You are here
Home > Koppal News > ಜೂ.೦೩ ರಿಂದ ನೃತ್ಯಾವಧಾನ ಕಾರ್‍ಯಾಗಾರ : ಅರ್ಹ ಅಭ್ಯರ್ಥಿಗಳಿಗೆ ಸೂಚನೆ

ಜೂ.೦೩ ರಿಂದ ನೃತ್ಯಾವಧಾನ ಕಾರ್‍ಯಾಗಾರ : ಅರ್ಹ ಅಭ್ಯರ್ಥಿಗಳಿಗೆ ಸೂಚನೆ

   ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಬರುವ ಜೂ.೦೩ ರಿಂದ ಜೂ.೦೭ ರವರೆಗೆ ಐದು ದಿನಗಳ ಕಾಲ ನೃತ್ಯಾವಧಾನ ಎಂಬ ವಿಶೇಷ ನೃತ್ಯ ಕಾರ್‍ಯಾಗಾರವನ್ನು ಅಕಾಡೆಮಿ ಅಧ್ಯಕ್ಷರಾದ ವೈಜಯಂತಿ ಕಾಶಿ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಮೂಲ್ಕಿಯ ಪುನರೂರಿನ ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೭.೦೦ ರಿಂದ ೮.೩೦ ರವರೆಗೆ ಹಿರಿಯ ಮತ್ತು ಪರಿಣತಿ ಹೊಂದಿರುವ ಗುರುಗಳಾದ ಪದ್ಮಿನಿ ರಾಮಚಂದ್ರನ್-ಭರತ ನಾಟ್ಯ, ಲಕ್ಷ್ಮೀ ರಾಜಾಮಣಿ-ಕೂಚಿಪುಡಿ, ಜಯಂತಿ ಈಶ್ವರ ಪುತ್ತಿ-ಕಥಕ್, ಇಂದಿರಾ ಕಡಾಂಬಿ-ಅಭಿನಯ ಈ ನೃತ್ಯ ಪ್ರಕಾರಗಳಲ್ಲಿ ತರಬೇತಿಯನ್ನು ನೀಡಲಾಗುವುದು. ನೃತ್ಯದ ಜೊತೆಗೆ ಪ್ರತಿ ನಿತ್ಯವೂ ಯೋಗಾಭ್ಯಾಸ, ನೃತ್ಯ ಪಾಠವನ್ನು ಡಾ.ಕರುಣಾ ವಿಜಯೇಂದ್ರ, ನಂದಿನಿ ಈಶ್ವರ್ ಮತ್ತು ಎಮ್.ಎಲ್.ಸಾಮಗ ಅವರಿಂದ ನೀಡಲಾಗುವುದು. ಪ್ರತಿನಿತ್ಯ ಸಂಜೆ ತರಬೇತಿ ನೀಡಿದ ಗುರುಗಳಿಂದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಿಷ್ಯ ೩ ವರ್ಷ ನೃತ್ಯದಲ್ಲಿ ಶಿಕ್ಷಣವನ್ನು ಪಡೆದಿರಬೇಕು ಹಾಗೂ ೧೫ ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಈ ಕಾರ್ಯಾಗಾರ ಉಚಿತವಾಗಿದ್ದು, ಈ ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅಕಾಡೆಮಿ ವತಿಯಿಂದ ಮಾಡಲಾಗುವುದು. ಮೇ.೩೦ ರೊಳಗಾಗಿ ಹೆಸರನ್ನು ಇ-ಮೇಲ್-karnatakasangeeta@gmail.com ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ   ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ ಜೆ.ಸಿ.ರಸ್ತೆ ಬೆಂಗಳೂರು-೫೬೦೦೦೨ ದೂರವಾಣಿ ಸಂಖ್ಯೆ: ೦೮೦-೨೨೨೧೫೦೭೨ ಸಂಪರ್ಕಿಸಬಹುದಾಗಿದೆ .

Leave a Reply

Top