ಇಂದು ತಾಲೂಕ ಮಟ್ಟದ ಆಯುಷ್ ಕಾರ್ಯಾಗಾರ

  ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಆಯುಷ್ ಕಛೇರಿ ಕೊಪ್ಪಳ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಅಶ್ರಯದಲ್ಲಿ ಡಿ, ೧೨ ರಂದು ಭಾಗ್ಯನಗರ ಗ್ರಾ. ಪಂ. ಆವರಣದಲ್ಲಿರುವ ಸಮುದಾಯ ಭವನದಲ್ಲಿ ಬೆ. ೧೦.೩೦ ರಿಂದ ಒಂದು ದಿನದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಜಿಲ್ಲಾ ಆಯುಷ್ ಅಧಿಕಾರಿ ಡಾ|| ಬಸಪ್ಪ ವಾಲಿಕಾರ ಕಾರ್ಯಾಗಾರವನ್ನು ಉದ್ಘಾಟಿಸುವರು. ಭಾಗ್ಯನಗರ ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ್ ಭೈರಾಪೂರ ಅವರ ಅಧ್ಯಕ್ಷತೆಯಲ್ಲಿ ತಾ. ಪಂ. ಸದಸ್ಯ ದಾನಪ್ಪ ಜಿ. ಕವಲೂರು, ನಗರದ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಶ್ರೀಮತಿ ಡಾ|| ಚಂದ್ರಕಲಾ ನರಹಟ್ಟಿ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಪ್ರ. ಕಾರ್ಯದರ್ಶಿ ವೈ. ಬಿ. ಜೂಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಖ್ಯಾತ ವೈದ್ಯರಾದ ಡಾ|| ಪ್ರಭು ನಾಗಲಾಪುರ, ಡಾ|| ಚಂದ್ರಶೇಖರ ವೈ. ಜೆ. ಹಾಗೂ ಡಾ|| ಕೃಷ್ಣ ಜಿಗಳೂರು ಅವರುಗಳು ಕಾಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಯುಷ್ ಕಾಯಾಗಾರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ|| ಬಸಪ್ಪ ವಾಲೀಕಾರ   ತಿಳಿಸಿದ್ದಾರೆ.

Leave a Reply