ಕಲಬುರ್ಗಿ ಕೊಲೆ ಪ್ರಕರಣ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ.

ಕೊಪ್ಪಳ-30-  ನಾಡುಕಂಡ ಅತ್ಯಂತ ಹಿರಿಯ ಸಾಹಿತಿ, ಸಂಶೋಧಕ, ಜನಪರ ವಿಚಾರವಾದಿ, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ.ಡಾ|| ಎಂ.ಎಂ.ಕಲಬುರ್ಗಿಯವರನ್ನು ರವಿವಾರ ಬೆಳಿಗ್ಗೆ ಧಾರವಾಡದ ಕಲ್ಯಾಣನಗರದ ಅವರ ನಿವಾಸದಲ್ಲಿ ವಿದ್ಯಾರ್ಥಿ ಎಂದು ಹೇಳಿಕೊಂಡು ಇಬ್ಬರು ದುಷ್ಕರ್ಮಿಗಳು ಹಾಡುಹಗಲೇ ಅವರನ್ನು ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ಕೊಪ್ಪಳದ ಅಶೋಕ ಸರ್ಕಲ್ ಬಳಿ ಜಿಲ್ಲೆಯ ಸಾಹಿತಿ ಬಳಗ ಬೃಹತ್ ಪ್ರತಿಭಟನೆ ನಡೆಸಿ ಮಾನವ ಸರಪಳಿ ಆಚರಿಸಿದರು.
    ಅವಮಾನವೀಯ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದ ಕೊಪ್ಪಳದ ಸಾಹಿತಿ ಬಳಗ ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಧೀಡೀರ್ ಸಭೆ ಸೇರಿ ಶ್ರದ್ಧಾಂಜಲಿ ಸಭೆ ನಡೆಸಿದ ಬಳಿಕ ಇಲ್ಲಿನ ಅಶೋಕ ಸರ್ಕಲ್‌ಗೆ ಆಗಮಿಸಿ ಮಾನವ ಸರಪಳಿ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಪಡಿಸಿದರು.
    ಡಾ|| ಎಂ.ಎಂ.ಕಲಬುರ್ಗಿ ಅವರು ಒಬ್ಬ ಹಿರಿಯ ಸಂಶೋಧಕ, ವಿಚಾರವಾದಿಗಳಾಗಿದ್ದು, ಅವರ ಕೊಲೆ ಹಿಂದೆ ಕೆಲ ದುಷ್ಕರ್ಮಿ ಮೂಲಭೂತವಾದಿಗಳ ಕೈವಾಡ ಇರಬಹುದು. ಯಾರೇ ಆಗಿರಲಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ವಿದ್ಯಾರ್ಥಿಗಳ ಹೆಸರು ಹೇಳಿಕೊಂಡು ಬೆಳಗಿನ ವೇಳೆ ಅವರ ಮನೆಗೆ ಬಂದು
    ಈ ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಡಾ.ಮಹಾಂತೇಶ ಮಲ್ಲನಗೌಡರ, ಡಾ.ಕೆ.ಬಿ.ಬ್ಯಾಳಿ, ಡಾ.ವಿ.ಬಿ.ರಡ್ಡೇರ್, ವಿಠ್ಠಪ್ಪ ಗೋರಂಟ್ಲಿ,   ಜಿ.ಎಸ್.ಗೋನಾಳ, ಗವಿಸಿದ್ದಪ್ಪ ಕೊಪ್ಪಳ, ರಾಜಶೇಖರ ಅಂಗಡಿ, ಹೆಚ್.ವಿ.ರಾಜಾಬಕ್ಷಿ, ಶಿವಾನಂದ ಹೊದ್ಲೂರು, ಬಸವರಾಜ ಬಳ್ಳೊಳ್ಳಿ, ಮಹೇಶಬಾಬು ಸುರ್ವೆ, ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಮಂಜುನಾಥ ಡೊಳ್ಳಿನ, ಸಯ್ಯದ್ ಮಹೆಮೂದ ಹುಸೇನಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೇತೃತ್ವವಹಿಸಿದ್ದು, ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು. ಸರೋಜಾ ಬಾಕಳೆ, ಪಿ.ಬಿ.ಪಾಟೀಲ್, ವಿಜಯಲಕ್ಷ್ಮೀ ಕೊಟಿಗಿ, ಸಂಗಮೇಶ ಡಂಬಳ, ಶಾಂತಾದೇವಿ ಹಿರೇಮಠ, ಶಂಕ್ರಯ್ಯ ಅಬ್ಬಿಗೇರಿಮಠ, ಅನುಸೂಯ ಜಾಗೀರದಾರ, ಬಸಯ್ಯ ಸಸಿಮಠ, ರಾಜೇಶ ಸಸಿಮಠ, ಕಲ್ಲನಗೌಡ ಪಾಟೀಲ್, ಬಸಪ್ಪ ದೇಸಾಯಿ, ನಾಗರಾಜ ಡೊಳ್ಳಿನ, ವೀರಣ್ಣ ಹುರಕಡ್ಲಿ, ಗುರಾಜ ಹಲಗೇರಿ, ಶರಣಗೌಡ ಯರದೊಡ್ಡಿ, ಸೋಮರಾಜರೆಡ್ಡಿ ಗೋನಾಳ ಅಲ್ಲದೇ ಪತ್ರಕರ್ತರಾದ ಹರೀಶ ಹೆಚ್.ಎಸ್, ಎಂ.ಸಾದಿಕ್ ಅಲಿ, ಎನ್.ಎಂ.ದೊಡ್ಡಮನಿ, ವೈ.ಬಿ.ಜೂಡಿ, ವೀರಣ್ಣ ಕಳ್ಳಿಮನಿ, ಮಂಜುನಾಥ ಕೋಳೂರು ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಾತನಾಡುವ ನೆಪದಲ್ಲಿ ಅವರ ಹಣೆಗೆ ಗುಂಡಿಟ್ಟು ಕೊಲೆ ಮಾಡಿದ ಇಂತಹ ಪಾತಕಿಗಳನ್ನು ತಕ್ಷಣ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

Please follow and like us:
error