ಕುಕ್ಕೆ ಸುಬ್ರಹ್ಮಣ್ಯ: ಮಡೆಸ್ನಾನ ನಿಷೇಧ ವಾಪಸ್

ಮಂಗಳೂರು, ನ.28: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಮಡೆ ಸ್ನಾನ (ಬ್ರಾಹ್ಮಣರು ಉಂಡ ಎಲೆಯ ಮೇಲೆ ನಡೆಸುವ ಉರುಳು ಸೇವೆ)ದ ವಿರುದ್ಧ ಹೇರಿದ್ದ ನಿಷೇಧವನ್ನು ಜಿಲ್ಲಾಡಳಿತ ವಾಪಸ್ ಪಡೆದುಕೊಂಡಿದೆ.
ಇಲ್ಲಿ ನಡೆಯುತ್ತಿರುವ ಮಡೆ ಸ್ನಾನ ಹಿಂದುಳಿದ ಜನಾಂಗದ ಶೋಷಣೆಯಾಗಿದೆ ಎಂದು ಕೆಲವು ವರ್ಷದಿಂದ ಪ್ರಗತಿ ಪರ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತಲಿದ್ದವು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಪುತ್ತೂರಿನ ಸಹಾಯಕ ಆಯುಕ್ತ ಸುಂದರ ಭಟ್, ಮಡೆಸ್ನಾನವನ್ನು ನಿಷೇಧಿಸಿ ನ.27ರಂದು ಆದೇಶ ಹೊರಡಿಸಿದ್ದರು.
ಆದರೆ, ಇದಕ್ಕೆ ಭಕ್ತರ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಡೆಸ್ನಾನ ವಿರುದ್ಧದ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ.28ರಿಂದ 30ರವರೆಗೆ ಚಂಪಾಚಷ್ಠಿ ಜಾತ್ರಾ ಮಹೋತ್ಸವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯಲಿದೆ.

Leave a Reply