ಗಂಗಾವತಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲು ಒತ್ತಾಯ: ಎಐಸಿಸಿಟಿಯು

ಗಂಗಾವತಿ ಸಕ್ಕರೆ ಕಾರ್ಖಾನೆಯನ್ನು ಗುಜರಿಗೆ ಮಾರಿ, ಭೂಮಿಯನ್ನು ರಿಯಲ್ ಎಸ್ಟೇಟ್ ದಂದೆಗೆ ಬಳಸಿಕೊಳ್ಳಲು ಪ್ರಯತ್ನಗಳು ನಡೆದಿರವುದನ್ನು ಸಿಪಿಐಎಂಎಲ್ ಲಿಬರೆಷನ್ ಮತ್ತು ಪಕ್ಷದ ಅಂಗ ಸಂಘಟನೆಗಳು ಉಗ್ರವಾಗಿ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದಾವೆ ಎಂದು ಎಐಸಿಸಿಟಿಯು ಜಿಲ್ಲಾ ಸಂಚಾಲಕ ಬಸನಗೌಡ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಅಧ್ಯಕ್ಷ ಏಸು ಹೊಸ್ಕೇರಾ ಮತ್ತು ಕ್ರಾಂತಿಕಾರಿ ಯುವಜನ ಸಂಘದ ಜಿಲ್ಲಾ ಸಂಚಾಲಕ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಯನ್ನು ಹರಾಜಿನಲ್ಲಿ ಖರೀದಿಸಿದ ರಾಮಯ್ಯ ರೆಡ್ಡಿರವರು ಕಾರ್ಖಾನೆಯನ್ನು ಗುಜರಿಗೆ ಮಾರಾಟ ಮಾಡಿದಾಗ ಗಂಗಾವತಿ ತಾಲೂಕಿನ ರೈತರು ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದರು. ಕಾರ್ಖಾನೆಯ ಷೇರುಗಳನ್ನು ಖರೀದಿ ಮಾಡಿದ ರೈತರಿಗೆ ಸರ್ಕಾರ ಒಂದು ರೂಪಾಯಿಯನ್ನು ಮರಳಿ ಕೊಟ್ಟಿಲ್ಲ. ಕಾರ್ಮಿಕರು ನಿರಂತರ ಹೋರಾಟಗಳ ಮೂಲಕ ತಮಗೆ ಬರಬೇಕಾದ ವೇತನ ಬಾಕಿಯನ್ನು, ಪ್ರಾವಿಡೆಂಟ್ ಫಂಡ್, ಗ್ರಾಚ್ಯುಟಿಗಳನ್ನು ಪಡೆದಿದ್ದಾರೆ. ಆದರೆ, ಸೀಸನಲ್ ಕಾರ್ಮಿಕರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ತಾಲೂಕಿನ ಜನಪ್ರತಿನಿಧಿಗಳು ಖರೀದಿದಾರರ ಪರ ನಿಂತು ಕಾರ್ಖಾನೆಯನ್ನು ಗುಝರಿಗೆ ಮಾರಲು ಅನುಕೂಲ ಮಾಡಿಕೊಟಿದ್ದು ಈಗ ಬಹಿರಂಗವಾಗಿದೆ. 
ಬಹುರಾಷ್ಟ್ರೀಯ ಕಂಪನಿಯಾದ ಇ.ಎಮ್.ಎನ್ ಕಂಪನಿ ಕೊಪ್ಪಳ ಜಿಲ್ಲೆಯಲ್ಲಿ ೨೫೦ರೂ. ಕೋಟಿಗಳ ಬಂಡವಾಳ ಹೂಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಇ.ಎಮ್.ಎನ್. ಕಂಪನಿಯ ಪಾಲುದಾರರು ಗಂಗಾವತಿ ಸಕ್ಕರೆ ಕಾರ್ಖಾನೆಯನ್ನು ವೀಕ್ಷಿಸಿ ಖರೀದಿಸಲು ಮುಂದಾಗಿದ್ದಾರೆ. ಈ ಬೆಳವಣಿಗೆಯನ್ನು ನೋಡಿ ತಾಲೂಕಿನ ರೈತರು ಮತ್ತು ಕಾರ್ಮಿಕರು ಕಾರ್ಖಾನೆ ಮತ್ತೆ ಪ್ರಾರಂಭವಾಗುತ್ತದೆ ಎಂದು ನಂಬಿ ಖುಷಿ ಪಟ್ಟರು. 
ಮುಂಬೈ ಮೂಲದ ಇಂಡ್ರಸ್ಟ್ರಿಯಲ್ ಮಾಫಿಯಾದ ಡಾನ್‌ಗಳ ಕಣ್ಣುಗಳಿಗೆ ಗಂಗಾವತಿ ಸಕ್ಕರೆ ಕಾರ್ಖಾನೆ ಕಾಣಿತು. ಗಂಗಾವತಿಯ ಕೆಲವು ದಲ್ಲಾಳಿಗಳ ಮುಖಾಂತರ ಮಾಫಿಯಾಗಳು ರಾಮಯ್ಯ ರೆಡ್ಡಿಗೆ ಒತ್ತಡ ಹೇರಿ ಕಾರ್ಖಾನೆಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದುದಾಗಿ ತಿಳಿದುಬಂದಿದೆ. 
ಲಿಕ್ವಿಡೇಟರ್‌ಯಿಂದ ಕಾರ್ಖಾನೆಯನ್ನು ಖರೀದಿ ಮಾಡಿದ ರಾಮಯ್ಯ ರೆಡ್ಡಿ ತನ್ನ ಕೈಯಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಲಾಗದಿದ್ದರೆ, ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವವರಿಗೆ ಮಾರಾಟ ಮಾಡಬೇಕು. ಮಾಫಿಯಾಗಳಿಗೆ ಮಾರಟ ಮಾಡಿ ಕಾರ್ಖಾನೆಯನ್ನು ಗುಝರಿಗೆ ಹಾಕುವ ಪ್ರಯತ್ನ ಮಾಡಿದರೆ, ಕೊಪ್ಪಳ ಜಿಲ್ಲೆಯ ರೈತರು ಮತ್ತು ಕಾರ್ಮಿಕರು ಉಗ್ರವಾದ ಹೋರಾಟವನ್ನು ಮಾಡಲಿದ್ದಾರೆಂದು ಸಿಪಿಐಎಂಎಲ್ ಪಕ್ಷ ಖರೀದಿದಾರರಾದ ರಾಮಯ್ಯ ರೆಡ್ಡಿ ಮತ್ತು ಸರ್ಕಾರವನ್ನು ಪ್ರಕಟಣೆಯಲ್ಲಿ ಎಚ್ಚರಿಸಿದೆ.  
Please follow and like us:
error