fbpx

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮ : ಕೃಷ್ಣ ಉದಪುಡಿ

ಕೊಪ್ಪಳ, ಮಾ.೨೬  : ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ನೀರಿನ ತೊಂದರೆ ಕಂಡುಬಂದಲ್ಲಿ ಕೂಡಲೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವುದು ಅಥವಾ ಎಸ್‌ಎಂಎಸ್ ಕಳುಹಿಸುವ ಮೂಲಕ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿದ್ದಾರೆ.
  ಈಗಾಗಲೇ ಬಿರು ಬೇಸಿಗೆ ಕಾಲ ಆರಂಭವಾಗಿದ್ದು, ನೀರಿನ ಬೇಡಿಕೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕುಡಿಯುವ ನೀರಿನ ಸೆಲೆ ಕಡಿಮೆಯಾಗುತ್ತಿದೆ. ಇದನ್ನು ಮನಗಂಡಿರುವ ಕೊಪ್ಪಳ ಜಿಲ್ಲಾ ಪಂಚಾಯತಿ,  ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವುದು ಹಾಗೂ ನೀರು ಪೋಲಾಗದಂತೆ ಸರಬರಾಜು ಮಾಡಲು ಜಿಲ್ಲಾ ಮಟ್ಟದಿಂದ ಕ್ರಮ ಕೈಗೊಳ್ಳುತ್ತಿದೆ.
  ಬೇಸಿಗೆ ಸಂದರ್ಭದಲ್ಲಿ ಜಿಲ್ಲಾ, ತಾಲೂಕಾ ಮತ್ತು ಗ್ರಾಮೀಣ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ.  ತುರ್ತು ಕುಡಿಯುವ ನೀರು ಸರಬರಾಜಿಗಾಗಿ ಈಗಾಗಲೆ ಸರ್ಕಾರ ಪ್ರತಿ ವಿಧಾನಸಾಭಾ ಕ್ಷೇತ್ರಕ್ಕೆ ೪೫ ಲಕ್ಷ ರೂ. ಗಳಂತೆ ಅನುದಾನ ಬಿಡುಗಡೆ ಮಾಡಿದೆ.  ಈ ಅನುದಾನವನ್ನು ತುರ್ತು ಕುಡಿಯುವ ನೀರು ಒದಗಿಸಲು ಸಮರ್ಪಕವಾಗಿ ಉಪಯೋಗಿಸಿ, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.  ಕುಡಿಯುವ ನೀರು ಪೂರೈಕೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ.   ಕುಡಿಯುವ ನೀರಿನ ಸಮಸ್ಯೆ ಉಂಟಾದ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಬೋರ್‌ವೆಲ್‌ನಿಂದ ಬಾಡಿಗೆ ಸ್ವರೂಪದಲ್ಲಿ ನೀರು ಪಡೆದು, ತುರ್ತು ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 
  ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಪಿಡಿಓಗಳು ತಾಳ್ಮೆಯಿಂದ ಸಾರ್ವಜನಿಕರ ನೀರಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರಾತ್ಮಕ ಕ್ರಮ ಕೈಗೊಳ್ಳಬೇಕು ಹಾಗೂ ಅಧೀನ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ತಕ್ಷಣವೇ ಸಮಸ್ಯೆಯನ್ನು ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ.
  ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡಬಹುದಾಗಿದೆ.  ದೂರವಾಣಿ ಸಂಖ್ಯೆಗಳ ವಿವರ ಇಂತಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಕೊಪ್ಪಳ-೯೪೮೦೮೭೧೦೦೦ ಉಪಕಾರ್ಯದರ್ಶಿ-೯೪೮೦೮೭೧೦೦೧, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ವಿಭಾಗ, ಕೊಪ್ಪಳ-೯೪೪೮೫೧೮೦೩೭, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ-೯೪೪೮೫೫೬೨೭೫, ಯಲಬುರ್ಗಾ -೯೪೪೮೨೧೪೨೫೧, ಕುಷ್ಟಗಿ-೯೪೪೮೩೩೬೪೫೬, ಗಂಗಾವತಿ -೯೭೩೧೫೬೬೧೭೩, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಕೊಪ್ಪಳ-೯೪೮೦೮೭೧೧೦೫, ಯಲಬುರ್ಗಾ-೯೪೮೦೮೭೧೧೧೫, ಕುಷ್ಟಗಿ-೯೪೮೦೮೭೧೧೧೦, ಗಂಗಾವತಿ-೭೪೦೬೫೩೭೫೪೦,  
  ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ದೂರವಾಣಿ ಕರೆಗೆ ಸ್ಪಂದಿಸದೇ ಇದ್ದ ಪಕ್ಷದಲ್ಲಿ, ಅಥವಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಅನಿವಾರ್ಯ ಕಾರಣದಿಂದ   ಕರೆಯನ್ನು ಸ್ವೀಕರಿಸದಿದ್ದರೆ, ಕೂಡಲೇ ತಮ್ಮ ಗ್ರಾಮದ ಹೆಸರು ಹಾಗೂ ನೀರಿನ ಸಮಸ್ಯೆಯನ್ನು ನಮೂದಿಸಿ ೯೪೮೦೮೭೧೦೦೦ ಹಾಗೂ ೯೪೮೦೮೭೧೦೦೧ ಕ್ಕೆ ಎಸ್.ಎಮ್.ಎಸ್ ಸಂದೇಶ ಕಳುಹಿಸಿದಲ್ಲಿ, ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಾಗುವುದು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ   ತಿಳಿಸಿದ್ದಾರೆ.   
Please follow and like us:
error

Leave a Reply

error: Content is protected !!