ಅಳವಂಡಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಕಾಂಗ್ರೆಸಗೆ ವ್ಯಾಪಕ ಬೆಂಬಲ – ಶಿವಾನಂದ ಹೊದ್ಲೂರ

ಕೊಪ್ಪಳ : ೧೪-೦೯-೨೦೧೧ ರಂದು ಮದ್ಯಾಹ್ನ ೧-ಗಂಟೆಗೆ ಅಳವಂಡಿ ಜಿ. ಪಂ. ಕ್ಷೇತ್ರದ ಬೆಳಗಟ್ಟಿ, ಹೈದರನಗರ, ಹಟ್ಟಿ, ಕವಲೂರ, ಅಳವಂಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ ಪಕ್ಷದ ಚುನಾವಣಾ ಪ್ರಚಾರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಕ್ಷೇತ್ರದ ಎಲ್ಲಾಕಡೆ ಉಪಚುನಾವಣೆಯಲ್ಲಿ ಬ್ರಷ್ಟ ಬಿಜೆಪಿ ವಿರುದ್ದದ ಅಲೆ ಕಂಡುಬರುತ್ತಿದೆ. ಕ್ಷೇತ್ರದ ಮತದಾರಿಗೆ ಮೋಸಮಾಡಿ ಆಫರೇಷನ್ ಕಮಲಕ್ಕೆ ದುಡ್ಡಿನ ಆಸೆಗೆ ಬಲಿಯಾಗಿ ಅಭಿವೃದ್ದಿಯ ಸುಳ್ಳು ಮಂತ್ರ ಜಪಿಸುತ್ತಿದ್ದಾನೆ.  ಸ್ವಜನ ಪಕ್ಷಪಾತಮಾಡಿರುವ ಸಂಗಣ್ಣನಿಗೆ ಹಾಗೂ ಭ್ರಷ್ಟರಕೂಟವಾಗಿರುವ ಬಿಜೆಪಿ ಸರಕಾರಕ್ಕೆ ಉಪಚುನಾವಣೆ ಯಲ್ಲಿ ಕಾಂಗ್ರಸ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕೊಪ್ಪಳ ಕ್ಷೇತ್ರದ ಮತದಾರರು ಸುವರ್ಣ ಅಕ್ಷರದಲ್ಲಿ ಆಫರೇಷನ್ ಕಮಲದವಿರುದ್ದ ಹೊಸ ಇತಿಹಾಸ ಬರೆಯಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯಾದ ಬಸವರಾಜ ಹಿಟ್ನಾಳರವರು ಮಾತನಾಡಿ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಲು ಮಹಾಜನೆತೆಗೆ ಮನವಿಮಾಡಿ ತಮ್ಮ೪೦ ತಿಂಗಳ ಅಧಿಕಾರದಲ್ಲಿ ಅಭಿವೃದ್ದಿಕಾರ್ಯಗಳ ಬಗ್ಗೆ ವಿವರಿಸಿದರು.  ಈ ಸಂದರ್ಭದಲ್ಲಿ ಎಸ್. ಬಿ. ನಾಗರಳ್ಳಿ, ಮಾಜಿ ಜಿ.ಪಂ. ಅಧ್ಯಕ್ಷರಾದ ಹೆಚ್.ಎಲ್. ಹಿರೇಗೌಡರ, ಮಾದಿನೂರ ಈಶಪ್ಪ, ಬಸವರಡ್ಡಿ ಹಳ್ಳಿಕೇರಿ, ಮಾಜಿ ಎ.ಪಿ.ಎಂಸಿ. ಅಧ್ಯಕ್ಷರಾದ ಹನುಮರಡ್ಡಿ ಹಂಗನಕಟ್ಟಿ, ಜಿಲ್ಲಾ ಯುವ ಕಾಯ್ದರ್ಶಿಯಾದ ಸುರೇಶ ರೆಡ್ಡಿ, ಸೈಯದ ಸಾಬ್ ಬಿಸರಳ್ಳಿ, ಗವಿಶಿದ್ದಪ್ಪ ಕಂದಾರಿ, ಅಪ್ಸರಸಾಬ್ ಅಕ್ತಾರ, ಶಿವಾನಂದ ಹುದ್ಲೂg ಇನ್ನು ಅನೇಕ ಕಾಂಗ್ರೆಸ ಕಾರ್ಯಕತ್ರರು ಭಾಗವಹಿಸಿದ್ದರೆಮದು ತಾಲೂಕ ವಕ್ತಾರ  ಅಕ್ಬರಪಾಷ ಪಲ್ಟನ್ ತಿಳಿಸಿರುತ್ತಾರೆ. 
Please follow and like us:
error