ರೋಹಿತ್ ವೇಮುಲನ್ ಆತ್ಮಹತ್ಯೆ ಖಂಡಿಸಿ ಧರಣಿ.

ಕೊಪ್ಪಳ-25- ರೋಹಿತ್ ವೇಮುಲನ್ ಆತ್ಮಹತ್ಯೆ ಖಂಡಿಸಿ ಗೌತಮ ಬುದ್ದ ಸೇವಾ ಸಮಿತಿ ವತಿಯಿಂದ   ಸಾಂಕೇತಿಕವಾಗಿ ನಗರದ ಅಂಭೇಡ್ಕರ ಸರ್ಕಲ್‌ನಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ರೋಹಿತ್ ವೇಮುಲನ್ ಆತ್ಮಕ್ಕೆ ಶಾಂತಿ ಕೋರಿ ಪ್ರತಿಭಟಣೆ ಆರಂಬಿಸಲಾಯಿತು.ಕೇಂದ್ರ ಸಚಿವೆಯಾದ ಸ್ಮೃತಿ ಇರಾಣಿ ದತ್ತಾತ್ರೆಯ ಭಮಡಾರಿ ವಿರುದ್ದ ಘೋಷಣೆ ಕೂಗುವುದರ ಮೂಲಕ ಆಕ್ರೋಷ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ರಮೇಶ ಬೆಲ್ಲದ, ಜಿಲ್ಲಾ
ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕರಾದ ಮಹಾಂತೇಶ ಚಾಕ್ರಿ, ಮಂಜುನಾಥ ಎಮ್ ದೊಡ್ಡಮನಿ,
ಗೌತಮ ಬಳಾಗಾನೂರ, ರಾಘವೇಂದ್ರ ಚಾಕ್ರೆ, ರಾಘು ಬೆಲ್ಲದ, ಗೋಪಿನಾಥ ಬನ್ನಿಕೊಪ್ಪ, 
ಇನ್ನಿತರರು ಉಪಸ್ಥಿತರಿದ್ದರು.

Please follow and like us:
error