ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ


ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ
ಕೊಪ್ಪಳ: ಪ್ರಕಾಶ ಬಳ್ಳಾರಿಯವರ ಕುದರಿಮೋತಿ ಮೊಹರಂ ಆಚರಣೆ ಮತ್ತು ಅಲೆಮಾರಿಜನಾಂಗಗಳು ಒಂದು ಅಧ್ಯಯನ ಈ ಕೃತಿಯು ಭಾವೈಕ್ಯತೆಯನ್ನು ಹಾಗೂ ಸಾಮರಸ್ಯವನ್ನು ತರುವ ದಿಸೆಯಲ್ಲಿ ತುಂಬಾ ಮಹತ್ವದ್ಧಾಗಿದೆ. ಈ ಕೃತಿಯಲ್ಲಿ ಧಾರ್ಮಿಕ ಚೌಕಟ್ಟು, ಮತ್ತು ಐತಿಹಾಸಿಕತೆಯ ಮಹತ್ವದ ಅಂಶಗಳಿವೆ. ಆದರೆ ಆ ಚೌಕಟ್ಟುಗಳನ್ನು ಮೀರುವ ಹಾಗೇ ಊರಿನ ಜನರೆಲ್ಲರನ್ನು ಬೆರೆಸಿಕೊಂಡಿರುವ  ಅದ್ಬೂತವಾದ ಕಲಾಲೋಕವಿದೆ. ಮೊಹರಂ ಆಚರಣೆ ಮತ್ತು ಅದರಲ್ಲಿ ಭಾಗಿಯಾಗುವ ಅಲೆಮಾರಿಗಳ ಬದುಕು,ಸಂಸ್ಕೃತಿ, ಸಂಪ್ರದಾಯ ಇವುಗಳಲ್ಲದೇ ಸವಾಲ್ ಜವಾಬ್, ಅಚ್ಚಳ್ಳಿ ಪಿಚ್ಚಳ್ಳಿ, ರಿವಾಯತ್ ಪದಗಳು, ಮೊದಲಾದ  ವಿಷಯಗಳನ್ನು ಸೊಗಸಾಗಿ ರಚಿಸಿರುತ್ತಾರೆ. ನಮ್ಮ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ ಈ ಕೃತಿಯನ್ನು  ನಾನು ಸಂತೋಷದಿಂದ ಬಿಡುಗಡೆ ಮಾಡುವದರ  ಮೂಲಕ ಲೋಕಾರ್ಪಣೆ ಮಾಡಿದ್ದೇನೆ. ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ ರಹಮತ್ ತರೀಕೆರೆ ನುಡಿದರು. ಅವರು ಇಲ್ಲಿನ ಡಾ.ಜ.ಚ.ನಿ ಜನ್ಮ ಶತಾಬ್ದಿ ಭವನದಲ್ಲಿ ಕವಿ ಗವಿಸಿದ್ಧ ಎನ್.ಬಳ್ಳಾರಿಯವರ ೯ ನೇ ಪುಣ್ಯ ಸ್ಮರಣೆ ಅಂಗವಾಗಿ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ  ಕೊಪ್ಪಳದ ಯುವ ಉಪನ್ನಾಸಕರಾದ ಡಾ. ಪ್ರಕಾಶ ಬಳ್ಳಾರಿಯವರ ರಚಿಸಿದ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಸಭೆಯಲ್ಲಿ ಶಾಸಕ ಸಂಗಣ್ಣ ಕರಡಿ ಮಾತನಾಡಿ ಕವಿ ಗವಿಸಿದ್ಧ ಬಳ್ಳಾರಿ ನನಗೆ ತುಂಬಾ ಒಡನಾಡಿಯಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ಪ್ರಕಾಶ ಬಳ್ಳಾರಿ ಕೂಡಾ ನಮ್ಮ ಜಿಲ್ಲೆ ಗ್ರಾಮವಾದ ಕುದರಿಮೋತಿ ಮೊಹರಂ ಕುರಿತು ಕೃತಿ ಬರೆದಿರುವದು ಸ್ವಾಗತರ್ಹಾವಾದುದು ಎಂದರು. ಬಳ್ಳಾರಿ ಜಿಲ್ಲಾ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಣ್ಣಮಾರೆಪ್ಪ, ಕುದರಿಮೋತಿಯ ದರ್ಗಾದ ಖಾಜಾಮೈನುದ್ಧೀನ ಮಕಾನದಾರ್ ಮಾತನಾಡಿದರು.   ವೇದಿಕೆಯಲ್ಲಿ ಎಚ್.ಎಸ್.ಪಾಟೀಲ, ಎ.ಎಂ.ಮದರಿ, ಬಸವರಾಜ ಪುರದ, ರಾಜಶೇಖರಗೌಡ ಆಡೂರ, ವೀರಣ್ಣ ನಿಂಗೋಜಿ, ಮೌಲಾಹುಸೇನಜಮಾದಾರ, ವೈಜನಾಥ ದಿವಟರ ಉಪಸ್ಥತರಿದ್ದರು. ನಂತರ ಎ.ಎಂ.ಮದರಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಸೂರ್ಯಕಾಂತ ಗುಣಕಿಮಠ ಇವರಿಂದ ಕೂಗಕೇಳುವರಿಲ್ಲ  ಎಂಬ ಏಕ ವ್ಯಕ್ತಿ ನಾಟಕ ಪ್ರದರ್ಶನ ಜರುಗಿತು. ಪ್ರಸ್ತಾವಿಕ ಅಲ್ಲಮಪ್ರಭೂ ಬೆಟ್ಟದೂರ, ನಿರೂಪಣೆ ಮಾನಪ್ಪ ಬೆಲ್ಲದ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗವಿಸಿದ್ಧ ಬಳ್ಳಾರಿವರ ಅಭಿಮಾನಿಗಳು ಹಿತೈಸಿಗಳು  ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು

Please follow and like us:
error