ಅನ್ಸಾರಿ ಕಾಂಗ್ರೆಸ್ ಸೇರುವುದಕ್ಕೆ ವಿರೋಧ!

ಗಂಗಾವತಿ : ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಕಾಂಗ್ರೆಸ್ ನ ಒಂದು ಗುಂಪು ವಿರೋಧಿಸುತ್ತಿರುವುದು ನಿನ್ನೆ ಬಹಿರಂಗವಾಗಿದೆ. ಕೊಪ್ಪಳದ ಕಾರ್ಯಕ್ರಮ ಮುಗಿಸಿಕೊಂಡು ರಾಯಚೂರಿಗೆ ಹೋಗುವ ಮಾರ್ಗದಲ್ಲಿ ಆರ್.ವಿ.ದೇಶಪಾಂಡೆ ಇಕ್ಬಾಲ್ ಅನ್ಸಾರಿಯವರ ಮನೆಗೆ ಔತಣಕ್ಕೆ ಹೋಗುವ ಕಾರ್ಯಕ್ರಮ ಇತ್ತು. ಆದರೆ ಮಾರ್ಗ ಮಧ್ಯೆ ದೇಶಪಾಂಡೆಯವರನ್ನು ಸೇರಿಕೊಂಡ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಅನ್ಸಾರಿಯವರ ಮನೆಗೆ ಹೋಗದಂತೆ ತಡೆದರು ಎಂದು ಹೇಳಲಾಗುತ್ತಿದೆ. ಇದರಿಂದ ಗಂಗಾವತಿಗೆ ಹೋಗದೆ ದೇಶಪಾಂಡೆ ನೇರವಾಗಿ ರಾಯಚೂರಿಗೆ ತೆರಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ಅನ್ಸಾರಿಯನ್ನು ವಿರೋಧಿಸುತ್ತಿದ್ದ ಗುಂಪು ಈಗ ಅನ್ಸಾರಿ ಕಾಂಗ್ರೆಸ್ ಸೇರದಂತೆ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಕ್ಬಾಲ್ ಅನ್ಸಾರಿ ಸ್ವಂತ ಬಲದ ಮೇಲೆ ಈಗಿನ ಗ್ರಾಮ ಪಂಚಾಯತ್ ಎಲೆಕ್ಷನ್ ಗಳಲ್ಲಿ ಜಯ ಸಾಧಿಸಿ ತಮ್ಮ ಸಾಮರ್ಥ್ಯವನ್ನು ತೋರಿಸುವುದಾಗಿ ಹೇಳಿದ್ದಾರೆ.

Leave a Reply