ಕನಕಗಿರಿ ಉತ್ಸವ ಗ್ಯಾರಂಟಿ : ಶಿವರಾಜ್ ತಂಗಡಗಿ

ಕನಕಗಿರಿ: ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಮೊದಲಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಚಿವ,ಶಾಸಕ ಶಿವರಾಜ್ ತಂಗಡಗಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಮುಂದಿನ ದಿನಗಳಲ್ಲಿ ಕನಕಗಿರಿ ಕ್ಷೇತ್ರ ರಾಜ್ಯದಲ್ಲಿಯೇ ಗಮನ ಸೆಳೆಯಲಿದೆ ಎಂದು ತಂಗಡಗಿ ಹೇಳಿದರು. ಕನಕಗಿರಿ ಉತ್ಸವವನ್ನು ಮುಂದೂಡಲಾಗುವುದಿಲ್ಲ. ಅದು ಯೋಜನೆಯಂತೆ ನಡೆಯಲಿದೆ ಎಂದು ಹೇಳಿದರು. ದೇವಸ್ಥಾನಕ್ಕೆ ಬೇಟಿ ನೀಡಿದ ತಂಗಡಗಿ ತಮ್ಮ ಹರಕೆ ತೀರಿಸಿ ದೇವರ ಆಶೀರ್ವಾದದಿಂದ ತಮಗೆ ನ್ಯಾಯ ದೊರೆತಿದೆ ಎಂದು ಹೇಳಿದರು.
Please follow and like us:
error