ತುಂಗಭದ್ರಾ ನದಿ ನೀರು : ಕುಡಿಯಲು ಮಾತ್ರ ಬಳಕೆಗೆ ಸೂಚನೆ

ಜು. ೨೧ ರಿಂದ ತುಂಗಭದ್ರಾ ನದಿಗೆ ನೀರು :  
  ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ಹಲವು ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿನ ಕುಡಿಯುವ ನೀರಿನ ಅಭಾವವನ್ನು ನೀಗಿಸುವ ಸಲುವಾಗಿ ಜು. ೨೧ ರಿಂದ ನದಿಗೆ ನೀರು ಬಿಡಲಾಗುವುದು ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಸ್.ಹೆಚ್. ಮಂಜಪ್ಪ ಅವರು ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯ ಕೆಳಭಾಗದ ನದಿ ಪಾತ್ರದಲ್ಲಿ ಬರುವ ನಗರ/ಪಟ್ಟಣ/ಹಳ್ಳಿಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿದ್ದು, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗಿರುವುದರಿಂದ  ತುಂಗಭದ್ರಾ ನದಿಯ ಮೂಲಕ ನೀರನ್ನು ಜು. ೨೧ ರಿಂದ ಹರಿಬಿಡಲಾಗುವುದು.  ಸಾರ್ವಜನಿಕರು/ರೈತ ಬಾಂಧವರು ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದೇ ಕುಡಿಯುವ ನೀರಿನ ಪೂರೈಕೆಗಾಗಿ  ಮಾತ್ರ ಅನುವಾಗುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. 

Leave a Reply