ಡಾ. ರಾಜಕುಮಾರ್ ನಾಯಕರಾಗಲು ಪುರೋಹಿತಶಾಹಿ ಅಡ್ಡಗಾಲು.

ಹೊಸಪೇಟೆ: ಡಾ. ರಾಜಕುಮಾರ್ ಅವರು ಈ ನಾಡಿನ ಸಾಂಸ್ಕೃತಿಕ ನಾಯಕನಾಗುವಲ್ಲಿ ಎದುರಾದ ಅಡೆತಡೆಗಳ ಹಿಂದಿನ ರಾಜಕೀಯವನ್ನು ಆರ್ಥಮಾಡಿಕೊಂಡರೆ ಪುರೋಹಿತಶಾಹಿ ಹುನ್ನಾರ ಗೊತ್ತಾಗುತ್ತದೆ ಎಂದು ಸಮಾಜ ವಿಜ್ಞಾನಿ ಡಾ.ಸಿ.ಜಿ. ಲಕ್ಷ್ಮಿಪತಿ ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಡಾ.ರಾಜ್‌ಕುಮಾರ್ ಅಧ್ಯಯನ ಪೀಠ ಏರ್ಪಡಿಸಿದ್ದ ಡಾ. ರಾಜಕುಮಾರ್ ಅವರ ೮೭ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ಡಾ. ರಾಜ್ ಅವರ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ರಾಜಕುಮಾರ್ ಅವರನ್ನು ಯಾವಾಗ ಹೊಗಳಬೇಕೋ ಆಗ ಹೊಗಳದೆ ವಿಮರ್ಶೆ ಮಾಡಬೇಕಾದ ಸಮಯದಲ್ಲಿ ವಿಮರ್ಶೆ ಮಾಡದೆ ಪುರೋಹಿತ ಶಾಹಿ ವರ್ಗ ಅನ್ಯಾಯವೆಸಗುತ್ತಾ ಬಂದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಡಾ. ರಾಜಕುಮಾರ್ ಅವರ ವ್ಯಕ್ತಿತ್ವವನ್ನು ಕುರಿತು, ಅವರ ಸಾಧ್ಯತೆಯನ್ನು ಕುರಿತು ಮಾತನಾಡಿದರು. ಡಾ. ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕ ಡಾ. ಅಶೋಕಕುಮಾರ್ ರಂಜೇರೆ ಪ್ರಾಸ್ತಾವಿಕ, ಮಾತನಾಡಿ ಸ್ವಾಗತಿಸಿದರು.  ಚಲನಚಿತ್ರ ನಿರ್ದೇಶಕ ಮತ್ತು ಕಲಾವಿದ ಲೋಕೇಂದ್ರ ಮತ್ತು ಗುರುರಾಜ್ ಅವರು ಡಾ. ರಾಜ್ ಅವರ ಚಲನಚಿತ್ರಗೀತೆಗಳ ಗಾಯನ ಮಾಡಿದರು. ಡಾ. ಶಿವಾನಂದ ವಿರಕ್ತಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply