮಠದ ಉಪಸ್ಥಿತರಿದ್ದರು.   ಈ ಸಂದರ್ಭದಲ್ಲಿ ಕನ್ಸಲ್ಟಂಟ್ ಇಂಜನಿಯರಾದ ಶರಣಪ್ಪ ಬಾಚಲಾಪೂರ, ಕಟ್ಟಡ ನಿರ್ಮಾಣದ ಮೇಸ್ರ್ತಿಯವರಾದ ನಿಂಗಪ್ಪ ಕುಂಬಾರ, ವಿಶಾಕ್ಷಮ್ಮ ಬನ್ನಿಕೊಪ್ಪ, ಸುವರ್ಣ ಬಸವರಾಜ ನಿರಲಗಿ, ಇವರನ್ನು ಸನ್ಮಾನಿಸಲಾಯಿತು. 
ಇದೇ ಸಮಯದಲ್ಲಿ ಸುಗಮ ಸಂಗೀತ ಸುಧೆ ಕಾರ್‍ಯಕ್ರಮವನ್ನು ಸಂಗೀತ ಕಲಾವಿದರಾದ ವಾದಿರಾಜ ಪಾಟೀಲ, ಪರುಶರಾಮ ಬಣ್ಣದ, ಲಚ್ಚಪ್ಪ ಹಳೆ ಪೇಟೆ, ಕು|| ಸೌಪರ್ಣಿ.ಕೆ., ವೀಣಾ ಚಿತ್ರಗಾರ, ಅಶ್ವಿನಿ, ಭಿವನೇಶ್ವರಿ, ವೈಷ್ಣವಿ, ಅನಿತಾ, ಸುಪ್ರಿಯಾ, ಪೂರ್ಣಿಮಾ, ಮೇಘರಾಜ ಭಾಸ್ಕರರಾವ, ಸೋಮರಾಜ ಗೋಪಿಕೃಷ್ಣ, ನಡೆಸಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಶಾರದಾ ಸಿಂಗ್ ಎ.ಪಿ ಅಂಗಡಿ ನಿರ್ವಹಿಸಿದರು. ಸ್ವಾಗತವನ್ನು ಜಿ.ಎಸ್ ಹೋನಾಳರವರು ಮಾಡಿದರು. ಪ್ರಾರ್ಥನೆಯನ್ನು ಪದಕಿ ಲೇಔಟನ ವಿದ್ಯಾರ್ಥಿಗಳು ನೆರವೆರಿಸಿದರು. ವಂದನಾರ್ಪಣೆಯನ್ನು ಶ್ರೀನಿವಾಸ ಚಿತ್ರಗಾರ ಶಿಕ್ಷಕರು ವಂಧಿಸಿದರು. 

Leave a Reply

Top