ದನಕನದೊಡ್ಡಿ: ರೈಲ್ವೇ ಕಾಮಗಾರಿ ತಡೆದು ರೈತರಿಂದ ೩ನೇ ದಿನಕ್ಕೆ ಆಹೋರಾತ್ರಿ ಧರಣಿ

ಧರಣಿ ಸ್ಥಳಕ್ಕೆ ವಿವಿಧ ಸಂಘಟನೆಗಳ ಮುಖಂಡರ ಭೇಟಿ: ಬೆಂಬಲ ಘೋಷಣೆ: ಜಿಲ್ಲಾಧಿಕಾರಿಗೆ ಸವಾಲು.
  ದಿನಾಂಕ ೦೧/೧೨/೨೦೧೪ ರ ಮಧ್ಯಾಹ್ನದಿಂದ ಮುನಿರಾಬಾದ್-ಮಹೆಬೂಬನಗರ ರೈಲ್ವೇ ಯೋಜನೆಯ ಕಾಮಗಾರಿ ನಡೆಯತ್ತಿದ್ದ ದನಕನದೊಡ್ಡಿ  ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ದನಕನದೊಡ್ಡ, ಬೂದಗುಂಪಾ ಮತ್ತು ಅಮರಾಪುರದ ನೂರಾರು ಎಕರೆ ಭೂಮಿಯ ನೂರಾರು ರೈತರು ತಮ್ಮ ಜಾನುವಾರು ಸಹಿತ  ಸ್ಥಳದಲಿಯ್ಲೇ ಅಡುಗೆ ಮಾಡಿಕೊಂಡು, ಕೊರೆಯುವ ಚಳಿಯಲ್ಲಿ ೩ನೇ ದಿನದಲ್ಲಿ ಅಹೋರಾತ್ರಿ ಧರಣಿ ನಡೆಸಿ, ಕಾಮಗಾರಿ ನಿಲ್ಲಿಸಿ ಟಿಪ್ಪರ್, ಜೆಸಿಬಿ, ರೋಲರ್ ಇನ್ನಿತರ ಭಾರೀ ವಾಹನಗಳನ್ನು ತಡೆಯಲಾಗಿದೆ. 
                        ಇಂದು ಜಿಲ್ಲಾಧಿಕಾರಿ ಆರ್,ಆರ್.ಜನ್ನು ರವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲನ್ನು ಆಲಿಸಿ ಸಮಸ್ಯೆ ಪರಿಹರಿಸುವ ಬದಲಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಇವರ ಮೂಲಕ ಪೋಲಿಸರ ಬೆದರಿಕೆ ಒಡ್ಡಿ ಜಿಲ್ಲಾ ಕಛೇರಿಗೆ ಕರೆಯಿಸಿಕೊಂಡು ಸಭೆ ಮಾಡುವ ಹೆಸರಿನಲ್ಲಿ ರೈತರ ಮೇಲೆ ಒತ್ತಡ ಹೇರಿದ ಕ್ರಮವನ್ನು ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಭಾರಧ್ವಜ್ ಅವರು ತೀವ್ರವಾಗಿ ಖಂಡಿಸಿದರು. ಜೊತೆಗೆ ಜನಪ್ರತಿನಿಧಿಗಳಾದ ಶಾಸಕರು ತಾವೇ ಖುದ್ದು ಭೇಟಿ ನೀಡಿ ಜಿಲ್ಲಾಧಿಕಾರಿ, ರೇಲ್ವೇ ಅಧಿಕಾರಿಗಳನ್ನು ಕರೆಯಿಸಿ ರೈತರ ಪರಿಹಾರದ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಅನ್ಯ ಮಾರ್ಗದ ಮೂಲಕ ರೈತರನ್ನು ಓಲೈಸುವ ಪ್ರಯತ್ನ ಮಾಡಿದ್ದು ಅತ್ಯಂತ ಖಂಡನೀಯ ಎಂದು ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ಹಣ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ರೇಲ್ವೇ ಇಲಾಖೆಯ ಮುಖ್ಯ ಇಂಜಿನೀಯರ್‌ಗಳಾದ ಬಾಣಸವಾಡಿ ರೈತರ ಮೇಲೆ ಪೋಲಿಸರ ಮೂಲಕ ದಬ್ಬಾಳಿಕೆ ನಡೆಸಿ ಬೆಳೆದು ನಿಂತ, ಕಟಾವಿಗೆ ಬಂದ ಬೆಳೆಗಳನ್ನು ನಾಶಪಡಿಸಿ ಮಣ್ಣು ಹೇರಿದನು. ಈತನು ಹಾಗೂ ಹೊಸಪೇಟ್ ರ್ಕಾನಿರ್ವಾಹಕ ಇಂಜಿನೀಯರ್ ಶಿವಕುಮಾರ್ ರೈತರ ಮೇಲೆ ಪೋಲೀಸ್ ಪ್ರಕರಣ ದಾಖಲು ಮಾಡುವ ಬೆದರಿಕೆಯೊಡ್ಡುತ್ತಿದ್ದಾನೆ. ಇವರಿಬ್ಬರನ್ನು ಅಮಾನತುಗೊಳಿಸಿ ಗುತ್ತೇದಾರರೊಂದಿಗಿನ ಲಾಭಿ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. 
         ೨೦೦೯ ರಿಂದ ಇಲ್ಲಿಯವರೆಗೆ ರೈತರಿಗೆ ಭೂಪರಿಹಾರ ನೀಡದೇ, ಕನಿಷ್ಟ ಬೆಳೆ ಪರಿಹಾರವನ್ನೂ ನೀಡದೆ ಒಕ್ಕಲಬ್ಬಿಸಿದ್ದರಿಂದ ಭೂಮಿ ಕಳೆದುಕೊಂಡ ರೈತರಿಗೆ ಜೀವನೋಪಾಯ ನಡೆಸಲು ಆಗುತ್ತಿಲ್ಲವೆಂದು, ಕೂಡಲೇ ಭೂಪರಿಹಾರ ನೀಡಬೇಕೆಂದು ಆಗ್ರಹ ಮಾಡಲಾಗಿದೆ. ಇಲ್ಲಿಯ ವರೆಗೆ ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ , ಕೇಂದ್ರದ ಮೇಲೆ ರಾಜ್ಯ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಕಾಲ ನೂಕಿದ್ದರಿಂದ ಬಾದಿತ ಕುಟುಂಬಗಳು ಬೀದಿಪಾಲಾಗುವ  ಹಂತಕ್ಕೆ ತಲುಪಿವೆ. ಮೊದಲ ಹಂತದ ಮತ್ತು ಎರಡನೇ ಹಂತದ ಭೂಸ್ವಾಧೀನ ಪೂರ್ಣಗೊಳಿಸಿದ್ದು. ಜೀವನೋಪಾಯಕ್ಕಾಗಿ ಇದ್ದ ಎಕರೆ ಎರಡು ಎಕರೆ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಮಕ್ಕಳ ಶಾಲಾ ಫೀ ಕಟ್ಟಲು ಆಗುತ್ತಿಲ್ಲ. ರೋಗ ರುಜಿನ ಬಂದರೆ ಚಿಕಿತ್ಸೆ ಪಡೆದುಕೊಳ್ಳಲಾಗುತ್ತಿಲ್ಲ. ಇಲ್ಲಿ ಪೊಲೀಸರನ್ನು ಬಳಸಿ ಕೇಸ್ ದಾಖಲು ಮಾಡುವ ಬೆದರಿಕೆ ಒಡ್ಡಿ ಬಲತ್ಕಾರದ ಮೂಲಕ ಕೆಲಸ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಸಾಕಷ್ಟು ನಿಷ್ಕಾಳಜಿ ಮಾಡುತ್ತಿದ್ದರಿಂದ ರೈತರಿಗೆ ಮತ್ತಷ್ಟು ತೊಂದರೆ ಹೆಚ್ಚಾಗುತ್ತಿದೆ. ನಮಗೆ ೨೦೦೮-೦೯ ರಿಂದ ಇಲ್ಲಿಯ ವರೆಗೆ ಕೊಡಬೇಕಾದ ಬೆಳೆ ಪರಿಹಾರ, ಕೋರ್ಟ್ ಆದೇಶದಂತೆ ಭೂಪರಿಹಾರ, ಭೂಬಾದಿತ ಕುಡುಂಬಕ್ಕೊಂದು ರೈಲ್ವೇ ಇಲಾಖೆಯಲ್ಲಿ ಉದ್ಯೋಗ ನೀಡಬೇಕೆಂದು, ಬಟವಾಡೆ ವಿಳಂಬ ಮಾಡಿದ್ದರಿಂದ ರೈತರು ಮಾಡಿದ ಸಾಲ ತೀರಿಸಲು ಹೆಚ್ಚುವರಿ ಹಣಕ್ಕಾಗಿ ಒತ್ತಾಯಿಸಿ ಅನಿರ್ಧಿಷ್ಟ ಅವಧಿಯ ವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ, ಹಾಗೂ ಯೋಜನೆಗಳ ಹೆಸರಿನಲ್ಲಿ ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಕ್ರಮವನ್ನು ಖಂಡಿಸಿದ ಸಿ.ಪಿ.ಐ(ಎಂಎಲ್) ಜಿಲ್ಲಾ ಕಾರ್ಯದರ್ಶಿಯಾದ ಕೆ.ಬಿ.ಗೋನಾಳ ಕ್ರಾಂತಿಕಾರಿ ವಿದ್ಯಾರ್ಥಿ ಸಂಘದ ಹನುಮೇಶ ಕವಿತಾಳ, ಮಾತನಾಡಿದರು. ಪ್ರತಿಭಟನಾ ಧರಣಿ ನೇತೃತ್ವವನ್ನು ತಾಲೂಕ ಅಧ್ಯಕ್ಷರಾದ ಶಿವಣ್ಣ ಭೀ.ಇಂದರಗಿ, ಕಾರ್ಯದರ್ಶಿ ಗವಿಸಿದ್ದಪ್ಪ ಡೋಳ್ಳಿನ, ಕೆಂಚನಗೌಡ ಪೊ.ಪಾಟೀಲ್, ರೈತರಾದ ಪಕೀರಪ್ಪ ಕುಷ್ಟಗಿ, ಕರಿಯಣ್ಣ ದನಕನದೊಡ್ಡಿ. ಹಸಿರು ಸೇನೆ ಸಂಚಾಲಕರಾದ ನಿಂಗನಗೌಡ ಗ್ಯಾರಂಟಿ, ರೈತರಾದ ಇಂದ್ರೇಶ ಕನಕಗಿರಿ, ಕರಿಯಮ್ಮ, ಮಲ್ಲಮ್ಮ, ಹುಲಿಗೆಮ್ಮ ಸಂಗಟಿ, ಅಂಬಮ್ಮ ಸಂಗ್ಟಿ, ಪಾರ್ವತಮ್ಮ ಎಮ್ಮಿ, ಬೆಟ್ಟದಮ್ಮ ಬೆಣ್ಣಿ ಹಾಗೂ ಇತರರು ಇದ್ದರು. 

Leave a Reply