’ಉತ್ತಮ ಸಹಕಾರ ಸಂಘ’ ಪ್ರಶಸ್ತಿ

ಭಾರತ ಸಂಚಾರ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘ ನಿ. ಕೊಪ್ಪಳ ಸಂಘಕ್ಕೆ
’ಉತ್ತಮ ಸಹಕಾರ ಸಂಘ’ ಪ್ರಶಸ್ತಿ
ಕೊಪ್ಪಳ : ಇತ್ತೀಚಿಗೆ ನಡೆದ ೬೦ ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೧೩ ರಲ್ಲಿ ’ಭಾರತ ಸಂಚಾರ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘ ನಿ. ಕೊಪ್ಪಳ ಸಂಘವು ’ಉತ್ತಮ ಸಹಕಾರ ಸಂಘ’ ಪ್ರಶಸ್ತಿಗೆ ಪಾತ್ರವಾಗಿದೆ. ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕ ಮಂಡಳಿಯವರಿಗೆ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಆಜ್ ಸಚಿವ ಎಚ್.ಕೆ. ಪಾಟೀಲರು ಈ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ ಎಂದು ಭಾರತ ಸಂಚಾರ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘ ನಿ. ಕೊಪ್ಪಳದ ಅಧ್ಯಕ್ಷ ಬಿ.ಎಸ್. ಆಲೂರು  ತಿಳಿಸಿದ್ದಾರೆ.
Please follow and like us:
error