You are here
Home > Koppal News > ‘ಪ್ರತ್ಯೇಕ ಪತ್ರಿಕೋದ್ಯಮ ವಿಭಾಗ ಆರಂಭಿಸಲು ಚಿಂತನೆ’ -ಪ್ರಾಂಶುಪಾಲ ಪ್ರೊ. ಡಿ. ಗಂಗಣ್ಣ

‘ಪ್ರತ್ಯೇಕ ಪತ್ರಿಕೋದ್ಯಮ ವಿಭಾಗ ಆರಂಭಿಸಲು ಚಿಂತನೆ’ -ಪ್ರಾಂಶುಪಾಲ ಪ್ರೊ. ಡಿ. ಗಂಗಣ್ಣ

 ನಗರದ ಎಸ್‌ಎಸ್‌ಎ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ಪ್ರತ್ಯೇಕ ಪತ್ರಿಕೋದ್ಯಮ ವಿಭಾಗವನ್ನು ಆರಂಭಿಸಲು ಚಿಂತನೆ ನಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ. ಗಂಗಣ್ಣ ಅವರು ತಿಳಿಸಿದರು.
ನಗರದ ಎಸ್‌ಎಸ್‌ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ‘ವಿಶೇಷ ಉಪನ್ಯಾಸ ಮತ್ತು ಪ್ರಮಾಣಪತ್ರ ವಿತರಣಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಪ್ರಸ್ತುತ ಕಾಲೇಜಿನ ಬಿ. ಎ ವಿದ್ಯಾರ್ಥಿಗಳು ಐಚ್ಚಿಕವಾಗಿ ಪತ್ರಿಕೋದ್ಯಮ ವಿಷಯವನ್ನು ಕಲಿಯುತ್ತಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಪತ್ರಿಕೋದ್ಯಮ ವಿಷಯಕ್ಕೆ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗುವುದು  ಎಂದು ಹೇಳಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಶ್ವತ ಕೊಠಡಿ ವ್ಯವಸ್ಥೆ, ನುರಿತ ಭೋದಕ ಸಿಬ್ಬಂದಿ, ಪ್ರಾಯೋಗಿಕ ಕಲಿಕೆಗಾಗಿ ಅಗತ್ಯ ಉಪಕರಣ ಮತ್ತಿತರ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕನ್ನಡಪ್ರಭ ದಿನಪತ್ರಿಕೆಯ ಜಿಲ್ಲಾ ವರದಿಗಾರ ಶಶಿಧರ್ ಮೇಟಿ ಮಾತನಾಡಿ,  ಪತ್ರಿಕೋದ್ಯಮ ಬಹುಶಕ್ತಿಯುತ ಮಾಧ್ಯಮ. ಕೌಶಲ್ಯ, ಆಸಕ್ತಿ ಹಾಗೂ ಹೆಚ್ಚಿನ ಜ್ಞಾನ ಗಳಿಸಿಕೊಂಡು ಪತ್ರಿಕಾರಂಗವನ್ನು ಪ್ರವೇಶಿಸಿರುವವರು ಯಶಸ್ವಿ ಪತ್ರಕರ್ತರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಪದವಿ-ಸ್ನಾತಕೋತ್ತರ ಪದವಿ ಪಡೆಯುತ್ತಲೇ ಪತ್ರಕರ್ತ ಹುದ್ದೆ ಗಿಟ್ಟಿಸಿಕೊಳ್ಳು ಸಾಧ್ಯವಿಲ್ಲ. ಒಳ್ಳೆಯಭಾಷೆ, ಉತ್ತಮ ಬರವಣಿಗೆ, ಸಂವಹನ ಕೌಶಲ್ಯದ ಜತೆಗೆ ವಿನಯ ಶೀಲತೆಯನ್ನು ಮೈ ಗೂಡಿಸಿಕೊಂಡರೆ ಈ ಕ್ಷೇತ್ರದಲ್ಲಿ ಗಮನಸೆಳೆಯುವ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಪತ್ರಿಕೋದ್ಯಮದಲ್ಲಿ ವಿಫಲ ಉದ್ಯೋಗ ಅವಕಾಶಗಳಿವೆ.    ನೈಪುಣ್ಯತೆಗಳಿಸಿಕೊಂಡರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ ಮಾರ್ಗ ಎಂದು ತಿಳಿಸಿದರು.ಕಾಲೇಜಿನ ಸಮಾಜಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಇಸ್ಮಾಯಿಲ್ ಮಕಂದಾರ್ ಅವರು ಮಾತನಾಡಿ, ಜೀವನದಲ್ಲಿ ಸ್ವಾರ್ಥವಿಲ್ಲದೆ ವ್ಯಕ್ತಿಯ ಏಳ್ಗೆ ಬಯಸುವವರು ತಾಯಿ ಮತ್ತು ಗುರು ಮಾತ್ರ. ನಿಸ್ವಾರ್ಥತೆಯಿಂದ ಪ್ರೀತಿ ತೋರುವ ತಾಯಿ ಹೇಗೆ ಮಗುವಿಗೆ ಉತ್ತಮ ಜೀವನರೂಪಿಸುವಳೋ
ಅದೇ ರೀತಿ ಗುರು ಕೂಡಾ ವಿದ್ಯಾರ್ಥಿಯ ಯಶಸ್ಸಿಗೆ ಸ್ವಾರ್ಥರಹಿತವಾಗಿ ಶ್ರಮಿಸುತ್ತಾನೆ ಎಂದು ಹೇಳಿದರು. ವಿದ್ಯಾರ್ಥಿಗಳ ಯಶಸ್ಸಿಗಾಗಿ ತಮ್ಮ ಸಹಕಾರ ಸದಾ ಇರುವುದು ಎಂದರು. 
ಪ್ರಮಾಣ ಪತ್ರ ವಿತರಣೆ: ಧರ್ಮಸ್ಥಳ- ಉಜಿರೆಯಲ್ಲಿ ಈಚೆಗೆ ನಡೆದ ಪತ್ರಿಕೋದ್ಯಮ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಮಾಧ್ಯಮ ಹಬ್ಬದಲ್ಲಿ ಪಾಲ್ಗೊಂಡ ಕಾಲೇಜಿನ ೨೧ ವಿದ್ಯಾರ್ಥಿಗಳಿಗೆ ಹಾಜರಾತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾದ ಸಿ.ಮಂಜುನಾಥ್, ಬಿ.ಆರ್.ರಾಜು ಮಾತನಾಡಿದರು.
ಬಿ. ಎ ಅಂತಿಮ ವಿದ್ಯಾರ್ಥಿಗಳಾದ ಎಸ್ ಕೆ ಲೋಕೇಶ್, ವಿ. ಮಣಿ, ಜಿ ಎಂ ರಾಮಾಂಜಿನಿ, ಬಿ. ಕೆ ಧನುಂಜಯ ಭಟ್, ಅಸೀನಾ, ಕೆ. ರಾಮಕೃಷ್ಣ ಮತ್ತಿತರರು ತಮ್ಮ ಅನುಭವಗಳನ್ನು ಹಂಚಿಕೊಂಡರು.ರಂಗ ಕಲಾವಿದರೂ ಆಗಿರುವ ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್ ಅವರ ’ಶಕುನಿ’ ಪಾತ್ರದ ಸಂಭಾಷಣೆಗಳು ಸಭಿಕರ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಡಾ. ಕೆ. ಬಸಪ್ಪ ಹಾಗು ಪತ್ರಿಕೋದ್ಯ <ತ್ರಿಕೋದ್ಯ> ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾರಕ್ಕ ಪ್ರಾರ್ಥನ ಗೀತೆ ಹಾಡಿದರು. ವಿದ್ಯಾರ್ಥಿ ಜಿ. ಸುರೇಶ್ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿ ಪ್ರಕಾಶ್ ವಂದಿಸಿದರು.

Leave a Reply

Top