ಬಸವ ಶರಣಮೇಳದಲ್ಲಿ ಕೆ.ಎಂ.ಸಯ್ಯದ್‌ಗೆ ಸನ್ಮಾನ


ಕೊಪ್ಪಳ ೨೭ : ನಗರದ ಬಸವ ಶರಣಮೇಳದಲ್ಲಿ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ರವರನ್ನು ಶರಣೆ ಗಂಗಾಮಾತೆ ಸನ್ಮಾನಿಸಿ ಗೌರವಿಸಿದರು.
    ಅವರು ರವಿವಾರದಂದು ನಗರದ ಕಿನ್ನಾಳ ರಸ್ತೆಯ ಬಸವ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಶರಣೆ ಗಂಗಾಮಾತೆ ಮಾತನಾಡಿ ಕೆ.ಎಂ.ಸಯ್ಯದ್ ಅವರು ಸಾಮಾಜಿಕ ಸೇವೆ, ಉಚಿತ ನೀರು ಟ್ಯಾಂಕರ್ ಮೂಲಕ ಸಾಮೂಹಿಕ ವಿವಾಹ, ಜಾತ್ರೆ, ಉರುಸು ಸೇರಿದಂತೆ ಬಡವರ ಮದುವೆ ಸಮಾರಂಭಕ್ಕೂ ನೀರು ಸರಬರಾಜು ಮಾಡುತ್ತಾರೆ ಅವರ ಸೇವೆ ಶ್ಲಾಘನೀಯ ಇದನ್ನು ಗಮನಿಸಿ ದೆಹಲಿಯ ಇಂದಿರಾ ಗಾಂಧಿ ಪ್ರೀಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದರು.
    ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ಮಹಾಂತೇಶ ಮಲ್ಲನ ಗೌಡರ, ಜೆ.ಡಿ.ಎಸ್. ಮುಖಂಡ ಪ್ರದೀಪ್ ಗೌಡ ಮಾಲಿಪಾಟೀಲ್, ಬಸವದಳದ ವೀರಣ್ಣ ಕೊರ್ಲಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error