ಹಾಲುಮತ ವಿಶ್ವಧರ್ಮದ ಬೇರು -ಬಿ. ಜಿ. ಹುಲಿ

ಕೊಪ್ಪಳ, ಆ. ೦೧ : ಹಾಲುಮತ ಅನಾದಿಯಾಗಿದ್ದು, ಇದಕ್ಕೆ ಆದಿ ಅಂತ್ಯವಿ

ಲ್ಲ. ಇದು ಜಾತಿಯಲ್ಲ, ಬದಲಾಗಿ ಇದು ಒಂದು ಧರ್ಮ. ಪ್ರಪಂಚದಲ್ಲಿರುವ ಹಾಲು ಕುಡಿದು ಬದುಕಿದ ಎಲ್ಲ ಜೀವಿಗಳೂ ಹಾಲುಮತ ಸಮುದಾಯಕ್ಕೆ ಸೇರುತ್ತವೆ. ಆದ್ದರಿಂದ ಹಾಲುಮತ ವಿಶ್ವಧರ್ಮದ ಬೇರು ಎಂದು ನಿವೃತ್ತ ಕನ್ನಡ ಉಪನ್ಯಾಸಕ ಸಾಹಿತಿ ಬಿ. ಜಿ. ಹುಲಿ ಅವರು ಹೇಳಿದ್ದಾರೆ.

ನಗರದ ಬಿ. ಟಿ. ಪಾಟೀಲ ನಗರದ ಪ್ರಥಮದರ್ಜೆ ಗುತ್ತಿಗೆದಾರ ದ್ಯಾಮಣ್ಣ ಜಿ. ಕರಿಗಾರ ಅವರ ಮನೆಯಲ್ಲಿ ಕನಕ ಸಾಂಸ್ಕೃತಿಕ ಪರಿಷತ್ತು ಏರ್ಪಡಿಸಿದ್ದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ‘ಹಾಲುಮತ ಒಂದು ಚಿಂತನೆ’  ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕುರುಬರು ಹಾಲಿನಷ್ಟೆ ಪವಿತ್ರರು. ಹಾಲು ಮೊಸರಾಗಿ, ಮಜ್ಜಿಗೆಯಾಗಿ, ಬೆಣ್ಣೆಯಾಗಿ, ತುಪ್ಪವಾಗಿ ಕೊನೆಗೆ ಪರಿಮಳ ಬೀರುವ ಐದು ಅವಸ್ಥೆಯಲ್ಲಿ ನಮಗೆ ಗೋಚರವಾಗುತ್ತದೆ. ಇಡೀ ಪ್ರಪಂಚದಲ್ಲಿ ಪ್ರಾಣಿ ಮತ್ತು ಪಕ್ಷಿ ಎಂಬ ಎರಡು ವರ್ಗ ಮಾಡಲಾಗುತ್ತದೆ. ಕೀಟ, ಹುಳು-ಹುಪ್ಪಟೆ ತಿಂದು ಜೀವಿಸುವ ಪಕ್ಷಿಗಳ ವರ್ಗಕ್ಕೆ, ಹಾಲುಂಡು ಬದುಕಿದ ಎಲ್ಲ ಪ್ರಾಣಿ ಸಂಕುಲವನ್ನು ಪ್ರಾಣಿಗಳ ವರ್ಗಕ್ಕೆ ಸೇರಿಸಬಹುದು. ಆದ್ದರಿಂದ ಹಾಲು, ಇಡೀ ಮಾನವ ಕುಲವೆ ನನ್ನುದು ಎನ್ನುತ್ತದೆ ಎಂದು ಸಾಹಿತಿ ಬಿ. ಜಿ. ಹುಲಿ ವಿವರಿಸಿದರು.
ಮಾನ್ವಿ ಎಸ್.ಆರ್.ಎಸ್.ವಿ.ಎಸ್. ಪದವಿ ಕಾಲೇಜು ಪ್ರಾಚಾರ್ಯ ಈರಣ್ಣ ಮರ್ಲಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಾಲುಮತ ಸಂಸ್ಕೃತಿಯನ್ನು ನಮ್ಮ ಜನ ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕನಕ ಸಾಂಸ್ಕೃತಿಕ ಪರಿಷತ್ತು ಶ್ರಮಿಸುತ್ತಿದ್ದು, ಪ್ರತಿ ತಿಂಳು ಎರಡು ಕಾರ್ಯಕ್ರಗಳನ್ನು ಆಯೋಜಿಸಿ ಹಾಲುಮತ ಸಂಸ್ಕೃತಿ ದರ್ಶನ ಮಾಡಿಸುತ್ತಿದೆ ಎಂದರು.
      ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಎಚ್. ಮಲ್ಲಾಪೂರ ನೆರವೇರಿಸಿದರು. ಮಾತೋಶ್ರೀ ಭರಮಮ್ಮ ಕರಿಗಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನಕದಳ ಸೇವಾ ಸಮಿತಿಅಧ್ಯಕ್ಷ ಕರಿಯಣ್ಣ ಬೇವಿನಹಳ್ಳಿ, ಕ್ಷೇತ್ರತಜ್ಞ ಅಂದಪ್ಪ ಚಿಲಗೋಡ, ಯಲಬುರ್ಗಾ ಸಿ.ಆರ್.ಪಿ. ಕನಕಪ್ಪ ಕಂಬಳಿ, ಹಪೂರ ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ಕುರಿ, ತಾಲೂಕ ಕನಕ ನೌಕರರ ಸಂಘದ ಕಾರ್ಯದರ್ಶಿ ಬೆಳ್ಳೆಪ್ಪ ಬೆಂಕಿ, ಶಿಕ್ಷಕ ಹನುಂತಪ್ಪ ಕರಿಗಾರ, ನಿವೃತ್ತ ಪ್ರಚಾರ್ಯ ಬಿ. ಜಿ ಕರಿಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 
     ಕನಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಬಸವರಾಜ ಆಕಳವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರ್ತರ್ಕ ವೈ. ಬಿ. ಜೂಡಿ ಹಾಲುಮತ ಸಮಾಚಾರ ಓದಿದರು. ಉಪನ್ಯಾಸಕ ಹನುಮಂತಪ್ಪ ಅಂಡಗಿ ಅತಿಥಿಗಳ ಪರಿಚಯ ಮಾಡಿದರು. ಕು. ಸೌಮ್ಯಶ್ರೀ ಕರಿಗಾರ ಪ್ರಾರ್ಥಿಸಿದರು. ಕನಕ ಸಾಂಸ್ಕೃತಿಕ ಪರಿಷತ್ ಕಾರ್ಯದರ್ಶಿ ಅರುಣಾ ನರೇಂದ್ರ ನಿರ್ವಹಿಸಿದರು. ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ ಸ್ವಾತಿಸಿದರು. ಶಿಕ್ಷಕ ಹನುಮಂತಪ್ಪ ಕರಿಗಾರ ವಂದಿಸಿದರು.

Leave a Reply