ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ

   ದಿನಾಂಕ:-೨೭-೬-೨೦೧೩ ರಂದು ಬೆಳಿಗ್ಗೆ ೧೨ಗಂಟೆಗೆ ಗಂಗಾವತಿ ಕ್ಷೇತ್ರದ ಶಾಸಕರಾದ  ಇಕ್ಬಾಲ ಅನ್ಸಾರಿಯವರು ಕಿನ್ನಾಳ ಗ್ರಾಮದ ಕುವೆಂಪು ಶತಮಾನೊತ್ಸವ ಮಾದರಿ ಶಾಲೆಗೆ ಮಂಜೂರಾಗಿರುವ ನೂತನ ಕಟ್ಟಡದ ಭುಮಿ ಪೂಜೆಯನ್ನು ನೆರವೇರಿಸಿದರು, ನಂತರ ಶಾಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ವಿದ್ಯಾರ್ಥಿಗಳ ಜೀವನ ಒಳ್ಳೆಯ ಭವಿಷ್ಯ ನಿರ್ಮಾಣವಾಗುವ ಹಾಗೆ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕೆಂದು ಮಾತನಾಡಿದರು, ಇದೇ ಸಂದರ್ಭದಲ್ಲಿ

ಗ್ರಾ.ಪಂ. ಅಧ್ಯಕ್ಷರಾದ   ವೀರಭದ್ರಪ್ಪ ಗಂಜಿ, ಜಿ.ಪಂ. ಸದಸ್ಯೆ ಶ್ರೀಮತಿ ವನಿತಾ ಗಡಾದ, ತಾ.ಪಂ. ಸದಸ್ಯ  ಅಮರೇಶ ಉಪಲಾಪುರ, ಹಾಗೂ ಗ್ರಾ.ಪಂ. ಸದಸ್ಯರಾದ   ಬಾಷಾ ಹಿರೇಮನಿ,  ಪಂಪಾಪತಿ ಹಿರೇಮಠ, ವಿರೇಶ ತಾವರಗೇರೆ, ಪರಸಪ್ಪ ವಾಲ್ಮೀಕೀ, ಬಸವರಾಜ ಚಿಲವಾಡಿಗಿ, ಅನಿಲ ಬೊರಟ್ಟಿ, ಅಶೋಕ ಚಿತ್ರಗಾರ, ಹಾಗೂ ಶಾಲೆಯ ಎಸ್.ಡಿ.ಎಮ್.ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Please follow and like us:
error