ವೇಶ್ಯಾವಾಟಿಕೆ : ಮುಂಬ್ಯೆ ಮೂಲದ ಯುವತಿಯರ ಬಂಧನ

ಕೊಪ್ಪಳ : ನಗರದ ಪ್ರತಿಷ್ಠಿತ ಎಂ.ಬಿ.ದಿವಟರ್ ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸುಮಾ ಹಿರೇಮಠ ಹಾಗೂ ಇತರ ಐವರು ಯುವತಿಯರನ್ನು ಪೋಲೀಸರು ಬಂಧಿಸಿದ್ದಾರೆ.
ಸುಮಾ ಹಿರೇಮಠ ಎಂಬುವವರು ಕೊಪ್ಪಳದಲ್ಲಿ ಅಂತರಾಜ್ಯ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು. ಇಲ್ಲಿಗೆ ಆಗಾಗ ಬೇರೆ ಬೇರೆ ಊರಿನ ಜನರು ಬಂದು ಹೋಗುವುದು ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಷಯ ಸ್ಥಳೀಯರಿಗೆ ಬಹಳ ಕಿರಿಕಿರಿಯಾಗಿತ್ತು . ಸುಮಾ ಹಿರೇಮಠ ಹೀಗಾಗಲೇ ಹಲವಾರು ಬಾರಿ ಬಂಧನಕ್ಕೆ ಒಳಗಾಗಿದ್ದಳು ಎನ್ನಲಾಗುತ್ತಿದೆ. ಬಂಧಿತ ಯುವತಿಯರು ಮುಂಬೈ ಮೂಲದವರು ಎನ್ನಲಾಗುತ್ತಿದೆಯಾದರೂ ಅವರ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ.
Please follow and like us:

Related posts

Leave a Comment