You are here
Home > Koppal News > ಹೊಸ ಕುರಿ ತಳಿಗಳ ಸಂಶೋಧನೆ – ಚಿದ್ರಿ

ಹೊಸ ಕುರಿ ತಳಿಗಳ ಸಂಶೋಧನೆ – ಚಿದ್ರಿ

ಕೊಪ್ಪಳ :  ಕುರಿ ಮತ್ತು ಉಣ್ಣೆ  ಅಭಿವೃದ್ದಿ ನಿಗಮದಿಂದ ಹಲವಾರು ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಅದನ್ನು ತಲುಪಿಸಲು ಸರಿಯಾದ ವ್ಯವಸ್ಥೆ ಇಲ್ಲ. ಅಲ್ಲದೇ ಕುರಿಗಾರರು ಇನ್ನೂ ಹಳೆಯ ಪದ್ದತಿಯಲ್ಲಿ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಹೊಸ ವೈಜ್ಞಾನಿಕ ಪದ್ದತಿ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಹೇಳಿದರು. 
ಅವರು ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಪಂಚಾಯತಿ, ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಸಹಯೋಗದಲ್ಲಿ ನಡೆದ ಜಿಲ್ಲಾ ಕುರಿಗಾರರ ಸಮಾವೇಶ ತಾಂತ್ರಿಕ ಕಾರ‍್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು. 
ಎಲ್ಲ ಕ್ಷೇತ್ರಗಳಲ್ಲಿಯೂ ತಾಂತ್ರಿಕತೆ ಅಳವಡಿಸಿಕೊಳ್ಳಲಾಗಿದೆ ಹೊಸ ಕುರಿ ತಳಿಗಳ ಅಭಿವೃದ್ದಿ ಮಾಡುವುದರ ಮೂಲಕ ಕುರಿಗಾರರ ಅಭಿವೃದ್ದಿಗಾಗಿ ವಿಶ್ವವಿದ್ಯಾಲಯಗಳಿಗೆ ಸಂಶೋಧನೆ ಮಾಡಲು ಮನವಿ ಮಾಡಿಕೊಳ್ಳಲಾಗಿದೆ .ನಿಗಮದ ಅಧ್ಯಕ್ಷರ ವಿದೇಶ ಯಾತ್ರೆಗೆಂದು ಮೀಸಲಿರಿಸಿದ್ದ ೧೫ ಲಕ್ಷ ರೂಪಾಯಿಗಳಿಂದ ರಾಜ್ಯಾದ್ಯಂತ ಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಾವಣಗೆರೆಯಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾರ‍್ಯಕ್ರಮ ಅಧ್ಯಕ್ಷತೆಯನ್ನು  ಶಾಸಕ ರಾಘವೇಂದ್ರ ಹಿಟ್ನಾಳ ವಹಿಸಿ ಮಾತನಾಡಿ ಸರಕಾರದಿಂದ ದೊರೆಯುವ ಯೋಜನೆಗಳು ಸದುಪಯೋಗ ಪಡೆದುಕೊಳ್ಳಲು ಮತ್ತು ದಾವಣಗೆರೆಯ ಸಮಾವೇಶದಲ್ಲಿ ಭಾಗವಹಿಸಲು ಕರೆನೀಡಿದರು. ಕಾರ‍್ಯಕ್ರಮದಲ್ಲಿ ನಗರಾಭಿವೃದ್ದಿ  ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲುಸಾಬ ಖಾದ್ರಿ, ನಗರಸಭಾ ಅಧ್ಯಕ್ಷ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಡಾ.ಬಿ.ಎಸ್.ಜಂಬಗಿ, ನಾಗರಾಜ ಜುಮ್ಮಣ್ಣನವರ, ಶಿವಪ್ಪ ಜೋಗಿ, ಮಂಜುನಾಥ ಅಬ್ಬಿಗೇರಿ,  ಮಹಾದೇವಿ ಕಂಬ್ಳಿ,ಡಾ.ಸಿ.ಭಾಸ್ಕರ ನಾಯಕ ಪಾಲ್ಗೊಂಡಿದ್ದರು. 

Leave a Reply

Top