ಕನ್ನಡ ರಾಜ್ಯೋತ್ಸವ ಅ.೧೯ ರಂದು ಪೂರ್ವಾಭಾವಿ ಸಭೆ.

ಕೊಪ್ಪಳ, ಅ.೧೫ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ನವೆಂಬರ್ ೦೧ ರಂದು ಜರುಗಲಿರುವ ಕನ್ನಡ ರಾಜ್ಯೋತ್ಸವ-೨೦೧೫ ರ ಆಚರಣೆ ಕುರಿತು ಪೂರ್ವಾಭಾವಿ ಸಭೆಯನ್ನು ಅ.೧೯ ರಂದು ಸಂಜೆ ೪.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಈ ಹಿಂದೆ ಅ.೧೪ ರಂದು ಏರ್ಪಡಿಸಲಾಗಿದ್ದ ಸಭೆಯು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದ್ದು, ಸಭೆಯನ್ನು ಅ.೧೯ ರಂದು ಸಂಜೆ ೪.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಂಬಂಧಪಟ್ಟ ಎಲ್ಲ ಇಲಾಖೆಗಳ ಮುಖ್ಯಸ್ಥರು  ಕನ್ನಡ ರಾಜ್ಯೋತ್ಸವ ಭಾಷಣಕ್ಕಾಗಿ ತಮ್ಮ ಇಲಾಖೆಯ ಅಭಿವೃದ್ಧಿ ಮಾಹಿತಿ ಟಿಪ್ಪಣಿಯ (ಒಂದು ಪುಟಕ್ಕೆ ಮೀರದಂತೆ)  ಹಾರ್ಡ್ ಮತ್ತು ಸಾಫ್ಟ್ ಕಾಪಿಯೊಂದಿಗೆ ಸಭೆಗೆ ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಡಾ|| ಪ್ರವೀಣ ಕುಮಾರ ಜಿ.ಎಲ್. ತಿಳಿಸಿದ್ದಾರೆ.
Please follow and like us:
error

Related posts

Leave a Comment