ಪ್ರತಿಭೆಯನ್ನು ಗುರುತಿಸಲು ವೇದಿಕೆಗಳ ಅವಶ್ಯವಿದೆ: ಕಟ್ಟಿಮನಿ

ಕೊಪ್ಪಳ:ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ವೇದಿಕೆಗಳ ಅವಶ್ಯವಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ಹೇಳಿದರು.
  ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ನ್ಯೂ ಸ್ಟಾರ್ ಕರಾಟೆ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೇಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರತಿಯೊಂದು ಮಗುವಿನಲ್ಲಿ ವಿಭಿನ್ನವಾದ ಪ್ರತಿಭೆಗಳು ಅಡಗಿದ್ದು,ಅಂಥಹ ಪ್ರತಿಭೆಗೆಗಳು ಹೊರಬರಬೇಕಾದರೆ ವೇದಿಕೆಗಳ ಅಗತ್ಯವಿದೆ.ವೇದಿಕೆಗಳಿಂದ ಮಗುವಿನಲ್ಲಿರುವ ಸೂಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವುದಲ್ಲದೇ ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶವನ್ನು ನೀಡಬಹುದಾಗಿದೆ.ಪ್ರತಿಭೆಗಳಿರುವ ವ್ಯಕ್ತಿಗಳಿಗೆ ಅವಕಾಶವನ್ನು ನೀಡದಿದ್ದರೆ ಅವನಲ್ಲಿರುವ ಪ್ರತಿಭೆಯು ನಶಿಸಿಹೊಗುತ್ತದೆ.ಪ್ರತಿಭೆಯನ್ನು ಪೋಷಿಸಲು ವೇದಿಕೆ ಅವಶ್ಯವಿದೆ ಎಂದು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಮಕ್ಕಳು ಯಾವುದೇ ಕಷ್ಟದಲ್ಲಿ ಚಿಂತೆಯನ್ನು ಮಾಡಬಾರದು ಬದಲಾಗಿ ಚಿಂತನೆಯನ್ನು ಮಾಡಬೇಕು.ಚಿಂತೆಯು ಮನುಷ್ಯನನ್ನು ಹಾಳು ಮಾಡುತ್ತದೆ.ಆದರೆ ಚಿಂತನೆಯು ಕಷ್ಟಗಳಿಗೆ ಪರಿಹಾರವನ್ನು ಹುಡಿಕೊಡುವುದಲ್ಲದೆ ಉನ್ನತ ಮಟ್ಟದ ಸಾಧನೆಯನ್ನು ಮಾಡಲು ಸಹಾಯ ಮಾಡುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಚಿಂತನೆಯ ಕಡೆಯಲ್ಲಿ ಗಮನವನ್ನು ಹರಿಸಬೇಕು.ನ್ಯೂ ಸ್ಟಾರ್ ಕರಾಟೆಯ ಸಂಸ್ಥೆಯು ಕೇವಲ ಕರಾಟೆಯ ತರಬೇತಿಯನ್ನು ನೀಡದೆ,ಸಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ತರಬೇತಿಯನ್ನು ನೀಡುವುದರೊಂದಿಗೆ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
   ನ್ಯೂ ಸ್ಟಾರ್ ಕರಾಟೆ ಸಂಸ್ಥೆಯ ಸಂಸ್ಥಾಪಕರಾದ ರಾಘವೇಂದ್ರ ಅರಕೇರಿ ಮಾತನಾಡುತ್ತ,ನಮ್ಮ ಸಂಸ್ಥೆಯು ಕರಾಟೆಯ ತರಬೇತಿಯ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗಿದೆ.ಅನೇಕ ಸಾಂಸ್ಕೃತಿಕ ಕಾರ್ಯಗಳ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಕೂಡಾ ಮಾಡುತ್ತಿರುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ನ್ಯೂ ಸ್ಟಾರ್ ಕರಾಟೆ ಕ್ಲಬ್‌ನ ತರಬೇತಿದಾರರಾದ ಗಿರೀಶ ಹೊಸಮನಿ ಮಾತನಾಡಿದನು.
 ಕಾರ್ಯಕ್ರಮದಲ್ಲಿ ದೂರದರ್ಶನ ಕಲಾವಿದರಾದ ಶ್ರೀಧರ.ಎಸ್.ದೇವಪುರ,ನ್ಯೂ ಸ್ಟಾರ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ಬೇಟಗೇರಿ,ಗಿಡ-ಮೂಲಿಕೆಯ ವೈಧ್ಯರಾದ ಪರಶುರಾಮ,ಸುಭಾಷ ಕಲಾಲ,ಸುರೇಶ ಕಂಪ್ಲಿ,ಪ್ರಕಾಶ ಅಳವಂಡಿಕರ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಕರಾಟೆ ತರಬೇತಿದಾರರಾದ  ದೀಪಾ.ಪಿ.ಅರಸಿದ್ದಿ ನಿರೂಪಿಸಿದರು.
ಪ್ರಾರ್ಥನೆಯನ್ನು ಕಸ್ತೂರಿ ನಿರ್ವಹಿಸಿದರು.
ಸುಷ್ಮಾ ಸ್ವಾಗತಿಸಿ,ಪ್ರೇಮಾ ವಂದಿಸಿದರು.
Please follow and like us:
error