ರಂಗಭೂಮಿ ನಶಿಸದಂತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ- ರಾಜಶೇಖರ ಅಂಗಡಿ.

ಕೊಪ್ಪಳ- ೦೫-೦೩-೨೦೧೬ ರಂದು ಗಂಗಾವತಿ ಶಹರದ ಸರಕಾರಿ ಜೂನಿಯರ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಶ್ರೀ ಶಿವಶಾಂತವೀರ ಶಿಕ್ಷಣ ಗ್ರಾಮೀಣಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ ಕವಲೂರ ತಾ|ಜಿ| ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವg ಸಹಯೋಗದಲ್ಲಿ ೬ ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನರನಾಗರರು ಎಂಬ ನಾಟಕ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿರುವ ರಾಜಶೇಖರ ಅಂಗಡಿ ಜ್ಯೋತಿ ಬೆಳಗಿಸಿ ನಾಟಕ ಉದ್ಘಾಟಿಸಿದರು. ವೇದಿಕೆಯಲ್ಲಿ ರಾಘವೇಂದ್ರ ಶ್ರೇಷ್ಠಿ, ನಗರಸಭೆ ಅಧ್ಯಕ್ಷ ಗವೀಶ ಹುಡೇಜಾಲಿ, ನಿರ್ಧೇಶಕರು ಜಿಲ್ಲಾ ಸಹಕಾರಿ ಯುನಿಯನ್ ಎಸ್.ಬಿ. ಗೊಂಡಬಾಳ, ದಕ್ಷಿಣ ಮೂರ್ತಿ ಲಿಂಗಾರಡ್ಡಿ ಆಲೂರ, ಸಾಹಿತಗಳು, ಚನ್ನವಿರನಗ್ವಡ, ಬಿಜೆಪಿ ಯುವ ಮಉಖಂಡ, ಕೆ. ಸಿದ್ದನಗೌಡ್ರ, ಶೇಖರಪ್ಪ ಡ್ಯಾಗಿ, ವೀರುಪಣ್ಣ ಗಂಗಾವತಿ , ಶಿವಕುಮಾರ ಪಟ್ಟೇದ, ಶ್ರೀಮತಿ ರಾಧಾ ಬಸವರಾಜ, ಶಿವಕುಮಾರ ಮಾಲಿಪಾಟೀಲ, ಮಲ್ಲಿಕಾರ್ಜುನ ಸಾಹುಕಾರ, ಪಂಚಾಕ್ಷರಿ ಕೋರಿ, ಬಸವರಾಜ ಕೋರಿ ಉಪಸ್ಥಿತರಿದ್ದರು.

Please follow and like us:
error