ಸಮಾಜಕ್ಕೆ ನಿಸ್ವಾರ್ಥ ಸೇವೆ ಅವಶ್ಯಕವಾಗಿದೆ ಃ ಸೈಯದ್

ಮಿಲ್ಲತ್ ಶಾಲೆಯಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ 
ಕೊಪ್ಪಳ,ನ.೧೯: ಪ್ರತಿಯೊಬ್ಬ ಮನುಷ್ಯ ಸಮಾಜಕ್ಕೆ ಒಂದಲ್ಲ ಒಂದು ಕೊಡುಗೆ ನೀಡುತ್ತಾ ಜೀವನ ಸಾಗಿಸುತ್ತಾನೆ ಅಂದಾಗ ಮಾತ್ರ ಜೀವನ ಸಾರ್ಥಕ ಎನ್ನಿಸುತ್ತದೆ. ಸಮಾಜಕ್ಕೆ ನಿಸ್ವಾರ್ಥದ ಸೇವೆ ಅವಶ್ಯಕವಾಗಿದೆ ಎಂದು ಸೈಯದ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಹೇಳಿದರು.
ಅವರು ಗುರುವಾರ ನಗರದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಶಾಲೆಯಲ್ಲಿ ಏರ್ಪಡಿಸಿದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮನುಷ್ಯನ ಜೀವನ ಬಹಳ ಚಿಕ್ಕದಾಗಿದೆ. ಅದು ಚೊಕ್ಕದಾಗಬೇಕಾಗಿದೆ ಸ್ವಚ್ಛ ಮತ್ತು ನಿಸ್ವಾರ್ಥದ ಬದುಕು ರೂಢಿಸಿಕೊಳ್ಳಬೇಕಾಗಿದೆ. ಮತ್ತು ನಮ್ಮ ಪರಿಸರವನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ ಎಂದರು.
ಮುಂದುವರಿದು ಮಾತನಾಡಿದ ಅವರು ಎಲ್ಲಾ ರೋಗಗಳ ಮೂಲ ಅಸ್ವಚ್ಛತೆಯಾಗಿದೆ. ಪ್ರತಿಯೊಬ್ಬರು ತಮ್ಮ ಪರಿಸರವನ್ನು ಸ್ವಚ್ಛವಾಗಿಡಬೇಕು ಪ್ರತಿಯೊಂದು ಮನೆಮನೆಗೂ ಒಂದು ಸಸಿ ನೆಟ್ಟು ಅದನ್ನು ಬೆಳಿಸಬೇಕು. ಮನೆಗೊಂದು ಮರ ಬೆಳಸಿ ನಗರವನ್ನು ನಂದವನವನ್ನಾಗಿ ಮಾಡಬೇಕು ಸ್ವಚ್ಛತೆಗಾಗಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದನ್ನು ಸಹಾಕಾರಗೊಳಿಸಬೇಕು. ರಾಷ್ಟ್ರಪಿತ ಗಾಂಧೀಜಿಯವರ ಕನಸು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎಂದು  ಸೈಯದ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಜಿ.ಎಸ್.ಗೋನಾಳ, ವಾತ್ಸಲ್ಯ ಏಜೇನ್ಸಿಯ ವ್ಯವಸ್ಥಾಪಕ ಹನುಮಂತಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ಸಂಸ್ಥೆಯ ಮುಖ್ಯ ಸಲಹೆಗಾರ ಎಂ. ಸಾದಿಕ ಅಲಿ, ಸದಸ್ಯ ಅಬ್ದುಲ್ ಅಜೀಜ, ಆಡಳಿತಾಧಿಕಾರಿ ಸೈಯದ್ ಯಜದಾನಿ ಪಾಷಾ ಖಾದ್ರಿ, ಶಾಲೆಯ ಮುಖ್ಯ ಶಿಕ್ಷಕಿ ನೈನಾಜ್ ಬೇಗಂ ಸೇರಿದಂತೆ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply