ಎಲ್ಲರಿಗೂ ವೇದಿಕೆ ಕೊಟ್ಟ ಸಂಘಟಕ ಬಸವಣ್ಣ – ಗೊಂಡಬಾಳ

 ೧೨ನೇ ಶತಮಾನದಲ್ಲಿ ಸರ್ವರಿಗೂ ಅವಕಾಶ ನೀಡಿ ಮಾತನಾಡಲು, ಹಕ್ಕು ಮಂಡಿಸಲು ವೇದಿಕೆ ನೀಡಿದ ಸಂಘಟಕ ಅಣ್ಣ ಬಸವಣ್ಣ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟ

ರು.

ಅವರು ನಗರದ ಕಿನ್ನಾಳ ರಸ್ತೆಯ ಬಸವ ಮಂಟಪದ ಆವರಣದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೮೧ನೇ ಬಸವ ಜಯಂತಿಯ ನಿಮಿತ್ಯ ಏರ್ಪಡಿಸಿರುವ ಬಸವತತ್ವ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಸವಣ್ಣ ೧೨ ನೇ ಶತಮಾನದಲ್ಲಿ ಮಾಡಿದ ಕ್ರಾಂತಿಯ ಪುನಾವರ್ತನೆಯನ್ನು ಮತ್ತೊಮ್ಮೆ ಮಾಡಲು ಈಗಲೂ ಸಾಧ್ಯವಾಗುತ್ತಿಲ್ಲ, ಅಂಕಿತನಾಮದ ತಕರಾರನ್ನು ಹೊರತುಪಡಿಸಿ, ಮಾತೆ ಮಹಾದೇವಿಯವರು ಬಸವಣ್ಣನ ಸಂದೇಶ ಪ್ರಸಾರದಲ್ಲಿ ವಿಶ್ವದಲ್ಲಿಯೇ ಮುಂದಿದ್ದಾರೆ, ಅವರು ಎಲ್ಲ ಶರಣರನ್ನೂ ಕೂಡಿಸಿಕೊಂಡು ಬಸವಧರ್ಮ ಕಟ್ಟಬೇಕು ಎಂದ ಅವರು, ಆಯ್ದಕ್ಕಿ ಲಕ್ಕಮ್ಮ ಎಂಬ ಅತ್ಯಂತ ಸಾಮಾನ್ಯ ಗೃಹಿಣಿಯೂ ಸಹ ಕಾಯಕವೇ ಕೈಲಾಸ ಕಾಯಕನಿರತನಾದೊಡೆ ಹರಗುರು ಜಂಗಮರನ್ನೂ ಮರೆಯಬೇಕು, ಶುದ್ಧವಾಗಿ ಕಾಯಕ ಮಾಡಬೇಕು ಎಂದು ಕರೆನೀಡುತ್ತಾಳೆ, ಅತಿಯಾಸೆ ಇರಕೂಡದು ಎಂದು ಸ್ವತಃ ಗಂಡನಿಗೂ ಬುದ್ಧಿ ಹೇಳುವಂತಹ ಹೆಣ್ಣುಮಕ್ಕಳನ್ನು ಇಂದು ನೋಡಲು ಸಿಗುವದು ಅಪರೂಪ. ನಮ್ಮ ಮಠಮಾನ್ಯಗಳು ಇಂದು ಕೇವಲ ಗುಡಿಗೋಪುರ ಕಟ್ಟುವ, ಆಸ್ತಿ ಮಾಡುವ ಕಾರ್ಯದಲ್ಲಿಯೇ ಮಗ್ನವಾಗಿರುವದರಿಂದ ಧರ್ಮ ಕಟ್ಟುವ ಕೆಲಸವನ್ನು ಮರೆಯುತ್ತಿದ್ದಾರೆ, ಮಠಗಳು ಆ ನಿಟ್ಟಿನಲ್ಲಿ ಚಿಂತನೆ ಮಾಡುವದು ಇಂದಿನ ತುರ್ತು ಅಗತ್ಯವೆಂದು ಹೇಳಿದರು.
ಕಾರ್ಯಕ್ರಮವನ್ನು ಗಂಗಾವತಿ ಜಿ.ಹೆಚ್.ಎನ್.ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಓಂಕಾರೆಪ್ಪ ಬಳ್ಳೊಳ್ಳಿ ಉದ್ಘಾಟಿಸಿ ಮಾರ್ಮಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಸವದಳದ ಕೋಶಾಧ್ಯಕ್ಷರಾದ ಕೊಟ್ರಪ್ಪ ಶೇಡದ ವಹಿಸಿಕೊಂಡಿದ್ದರು. ಮಾಜಿ ಜಿ. ಪಂ. ಸದಸ್ಯ ಶರಣಪ್ಪಗೌಡ್ರ ಪಾಟೀಲ ವೀರಾಪೂರ ಷಟಸ್ಥಲ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿತಳಾಗಿ ವೆಂಕನಗೌಡ್ರ ಪಾಟೀಲ ಹೊರತಟ್ನಾಳ, ಜಯಕರ್ನಾಟಕ ಸಂಘಟನೆಯ ಉತ್ತರಕರ್ನಾಟಕ ಕಾರ್ಯಾಧ್ಯಕ್ಷ ವಿಜಯಕುಮಾರ ಕವಲೂರ, ಕೂಡಲಸಂಗಮ ಬಸವಧರ್ಮ ಪೀಠದ ಗಣನಾಯಕ ಕೆ. ವೀರಣ್ಣ ಲಿಂಗಾಯತ್ ಇತರರು ವೇದಿಕೆ ಮೇಲಿದ್ದರು.
ಚೈತ್ರಾ ಈಶ್ವರ ಲಿಂಗಾಯತ್ ವಚನ ಗಾಯನ ನಡೆಸಿಕೊಟ್ಟರು, ಕೆ. ವಿಜಯಲಕ್ಷ್ಮೀ ಈಶ್ವರ ಲಿಂಗಾಯತ್ ರವರು ನೆನಹು ಎಂಬ ಗಾಯನ ಹಾಗೂ ಬಸವತತ್ವ ತರಬೇತಿ ಕಮ್ಮಟದ ಮೊದಲನೆ ದಿನದ ಕಾರ್ಯಕ್ರಮ ನಡೆಸಿಕೊಟ್ಟರು. ಬಸವದಳದ ಕಾರ್ಯದರ್ಶಿ ಶಿವಬಸಯ್ಯ ವೀರಾಪೂರ ಲಿಂಗದೇವ ನಿಷ್ಠೆ ಕುರಿತು ಮಾತನಾಡಿದರು, ಗುರುರಾಜ ಪಾಟೀಲ ಶರಣ ಮೇಳ ನಿಷ್ಠೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಾಲಕ ಬಸವಣ್ಣನವರ ದೇವಪ್ರಜ್ಞೆ ಎಂಬ ರೂಪಕವನ್ನು ಕೆ, ವಿಜಯಲಕ್ಷ್ಮೀಯವರ ಸಾರಥ್ಯದಲ್ಲಿ ಮನಮೋಹಕವಾಗಿ ಅಭಿನಯಿಸಿದರು.
ರುದ್ರೇಶ ಗೋಸಿ ಸ್ವಾಗತಿಸಿದರು, ಲಿಂಗಾಯತ ಧರ್ಮ ಮಹಸಭಾ ಅಧ್ಯಕ್ಷ ಸುಂಕಪ್ಪ ಅಮರಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ವೀರಣ್ಣ ಡೊಳ್ಳಿನ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಅಮರೇಗೌಡ್ರ ಪಾಟೀಲ ವಂದಿಸಿದರು. ಈ ಕಾರ್ಯಕ್ರಮವೂ ಮೇ ೨ ವರೆಗೆ ನಡೆಯುತ್ತಿದ್ದು, ಬೆಳಿಗ್ಗೆ ೫ ರಿಂದ ೮ ವರೆಗೆ ಬಸವ ಚಿಂತನ ಪ್ರಭೆ ಕಾರ್ಯಕ್ರಮ ಹಾಗೂ ಸಂಜೆ ೬ ರಿಮದ ೮ ವರೆಗೆ ಗೋಷ್ಠಿಗಳು ನಡೆಯುತ್ತವೆ.
Please follow and like us:

Related posts

Leave a Comment