ನೂರಸಾಬ ಹೊಸಮನಿಗೆ ರಾಜ್ಯೊತ್ಸವ ಪ್ರಶಸ್ತಿ ಪ್ರದಾನ

ಕೊಪ್ಪಳ,ನ.೨೮: ತಾಲೂಕಿನ ಹೊಸಕನಕಾಪುರ ಗಿಣಗೇರಿ ಭಾಗದ ಹಿರಿಯ ಸಮಾಜ ಸೇವಕ ಹಾಗೂ ಗುತ್ತಿಗೆದಾರ ನೂರಸಾಬ ಇಮಾಮ್‌ಸಾಬ ಹೊಸಮನಿರವರಿಗೆ ಕರ್ನಾಟಕ ಜಾಗೃತಿ ವೇದಿಕೆ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಬೆಂಗಳೂರಿನ ಲಗ್ಗೇರೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಾಗೂ ಪತ್ರಕರ್ತರ ವೇದಿಕೆ ವತಿಯಿಂದ ಅಂತರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ಭವನ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕ ಜಾಗೃತಿ ವೇದಿಕೆ ಹಾಗೂ ಪತ್ರಕರ್ತರ ವೇದಿಕೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡಿದ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಪ್ಪಳ ತಾಲೂಕಿನ ಗಿಣಗೇರಿ ಭಾಗದ ಹೊಸಕನಕಾಪುರ ಗ್ರಾಮದ ನಿವಾಸಿ ನೂರಸಾಬ ಇಮಾಮ್‌ಸಾಬ ಹೊಸಮನಿರವರಿಗೆ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಂದಾನಪ್ಪ, ಮಾಕಳಿ ಪರಮೇಶ, ಗೋವಿಂದೇಗೌಡ, ನಟರಾಜಕುಮಾರ, ಶೇಖರ, ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ಕೆ.ಶಿವರಾಜ, ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ, ಭೋಜರಾಜ ಬಳ್ಳಾರಿ, ವೈ.ಮಂಜುನಾಥ ಮತ್ತೀತರರು ಉಪಸ್ಥಿತರಿದ್ದರು.
ಅಭಿನಂದನೆ : ನೂರಸಾಬ ಹೊಸಮನಿ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗಿಣಗೇರಿ ಭಾಗದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಅಭಿನಂದಿಸಿದ್ದಾರೆ. ನೂರಸಾಬ ಹೋಸಮನಿಯವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಾ ಕೈಲಾದಷ್ಟು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವ ಇವರು ಗಿಣಗೆರಿ ಭಾಗದ ಹಿರಿಯ ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದಾರೆ. ಅಲ್ಲದೆ ಮೊಹ್ಮದ ಪೈಗಂಬರ್ (ಸ.) ಮುಸ್ಲಿಂ ಕಮೀಟಿ ಹೊಸ ಕನಕಾಪೂರ ಗ್ರಾಮದ ಅಧ್ಯಕ್ಷರಾಗಿದ್ದಾರೆ ಜಾಮಿಯಾ ಮಸ್ಜಿದ್ ಗಿಣಗೆರಿ ಕಮೀಟಿ ಸದಸ್ಯರು ಎಸ್.ಡಿ.ಎಮ್.ಸಿ ಕಮೀಟಿಯ ಮಾಜಿ ಅಧ್ಯಕ್ಷರಾಗಿ ಈಗ ಹಾಲಿ ಕಮೀಟಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸತ್ತಿದ್ದಾರೆ.

Please follow and like us:
error