ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ವಾಸ್ಕೋ-ಹೌರಾ ಎಕ್ಸ್‌ಪ್ರೆಸ್ ರೈಲು ನಿಲುಗಡೆ

ಕೊಪ್ಪಳ ಸೆ. : ಕೊಪ್ಪಳ ನಾಗರಿಕರ ಬಹುದಿನಗಳಿಂದ ಹೌರಾ-ವಾಸ್ಕೋ ಎಕ್ಸ್‌ಪ್ರೆಸ್ ರೈಲು ನಿಲುಗಡೆಯ ಕನಸು ಸೆ. ೧೫ ರಂದು ನನಸಾಗಿದೆ.  ಗುರುವಾರ ಕೊಪ್ಪಳಕ್ಕೆ ಮಧ್ಯಾಹ್ನ ೨-೨೦ ಕ್ಕೆ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈಲನ್ನು ರೈಲ್ವೆ ಸ್ಟೇಷನ್ ವ್ಯವಸ್ಥಾಪಕ ಪಿ.ಟಿ. ನಾಯಕ್, ರೈಲ್ವೆ ಸಲಹಾ ಸಮಿತಿ ಸದಸ್ಯ ಭವರಲಾಲ್ ಜೈನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ವ್ಯಾಪಾರಸ್ಥರು, ನಾಗರಿಕರು ಬರಮಾಡಿಕೊಂಡು, ರೈಲಿಗೆ ಪೂಜೆ ನೆರವೇರಿಸಿದರು.
  ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೌರಾ-ವಾಸ್ಕೋ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಿಂದಾಗಿ ಮುಂಬೈ, ಚೆನ್ನೈ, ಮುಂತಾದೆಡೆ ಪ್ರಯಾಣಿಸಲು ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸಿದಂತಾಗಿದೆ.
Please follow and like us:
error