ಮುಂಗಾರು ಕೃಷಿ ವಿಮಾ ಯೋಜನೆ ಜಾರಿ.

ಕೊಪ್ಪಳ ಜು. ೧೩ ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿಗೊಂಡಿದ್ದು, ವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಬಯಸುವ ರೈತರು ಸಂಬಂಧಿಸಿದ ಬ್ಯಾಂಕಿಗೆ ಘೋಷಣೆ ಸಲ್ಲಿಸುವಂತೆ ಕೃಷಿ ಇಲಾಖೆ ಸೂಚನೆ ನೀಡಿದೆ.
      ಮುಂಗಾರು ಹಂಗಾಮಿನ ರಾಷ್ಟ್ರೀಯ ಕೃಷಿ ವಿಮೆ ಯೋಜನೆಗಾಗಿ ಕೊಪ್ಪಳ ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಆಫ್ ಇಂಡಿಯಾ ಲಿ. ಬೆಂಗಳೂರು ಇವರನ್ನು ನಿಗದಿಪಡಿಸಲಾಗಿದೆ.  ಈ ಯೋಜನೆಯಡಿ ಬೆಳೆ ಸಾಲ ಪಡೆಯದ ರೈತರು, ಬೆಳೆ ಬಿತ್ತಿದ/ನಾಟಿ ಮಾಡಿದ ನಂತರ ೩೦ ದಿವಸಗಳೊಳಗಿರುವ ಅಥವಾ ಮುಂಚಿತವಾಗಿ ಬಿತ್ತನೆಯಾಗುವ ಬೆಳೆಗಳಿಗೆ ಜುಲೈ ೩೧ ಕೊನೆಯ ದಿನಾಂಕವಾಗಿದೆ.  ತಡವಾಗಿ ಬಿತ್ತನೆಯಾಗುವ ಬೆಳೆಗಳಿಗೆ ಆಗಸ್ಟ್ ೩೧ ಕೊನೆಯ ದಿನಾಂಕವಾಗಿರುತ್ತದೆ.  ಬೆಳೆ ಸಾಲ ಪಡೆಯುವ ರೈತರಿಗೆ ಎಲ್ಲಾ ಬೆಳೆಗಳಿಗೆ ಸೆಪ್ಟಂಬರ್ ೩೦ ಕೊನೆಯ ದಿನಾಂಕವಾಗಿದೆ.  ಸಂಬಂಧಿಸಿದ ರೈತರು ನಿಗಧಿತ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆಗಳನ್ನು ಸಲ್ಲಿಸಬೇಕು.  ನೋಂದಾಯಿಸುವ ಸಮಯದಲ್ಲಿ ಬೆಳೆಯು ಆರೋಗ್ಯವಾಗಿರಬೇಕು.  ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ, ಭೂಮಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳಾದ ಪಹಣಿ/ ಖಾತೆ/ ಪಾಸ್ ಪುಸ್ತಕ/ ಕಂದಾಯ ರಸೀದಿಯನ್ನು ನೀಡಬೇಕು.  ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಬ್ಯಾಂಕುಗಳು ಅಥವಾ ಕೃಷಿ ಇಲಾಖೆಯ ಅಧಿಕಾರಿಗಳಿಂದ ಪಡೆಯಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು  ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಶ್ಲೇಷಣೆ : ಜು.೨೧ ರಂದು ಕಾರ್ಯಾಗಾರ
ಕೊಪ್ಪಳ, ಜು.೧೩ (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ೨೦೧೪-೧೫ನೇ ಸಾಲಿನ ಬ್ಲಾಕ್‌ವಾರು ಎಸ್.ಎಸ್.ಎಲ್.ಸಿ ಫಲಿತಾಂಶದ ವಿಶ್ಲೇಷಣೆ ಕಾರ್ಯಾಗಾರವನ್ನು ಜು.೨೧ ರಂದು ಬೆಳಿಗ್ಗೆ ೦೯ ಗಂಟೆಗೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
     ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಅಲ್ಲದೇ ಕಾರ್ಯಾಗಾರಕ್ಕೆ ಬರುವಾಗ ತಮ್ಮ ಶಾಲೆಯ ೨೦೧೫ ರ ಎಸ್.ಎಸ್.ಎಲ್.ಸಿ ಫಲಿತಾಂಶದ ವಿವರ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಪಡಿಸಲು ಸಿದ್ಧಪಡಿಸಲಾದ ಕ್ರಿಯಾ ಯೋಜನೆಯೊಂದಿಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ಯಾಮಸುಂದರ್ ತಿಳಿಸಿದ್ದಾರೆ.
ಎಂ.ಎಫ್.ಎ ತರಗತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ, ಜು.೧೩  ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರಥಮ ಎಂ.ಎಫ್.ಎ. ತರಗತಿಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
       ಪ್ರಥಮ ಎಂ.ಎಫ್.ಎ. ತರಗತಿಯಲ್ಲಿ ಚಿತ್ರಕಲೆ, ಶಿಲ್ಪಕಲೆ ಹಾಗೂ ಗ್ರಾಫಿಕ್ಸ್ ವಿಭಾಗಗಳಿದ್ದು,  ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಬಿ.ಎಫ್.ಎ. ಅಥವಾ ತತ್ಸಮಾನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು ಪಡೆಯಲು ರೂ.೨೫೦/- ಪಾವತಿಸಿ ಖುದ್ದಾಗಿ ಅಥವಾ ರೂ.೨೭೫/- ಗಳ ಡಿ.ಡಿ.ಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಡೀನ್, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಭಾರತ ಸರ್ಕಾರದ ಪಠ್ಯಪುಸ್ತಕ ಮುದ್ರಣಾಲಯದ ಆವರಣ, ಟಿ.ಎನ್.ಪುರ ರಸ್ತೆ, ಮೈಸೂರು-೫೭೦೦೧೧ ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದಾಗಿದೆ. ಡೀನ್‌ರವರ ಕಛೇರಿ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಭಾರತ ಸರ್ಕಾರದ ಪಠ್ಯಪುಸ್ತಕ ಮುದ್ರಣಾಲಯದ ಆವರಣದಲ್ಲಿ ಜು.೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಆಯಾ ವಿಭಾಗಗಳಲ್ಲಿ ಅರ್ಹತಾ ಪರೀಕ್ಷೆಗಳು ನಡೆಯಲಿವೆ, ಅರ್ಜಿ ಸಲ್ಲಿಸಲು ಜು.೧೫ ಕೊನೆಯ ದಿನಾಂಕವಾಗಿದ್ದು, ಜು.೨೮ ಶುಲ್ಕ ಪಾವತಿಸಲು ಅಂತಿಮ ದಿನಾಂಕವಾಗಿದೆ. ಆಗಸ್ಟ್.೦೧ ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ.
         ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ, ಪಿಯುಸಿ, ಮತ್ತು ಬಿಎಫ್‌ಎ ಅಥವಾ ತತ್ಸಮಾನ ಪದವಿಯ ಪ್ರಮಾಣ ಪತ್ರ, ಪದವಿ ಅಂಕಪಟ್ಟಿ, ವರ್ಗಾವಣೆ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಲಸೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ಅಲ್ಲದೇ ಸಂದರ್ಶನ ಸಮಯದಲ್ಲಿ  ಮೂಲ ದಾಖಲಾತಿಗಳನ್ನು ಕಛೇರಿಯ ಸಿಬ್ಬಂದಿ ವರ್ಗದವರಲ್ಲಿ ಪರಿಶೀಲಿಸಲು ಹಾಜರುಪಡಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೨೧-೨೪೩೮೯೩೧ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು.
Please follow and like us:

Leave a Reply