You are here
Home > Koppal News > ಸ್ವ ಸಹಾಯ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭ

ಸ್ವ ಸಹಾಯ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭ

ಕುಕನೂರ ವಲಯ ಇವರ ಮಾರ್ಗದರ್ಶನದಲ್ಲಿ ಪರಮಪೂಜ್ಯ ರಾಜಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರ ಕೃಪಾಶಿರ್ವಾದ ಗಳೊಂದಿಗೆ ಬಾನಾಪುರ ಲಕಮಾಪೂರ, ವೀರಾಪುರ ವಿಭಾಗದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ದಿನಾಂಕ ೦೧-೦೮-೨೦೧೩ ರಂದು ಬೆಳಗ್ಗೆ ೧೦: ೩೦ ಕ್ಕೆ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪ ಬಾನಾಪೂರ

ದಲ್ಲಿ ನೆರವೇರಿತು.

ಉದ್ಘಾಟಕರಾಗಿ ಶ್ರೀಮತಿ ಉಮಾ ಶಿವಣ್ಣ ಮುತ್ತಾಳ ಉದ್ಘಾಟಕರಾಗಿ ಆಗಮಿಸಿದ್ದರು, ಬೀಮಣ್ಣ ಕೆ. ಕೋಮಲಾಪೂರ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶಿವರಾಯ ಪ್ರಭು, ನಿರ್ದೇಶಕರು ಶ್ರೀ.ಕ್ಷ.ಧ.ಗ್ರಾ.ಯೋ ರಿ. ಕೊಪ್ಪಳ, ನೀಲಮ್ಮ ಜಕೊಟ್ರಪ್ಪ ಜವಳಿ, ತಾಲೂಕ ಪಂಚಾಯತ ಸದಸ್ಯರು, ಚಂದ್ರಶೇಖರಯ್ಯ ಹಿರೇಮಠ, ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷರು ಹಾಗೂ ಯಲ್ಲಪ್ಪ ಬನ್ನಿಗೋಳ, ಲಕಮಾಪೂರ, ಶ್ರೀ ಗವಿಸಿದ್ದಪ್ಪ ಜಂತ್ಲಿ, ವೀರಾಪೂರ, ಆಗಮಿಸಿದ್ದರು. 
ಯೋಜನಾ ಅಧಿಕಾರಿಯಾದ ಹರೀಶ ಮಾರ್ಗದರ್ಶನದಂತೆ ಮೇಲ್ವಿಚಾರಕರಾದ ಸಮಿತಾ ಎಂ ನಿರೂಪಿಸಿದರು. ಸ್ವಾಗತ ಶಾಂತಮೂರ್ತಿ ನೆರವೇರಿಸಿದರು, ಸಾದನಾ ವರದಿಯನ್ನು ಲಲಿತಾ ಮುದ್ಲಾಪೂರ ವಾಚಿಸಿದರು, ದತ್ತಾತ್ರಯ  ವಂದಿಸಿದರು 

Leave a Reply

Top