ಪ್ರತಿಭೆಗೆ ವೇದಿಕೆ ಮುಖ್ಯ -ಸಂಗಣ್ಣ ಕರಡಿ

ಕೊಪ್ಪಳ :  ನಗರದ ವಂದೇ ಮಾತರಂ ಸೇವಾ ಸಂಘ ಮತ್ತು ನೇಹ ಸಾಂಸ್ಕೃತಿಕ  ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ  ದಿನಾಂಕ ೦೬-೧೧-೨೦೧೧ ರಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ  ಭಾವಗೀತೆ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು ಸ್ಫರ್ದೆಯ ವಿಜೇತರಿಗೆ ಬಹುಮಾನ ವಿತರಣೆಸಿದ ಕೊಪ್ಪಳದ ಶಾಸಕರಾದ  ಸಂಗಣ್ಣ ಕರಡಿ ಪ್ರತಿಭೆಗೆ ವೇದಿಕೆ ಮುಖ್ಯ ಪ್ರತಿಯೊಬ್ಬರಲ್ಲಿ  ವಿವಿಧ ರೀತಿಯ ಪ್ರತಿಭೆ ಇದ್ದೆ ಇರುತ್ತದೆ ಅದನ್ನು ಹೊರಹಾಕಲು ಪ್ರತಿಭೆಗಳಿಗೆ ವೇದಿಕೆಗಳು ಸಹಕಾರಿಯಾಗುತ್ತವೆ ಇಂತಹ ವೇದಿಕೆಗಳನ್ನು ಸೃಷ್ಟಿಮಾಡಲು  ಸಾಂಸ್ಕೃತಿಕ ಸಂಘಸಂಸ್ಥೆಗಳು ಇನ್ನು ಮುಂದುವರಿಯಬೇಕು ಇಂತಹ ಕೆಲಸವನ್ನು ಈಗ ವಂದೇ ಮಾತರಂ ಸೇವಾ ಸಂಘವು  ಮಾಡುತ್ತಿದೆ  ಮತ್ತು ಕಲೆಗೆ ಬೆಲೆ ಕೊಡುವ ಕೆಲಸವಾಗಿದೆ ಎಂದು ಬಹುಮಾನವನ್ನು ವಿತರಿಸಿ ಮಾತನಾಡಿದರು ಈ ಕಾರ್ಯಕ್ರಮದ  ಉದ್ಘಾಟನೆಯನ್ನು ವಿರಣ್ಣ ಹಂಚಿನಾಳವರು  ಮಾಡಿದರು ಅಧ್ಯಕ್ಷತೆಯನ್ನು ನೇಹಾ ಸಾಂಸ್ಕೃತಿಕ ಅಧ್ಯಕ್ಷರಾದ ಡಾ|| ಮಹಾಂತೇಶ ಮಲ್ಲನಗೌಡರ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ|| ವಿ.ಬಿ.ರಡ್ಡೇರ, ಶಿವುಕುಮಾರ ಕುಕನೂರು, ಕಲ್ಲನಗೌಡರ, ಜಿ.ಎಸ್.ಗೊನಾಳ, ಕೃಷ್ಣ ಸೊರಟೂರ, ಶಾಧಿಕ್ ಅಲಿ, ಹನುಮಂತ ಹಳ್ಳಿಕೇರಿ, ಶಿವಾನಂದ ಹುದ್ಲೂರು, ಮತ್ತು ಇನ್ನು ಅನೇಕ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
 ಸ್ವಾಗತ ಗೀತೆಯನ್ನು  ಬಾಳಮ್ಮ ಹಾಡಿದರು ವಿರೇಶ ಸ್ವಾಗತವನ್ನು ಮಾಡಿದರು ಪ್ರಸ್ತಾವಿಕವಾಗಿ ರಾಕೇಶ ಕಾಬ್ಳೇಕರ್ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು  ರಾಮ್‌ಸ್ವರೂಪ ಕಾಂಬ್ಳೇಕರ್ ವಂದನಾರ್ಪಣೆಯನ್ನು ಈರಣ್ಣ ಪಗಡಾಲ್ ಮಾಡಿದರು
ಭಾವಗೀತೆಯ ಸ್ಪರ್ಧೆಯ ವಿಜೇತರು 
ಪ್ರಥಮ :  ಶಕುಂತಲಾ ಬಿನ್ನಾಳ
ದ್ವಿತೀಯ : ಫಕೀರೇಶ ಭಾಗ್ಯನಗರ
ತೃತೀಯ : ಪ್ರೀಯಾ ಪುರಂದರ 
ವಿಜೇತರೆಂದು ಸಂಘ ಸದಸ್ಯರಾದ ಇಜ್ರಾಯಿಲ್, ಮತ್ತು ನಾಗರಾಜ ಬಾನಪೂರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ

Leave a Reply