ಖಾಟಿಕ್ ಸಮಾಜದವತಿಯಿಂದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಆಚರಣೆ

 ನಗರದ ಜವಾಹರ್ ರಸ್ತೆಯಲ್ಲಿರುವ ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸೂರ್ಯವಂಶ ಕ್ಷತ್ರೀಯ ನಗರಖಾಟಿಕ್ ಸಮಾಕದವತಿಯಿಂದ ಸಡಗರ ಸಂಭ್ರಮದಿಂದ ಶ್ರೀಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಆಚರಿಸಿದರು.
   ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳರವರು ನರೆವೇರಿಸಿ ಮಾತನಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕವಾಗಿದೆ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚುಒತ್ತುಕೊಡಬೇಕು ವಿಶೇಷವಾಗಿ ಮಹಿಳೆಯರು ಶಿಕ್ಷಣ ಪಡೆದು ತಮ್ಮ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದರು.
  ಮುಖ್ಯ ಅತಿಥಿಗಳಾಗಿ  ಪಾಲ್ಗೊಂಡಿದ್ದ ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಮೊದಲುನಾವೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದ

ಬೇಕು ಅಂದಾಗಮಾತ್ರ ಸಮಗ್ರ ಅಭಿವೃದ್ದಿ ಕಾಣಲು ಸಾಧ್ಯ ಎಂದ ಅವರು ಖಾಟಿಕ್ ಸಮಾಜಬಾಂಧವರು ಶ್ರಮಜೀವಿಯಾಗಿದ್ದಾರೆ ಈ ಸಮಾಜ ಸತೋಮುಖ ಅಭಿವೃದ್ಧಿ ಹೊಂದಬೇಕಾಗಿದೆ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ ಅವರಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅನುಕೂಲ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

    ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ್, ನಗರಸಭಾ ಸದಸ್ಯರಾದ ರೇಣುಕಾ ಪಾಲಾಕ್ಷಪ್ಪ ಪೂಜಾರ, ಮೌಲಾಹುಸೇನ್ ಜಮೇದಾರ, ಆರ‍್ಯರ ಸಮಾಜದ  ಅಧ್ಯಕ್ಷ ಮಾರುತಿ ಕಾರಟಗಿ,  ಮುಖಂಡರಾದ ದೇವರಾಜ, ಭಾರತ್ ಕಲಾಲ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಲ್ಗೊಂಡಿದ್ದರು.
 ಶ್ರೀಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಗರಖಾಟಿಕ್ ಸಮಾಜದ ವತಿಯಿಂದ ಕಲಶ, ಕುಂಭಗಳೊಂದಿಗೆ ಮೆರವಣಿಗೆ ಉದಕಶಾಂತಿ, ವಿಗ್ರಹದ ಜಲಾದಿವಾಸ, ದಾನ್ಯಾದಿವಾಸ, ಸ್ವಸ್ತ ಪುಣ್ಯಾಹವಾಚನ, ದೇವತಾ ಸ್ಥಾಪನೆ ಶ್ರೀಮಹಾಗಣಪತಿ ಹವನ, ಸುಮಂಲೆಯವರಿಂದ ಕಲ, ಕುಂಭ, ಬಾಜಾ ಭಜ್ರಂತ್ರಿ ಮೆರವಣಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪುಜೆ ಹಾಗೂ ಮಹಾ ಮಂಗಳಾರತಿ ನಂತರ ಮಹಾ ಪ್ರಸಾದ ಜರುಗಿತು.
Please follow and like us:
error