ಶಾಲೆ ಬಿಟ್ಟ ಮಕ್ಕಳಿಗೆ ಶಾಲೆಗೆ ಕರೆ ತರಲು ವಿಶೇಷ ದಾಖಲಾತಿ ಆಂದೋಲನ

ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ: ಜು-೧೮    ಕೊಪ್ಪಳ ನಗರದ ಬನ್ನಿಕಟ್ಟಿ ಸರ್ಕಾರಿ ಫ್ರೌಡ್ರಶಾಲೆಯಲ್ಲಿ ಶುಕ್ರವಾರದಂದು ಶಾಲೆ ಬಿಟ್ಟ ಮಕ್ಕಳಿಗೆ ಮತ್ತೇ ಶಾಲೆಗೆ ಸೇರಿಸಲು ಬನ್ನಿಕಟ್ಟಿ ಸರ್ಕಾರಿ ಫ್ರೌಡ ಶಾಲೆ,  ಜನಪ್ರತಿನಿಧಿಗಳು, ಮತ್ತು ಪೋಲೀಸ್ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯರಾದ ಪ್ರಾಣೇಶ ಮಹೇಂದ್ರಕರ್ ಚಾಲನೆ ನೀಡಿದರು. 
ನಂತರ ಮಾತನಾಡಿದ ಅವರು ಪಾಲಕರು ತಮ್ಮ ಬಡತನದಲ್ಲಿ ಮಕ್ಕಳನ್ನು ವಿಧ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುತ್ತಿದ್ದಾg, ಶಾಲೆಯಿಂದ ಹೊರಗೆ ಉಳಿದ ಮಕ್ಕಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದನ್ನು ಸದುಯುಪಯೋಗ ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಿಷ್ಯ ಉಜ್ವಲಗೊಳಿಸಲು ಪಾಲಕರು ಪ್ರಯತ್ನಿಸಭೆಕೆಂದು ಹೇಳಿದರು.
ಆಂದೋಲನ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಪರಮಾನಂದ ಯಾಳಗಿ, ನಗರಸಭಾ ಸದಸ್ಯರು, ಮುಖಂಡರಾದ ನಾಮದೇವ ಜಕ್ಕಲಿ, ಬಸವರಾಜ ನೀರಲಗಿ,ಮುಖ್ಯೋಪಾದ್ಯಾಯ ಕರಿಬಸಪ್ಪ ಪಲ್ಲೇದ, ವೀರಯ್ಯ  ಒಂಟಿಗೋಡಿವ್ಮಠ, ರಾಮರೆಡ್ಡಪ್ಪ, ಜಯರಾಯ ಭೂಸದ, ತಾಹೇರಾಬೇಗಂ ಡಂಬಳ, ಶೋಭಾ ಗಡಾದ, ಶೈಲಜಾ ಗಣಾಚಾರಿ, ಗೋಪಾರಾವ್ ಗುಡಿ,  ಆದರ್ಶ ಶಾಲೆಯ ಆನಂದಕುಮಾರ, ಸೌಜನ್ಯ ವಾಣಿಪುರದ, ವೀರಬಸಪ್ಪ ಗುರುರಾಜ, ಪೋಲಿಸ್ ಇಲಾಖೆಯ ಪ್ರಶಾಂತ, ಎಸ್. ಬಿ ಫಕೀರಪ್ಪ ಎಚ್.ಕೆ, ಹಾಗೂ ಎಸ್. ಡಿ.ಎಮ್ ಸಿ. ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೋಂಡಿದ್ದರು
Please follow and like us:

Leave a Reply