You are here
Home > Koppal News > ಹೊಸ ಗ್ರಾಮ ಪಂಚಾಯತಿಗಳ ರಚನೆಗೆ ಕರಡು ಅಧಿಸೂಚನೆ ಪ್ರಕಟ : ಆಕ್ಷೇಪಣೆಗಳಿಗೆ ಆಹ್ವಾನ

ಹೊಸ ಗ್ರಾಮ ಪಂಚಾಯತಿಗಳ ರಚನೆಗೆ ಕರಡು ಅಧಿಸೂಚನೆ ಪ್ರಕಟ : ಆಕ್ಷೇಪಣೆಗಳಿಗೆ ಆಹ್ವಾನ

 ಸರ್ಕಾರದ ಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ಹೊಸ ಗ್ರಾಮ ಪಂಚಾಯತಿಗಳ ರಚನೆಗಾಗಿ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣೆ, ವಿಭಜನೆ ಕುರಿತಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
  ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಹೊಸದಾಗಿ ೦೪ ಗ್ರಾ.ಪಂ. ಗಳನ್ನು ರಚಿಸಲಾಗುತ್ತಿದ್ದು, ಅದೇ ರೀತಿ ಗಂಗಾವತಿ- ೦೬, ಯಲಬುರ್ಗಾ- ೦೪ ಮತ್ತು ಕುಷ್ಟಗಿ ತಾಲೂಕಿನಲ್ಲಿ ೦೯ ಗ್ರಾ.ಪಂ. ಸೇರಿದಂತೆ ಒಟ್ಟು ೨೩ ನೂತನ ಗ್ರಾ.ಪಂ ಗಳ ರಚನೆಯಾಗಲಿದೆ. ತಾಲೂಕುವಾರು ಬಾಧಿತ ಗ್ರಾಮ ಪಂಚಾಯತಿ ಮತ್ತು ಹೊಸದಾಗಿ ರಚಿಸಲಾಗುವ ಗ್ರಾಮ ಪಂಚಾಯತಿಗಳ ಹೆಸರು ಹಾಗೂ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರ ಇಂತಿದೆ.
ಕೊಪ್ಪಳ ತಾಲೂಕು : ಗಿಣಿಗೇರಾ (ಬಾಧಿತ)- ಗಿಣಿಗೇರಾ, ಕನಕಾಪುರ.  ಹಾಲವರ್ತಿ (ಹೊಸದು)- ಹಾಲವರ್ತಿ, ಬಸಾಪುರ, ಕಿಡದಾಳ, ಕುಟಗನಳ್ಳಿ.  ಕುಣಿಕೇರಿ (ಬಾಧಿತ)- ಕುಣಿಕೇರಿ, ಲಾಚನಕೇರಿ.  ಮಾದಿನೂರು (ಬಾಧಿತ)- ಮಾದಿನೂರು, ದೇವಲಾಪುರ, ಮುದ್ಲಾಪುರ.  ಕಲಕೇರಾ (ಹೊಸದು)- ಕಲಕೇರಾ, ಬುಡಶೆಟ್ನಾಳ, ಹಟ್ಟಿ, ತಾಳಕನಕಾಪುರ.  ಲೇಬಗೇರಾ (ಬಾಧಿತ)- ಲೇಬಗೇರಾ, ಭೀಮನೂರು, ಹನುಮನಹಳ್ಳಿ, ಕಾಮನೂರು, ಸಂಗಾಪುರ.  ಹಿಟ್ನಾಳ (ಬಾಧಿತ)- ಹಿಟ್ನಾಳ, ಕಂಪಸಾಗರ.  ಬೇವಿನಹಳ್ಳಿ (ಹೊಸದು)- ಬೇವಿನಹಳ್ಳಿ, ಶಹಪುರ, ಲಿಂಗದಹಳ್ಳಿ, ರುದ್ರಾಪುರ.  ಅಗಳಕೇರಾ (ಬಾಧಿತ)- ಅಗಳಕೇರಾ, ಬುಳ್ಳಾಪುರ.  ಗುಳದಳ್ಳಿ (ಬಾಧಿತ)- ಗುಳದಳ್ಳಿ, ಗಬ್ಬೂರು, ಕೆರೆಹಳ್ಳಿ.  ಇಂದರಗಿ (ಬಾಧಿತ)- ಇಂದರಗಿ.  ವಣಬಳ್ಳಾರಿ (ಹೊಸದು)- ವಣಬಳ್ಳಾರಿ, ಅರಿಶಿನಕೇರಿ, ಮೆಗಲ್, ಜಿನ್ನಾಪುರ.  ಹಾಸಗಲ್ (ಬಾಧಿತ)- ಹಾಸಗಲ್, ಚಿಕ್ಕಸುಳಿಕೇರಿ, ಚಿಲಕಮುಖಿ, ಗೋಸಲದೊಡ್ಡಿ, ಹಿರೇಸುಳಿಕೇರಿ, ಹೊಸೂರು, ಸಿಡಗನಹಳ್ಳಿ.  ಇರಕಲ್ಲಗಡ (ಬಾಧಿತ)- ಇರಕಲ್ಲಗಡ, ಚಾಮಲಾಪುರ, ಹನುಮಹಟ್ಟಿ, ಕೊಡದಾಳ, ವಡ್ಡರಹಟ್ಟಿ, ಯಲಮಗೇರಾ.
ಗಂಗಾವತಿ ತಾಲೂಕು : ಚಿಕ್ಕಡಂಕನಕಲ್ (ಬಾಧಿತ)- ಚಿಕ್ಕಡಂಕನಕಲ್, ಚಿರ್ಚನಗುಡ್ಡ, ಹಿರೇಡಂಕನಕಲ್, ಜೀರಾಳ (ಹೊಸದು)- ಜೀರಾಳ, ಜೀರಾಳ ಕಲ್ಗುಡಿ.  ಢಣಾಪುರ (ಬಾಧಿತ)- ಢಣಾಪುರ, ಹೆಬ್ಬಾಳ.  ಜಂಗಮರ ಕಲ್ಗುಡಿ (ಹೊಸದು)- ಜಂಗಮರ ಕಲ್ಗುಡಿ.  ಸಿದ್ದಾಪುರ (ಬಾಧಿತ)- ಸಿದ್ದಾಪುರ, ಕೃಷ್ಣಾಪುರ.  ಬರಗೂರು (ಹೊಸದು)- ಬರಗೂರು, ಕೊಟ್ನೇಕಲ್, ಕುಂಟೋಜಿ.  ಮುಸ್ಟೂರು (ಬಾಧಿತ)- ಮುಸ್ಟೂರು.  ಬೇವಿನಾಳ (ಬಾಧಿತ)- ಬೇವಿನಾಳ, ಪನ್ನಾಪುರ.  ಮೈಲಾಪುರ (ಹೊಸದು)- ಮೈಲಾಪುರ, ಗುಡೂರು, ಸೋಮನಾಳ.  ಚಳ್ಳೂರು (ಬಾಧಿತ)- ಚಳ್ಳೂರು.  ಆನೆಗುಂದಿ (ಬಾಧಿತ)- ಆನೆಗುಂದಿ ಬಸವನದುರ್ಗ, ಕೃಷ್ಣಾಪುರ ಡಗ್ಗಿ(ಡಿ).  ಸಾಣಾಪುರ (ಹೊಸದು)- ಸಾನಾಪುರ, ತಿಮಲಾಪುರ, ಅಂಜನಹಳ್ಳಿ, ವಿರುಪಾಪುರಗಡ್ಡಿ, ಹನುಮನಹಳ್ಳಿ, ಚಿಕ್ಕರಾಂಪೂರ, ಕರಿಯಮ್ಮನಗಡ್ಡಿ.  ಸಂಗಾಪುರ (ಬಾಧಿತ)- ಸಂಗಾಪುರ, ರಾಮದುರ್ಗ, ರಾಜಾಪುರ (ಡಿ), ಸಿಂಗನಗುಂಡ, ವಿಪ್ರ.  ಗೌರಿಪುರ (ಬಾಧಿತ)- ಗೌರಿಪುರ, ದೇವಲಾಪುರ, ಚಿಕ್ಕವಡ್ರಕಲ್, ಅಡವಿಭಾವಿ.  ಬಸರಿಹಾಳ (ಹೊಸದು)- ಬಸರಿಹಾಳ, ಹುಲಸನಹಳ್ಳಿ, ಸೋಮಸಾಗರ, ಬೈಲಕ್ಕಂಪುರ.  ಹುಲಿಹೈದರ (ಬಾಧಿತ)- ಹುಲಿಹೈದರ, ಹನುಮನಾಳ, ಕನಕಾಪುರ, ಲಾಯದುಣಸಿ, ವರ್ಣಖೇಡಾ, ಹೊಸಗುಡ್ಡ.
ಯಲಬುರ್ಗಾ ತಾಲೂಕು : ಬಂಡಿ (ಬಾಧಿತ)- ಬಂಡಿ, ಬಸಾಪುರ, ಬೂನಕೊಪ್ಪ, ಹಗೇದಾಳ, ಜೂಲಕಟ್ಟಿ, ಕಡಬಲಕಟ್ಟಿ.  ತುಮ್ಮರಗುದ್ದಿ (ಹೊಸದು)- ತುಮ್ಮರಗುದ್ದಿ, ಮಾರನಾಳ, ದಮ್ಮೂರು.  ಗೆದಿಗೇರಿ (ಬಾಧಿತ)- ಗೆದಿಗೇರಿ, ವೀರಾಪುರ, ಹನಮಾಪುರ, ಹುಲೇಗುಡ್ಡ, ಲಗಳೂರ, ಮದ್ಲೂರ, ತಲ್ಲೂರ.  ವಜ್ರಬಂಡಿ (ಬಾಧಿತ)- ವಜ್ರಬಂಡಿ, ಚಿಕ್ಕಬನ್ನಿಗೋಳ, ಜಿ.ಜರಕುಂಟಿ, ಕೋನಸಾಗರ, ಸಾಲಭಾವಿ.  ಕುದರಿಮೋತಿ (ಬಾಧಿತ)- ಕುದರಿಮೋತಿ, ಭಯರನಾಯಕನಹಳ್ಳಿ, ಚೆಂಡಿನಾಳ.  ನೆಲಜೇರಿ (ಹೊಸದು)- ನೆಲಜೇರಿ, ವಟಪರ್ವಿ, ಮ್ಯಾದನೇರಿ.  ಬೇವೂರು (ಬಾಧಿತ)- ಬೇವೂರು, ಕೋಳಿಹಾಳ.  ತಾಳಕೇರಿ (ಬಾಧಿತ)- ತಾಳಕೇರಿ, ಕಲ್ಲಭಾವಿ, ಮರಕಟ್.  ಬೋದೂರ (ಹೊಸದು)- ಬೋದೂರ, ಗುಳೆ, ಚೌಡಾಪುರ, ಗುಂಟಮಡು, ಶಿಡ್ಲಭಾವಿ, ವನಜಭಾವಿ, ಚಿಕ್ಕಮನ್ನಾಪುರ.  ಮಾಟಲದಿನ್ನಿ (ಬಾಧಿತ)- ಮಾಟಲದಿನ್ನಿ, ಎನ್.ಜರಕುಂಟಿ, ಪುಟಗಮರಿ, ಯಡ್ಡೋಣಿ, ಬುಡಕುಂಟಿ.  ಗಾಣಧಾಳ (ಬಾಧಿತ)- ಗಾಣಧಾಳ, ಹಿರೇವಡ್ರಕಲ್, ಕಟಗಿಹಳ್ಳಿ, ತಿಪ್ಪನಾಳ.  ಶಿರೂರ (ಬಾಧಿತ)- ಶಿರೂರ, ಬೆದವಟ್ಟಿ, ಚಂಡೂರು, ಯಡಿಯಾಪುರ, ಅರಕೇರಿ.  ಹಿರೇಬೀಡನಾಳ (ಬಾಧಿತ)- ಹಿರೇಬಿಡನಾಳ, ಚಿಕ್ಕಬೀಡನಾಳ, ಕದ್ರಳ್ಳಿ, ಮುತ್ತಾಳ, ಹೊನ್ನುಣಸಿ.  ಬೆಣಕಲ್ (ಬಾಧಿತ)- ಬೆಣಕಲ್, ವೀರಾಪುರ.  ಮಸಬಹಂಚಿನಾಳ (ಹೊಸದು)- ಮಸಬಹಂಚಿನಾಳ, ನಿಟ್ಟಾಲಿ, ಗಾವರಾಳ, ಗೊರ್ಲೆಕೊಪ್ಪ.  ಇಟಗಿ (ಬಾಧಿತ)- ಇಟಗಿ, ಮನ್ನಾಪುರ.  ಭಾನಾಪುರ (ಬಾಧಿತ)- ಭಾನಾಪುರ, ಚಿತ್ತಾಪುರ, ಕೋಮಲಾಪುರ, ಲಕಮಾಪುರ, ತಳಬಾಳ.  
ಕುಷ್ಟಗಿ ತಾಲೂಕು : ಹಿರೇಬನ್ನಿಗೋಳ (ಬಾಧಿತ)- ಹಿರೇಬನ್ನಿಗೋಳ, ಚಿಕ್ಕನಂದಿಹಾಳ, ಯಲಬುರ್ತಿ.  ಕೊರಡಕೇರಾ (ಬಾಧಿತ)- ಕೊರಡಕೇರಾ, ಬ್ಯಾಲಿಹಾಳ, ಗೊರವರಬೆಂಚಮಟ್ಟಿ, ಮದಲಗಟ್ಟಿ, ಶಾಖಾಪುರ.  ಹಿರೇನಂದಿಹಾಳ (ಹೊಸದು)- ಹಿರೇನಂದಿಹಾಳ, ದೊಣ್ಣೆಗುಡ್ಡ, ಬಿಸನಾಳ, ಕನಕೊಪ್ಪ, ಬಿಂಗಿಕೊಪ್ಪ (ಬೇ), ಪರಸಾಪುರ.  ಕಾಟಾಪುರ (ಬಾಧಿತ)- ಕಾಟಾಪುರ, ಬಂಡರಗಲ್ಲ.  ಅಂಟರಠಾಣ (ಹೊಸದು)- ಅಂಟರಠಾಣ, ಹುಚನೂರ, ತುರಕನೂರ (ಬೇ), ಕಡೂರ, ಕಲ್ಲಗೋನಾಳ, ತತ್ತಕುಂಟಿ (ಬೇ), ಪುರತಗೇರಿ, ಯರಿಗೋನಾಳ.  ಹೂಲಗೇರಾ (ಬಾಧಿತ)- ಹೂಲಗೇರಾ, ಹೊನಮಟ್ಟಿ (ಬೇ).  ದೋಟಿಹಾಳ (ಬಾಧಿತ)- ದೋಟಿಹಾಳ, ಮಾಟೂರ, ತೊನಸಿಹಾಳ.  ಕೇಸೂರ (ಹೊಸದು)- ಕೇಸೂರ, ಉಪ್ಪಾರಬಸಾಪುರ, ಹೆಸರೂರ, ಕಲಕೇರಿ, ನಡುವಲಕೊಪ್ಪ, ಕಡೇಕೊಪ್ಪ.  ಕ್ಯಾದಿಗುಪ್ಪ (ಬಾಧಿತ)- ಕ್ಯಾದಿಗುಪ್ಪ, ಗೋತಗಿ, ಮೆಣಸಗೇರಾ, ತಿಮ್ಮನಹಟ್ಟಿ.  ಮೆಣೆದಾಳ (ಬಾಧಿತ)- ಮೆಣೆದಾಳ, ಚಿಕ್ಕತೆಮ್ಮಿನಾಳ, ಬಚನಾಳ, ಹಿರೇಮುಕರ್ತಿನಾಳ, ಹುಲಿಯಾಪುರ, ಮುಕ್ತಾರಾಂಪುರ, ಚಿಕ್ಕಮುಕರ್ತಿನಾಳ.  ಲಿಂಗದಳ್ಳಿ (ಹೊಸದು)- ಲಿಂಗದಳ್ಳಿ, ಗುಡ್ಡದಹನುಮಸಾಗರ, ಹೊಮ್ಮಿನಾಳ, ಹೊನಗಡ್ಡಿ, ಸಿದ್ದಾಪುರ, ವಿರುಪಾಪುರ.  ಸಂಗನಾಳ (ಬಾಧಿತ)- ಸಂಗನಾಳ, ಗಂಗನಾಳ, ಹಡಗಲಿ, ಹಿರೇತೆಮ್ಮಿನಾಳ, ಕನ್ನಾಳ, ಮೆತ್ತಿನಾಳ, ಪುರ.  ಕಂದಕೂರ (ಬಾಧಿತ)- ಕಂದಕೂರ, ಉಮಳಿ ಕುರಬನಾಳ, ನೆರೆಬೆಂಚಿ.  ಗುಮಗೇರಾ (ಹೊಸದು)- ಗುಂಗೇರಾ, ನಾಗರಾಳ, ಗಂಗನಾಳ, ಮುಕ್ತಾಗುಡದೂರ.  ಬಿಜಕಲ್ (ಬಾಧಿತ)- ಬಿಜಕಲ್, ಮಜರಾಬಸಾಪುರ, ಕೆ. ಗೋನಾಳ, ಕೆ. ಹೊಸೂರ, ಕೌಲಬೋದೂರ, ಮಣ್ಣಕಲಕೇರಿ, ಟೆಂಗುಂಟಿ, ಟಕ್ಕಳಕಿ.  ಮಾಲಗಿತ್ತಿ (ಬಾಧಿತ)- ಮಾಲಗಿತ್ತಿ, ಕಡಿವಾಲ, ಅಕ್ಕೇರಿ, ಪಟ್ಟಲಚಿಂತಿ.  ಹನಮನಾಳ (ಬಾಧಿತ)- ಹನಮನಾಳ, ಎಂ. ಕುರುಬನಾಳ.  ಬಿಳೇಕಲ್ (ಹೊಸದು)- ಬಿಳೇಕಲ್, ಕೊಡತಗೇರಾ, ರಂಗಾಪುರ.  ಜಾಗೀರಗುಡದೂರ (ಬಾಧಿತ)- ಜಾಗೀರಗುಡದೂರ, ಕೋನಾಪುರ, ಪರಮನಹಟ್ಟಿ, ಗುಡ್ಡದದೇವಲಾಪುರ.  ತಿಮರಿಕೊಪ್ಪ (ಹೊಸದು)- ತುಮರಿಕೊಪ್ಪ, ಪರಸಾಪುರ, ತಿಮ್ಮನಹಟ್ಟಿ, ಬಾದಿಮನಾಳ, ಗೊರಬಿಹಾಳ, ವೆಂಕಟಾಪುರ.  ಹಿರೇಗೊಣ್ಣಾಗರ (ಬಾಧಿತ)- ಹಿರೇಗೊಣ್ಣಾಗರ, ಮೂಗನೂರ, ಮಜರಾನರಸಾಪುರ.  ಯರಗೇರಾ (ಬಾಧಿತ)- ಯರಗೇರಾ, ಚಂದ್ರಗಿರಿ, ಗುಡದೂರಕಲ್, ಮದನಾಳ, ಮಾವಿನ ಇಟಗಿ.  ಹಾಬಲಕಟ್ಟಿ (ಹೊಸದು)- ಹಾಬಲಕಟ್ಟಿ, ವಾರಿಕಲ್, ಚಿಕ್ಕಗೊಣ್ಣಾಗರ, ಮಾಸ್ತಿಕಟ್ಟಿ, ಗಡಚಿಂತಿ.  ಮುದೇನೂರ (ಬಾಧಿತ)- ಮುದೇನೂರ, ಬನಹಟ್ಟಿ ಕೆ, ಬೆಂಚಮಟ್ಟಿ, ಕೂಡ್ಲೂರು, ಮಾದಾಪುರ, ತೆಗ್ಗಿಹಾಳ.  ಶಿರಗುಂಪಿ (ಹೊಸದು)- ಶಿರಗುಂಪಿ, ಜಾಲಿಹಾಳ, ಬಳೂಟಗಿ, ಮೇಗೂರು, ರ‍್ಯಾವಣಕಿ.
  ಕರಡು ಅಧಿಸೂಚನೆಯಲ್ಲಿ ಹೊಸ ಗ್ರಾಮ ಪಂಚಾಯತಿಗಳ ರಚನೆ, ಪುನರ್ ವಿಂಗಡಣೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರಗಳನ್ನು ನೀಡಲಾಗಿದ್ದು, ಇದರಿಂದ ಬಾಧಿತರಾಗಬಹುದಾದ ಯಾವುದೇ ವ್ಯಕ್ತಿಗಳು ಸಲಹೆ ಅಥವಾ ಆಕ್ಷೇಪಣೆಯನ್ನು ಜ. ೨೯ ರ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರಡು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Leave a Reply

Top