You are here
Home > Koppal News > ಉತ್ತಮ ಶಿಕ್ಷಣದ ಜೋತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಉತ್ತಮ ಶಿಕ್ಷಣದ ಜೋತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-೨೬, ನಗರದ ವಿವೇಕಾನಂದ ಶಾಲೆಯ ಆವರಣದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಆಶ್ರಯದಲ್ಲಿ ೨೦೧೫ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ದ್ವೀತಿಯ ಪರೀಕ್ಷೆಯಲ್ಲಿ ೯೦ಕ್ಕಿಂತ ಅಧಿಕ ಅಂಕಪಡೆದ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ವಿಧ್ಯಾರ್ಥಿಗಳ ಜೀವನದಲ್ಲಿ ಅವರ ಆಯ್ಕೆಯು ಎಸ್.ಎಸ್.ಎಲ್.ಸಿ. ಮತ್ತು ದ್ವೀತಿಯ ಪಿ.ಯು.ಸಿಯ ಪಲಿತಾಂಶ ನಿರ್ಣಾಯಕವಾಗಿದೆ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೋತೆಗೆ ಮಾನವೀಯ ಮೌಲ್ಯಗಳನ್

ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಬೇಕು. ಇತ್ತಿಚೇಗೆ ನಾಡಿನ ಹಿರಿಯ ಸಾಹಿತಿ ಹಾಗೂ ಮಹಾನ್ ಸಂಶೋದಕ ಎಮ್.ಎಮ್.ಕಲಬುvಯವರ ಹತ್ಯೆ ಇಡೀ ಮನುಕೂಲವೆ ತೆಲೆ ತಗ್ಗಿಸುವಂತೆ ಮಾಡಿದೆ. ಅದಕ್ಕಾಗಿ ವಿಧ್ಯಾರ್ಥಿಗಳು ಮುಂದಿನ ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ಸಮಾಜ ಮುಖಿಗಳಾಗಬೇಕು. ತಾವುಗಳು ಯಾವುದೇ ಉನ್ನತ ಸ್ಥಾನ ಹೊಂದಿದ್ದರು ಸಮಾಜದ ಋಣವನ್ನು ಮರೆಯಬಾರದು. ನಮ್ಮ ನಾಡಿನ ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ಸಂಸ್ಥೆಗಳ ಕೊಡುಗೆ ಅಪಾರವೆಂದು ಶ್ಲಾಘಿಸಿದರು.  ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ತಿಪ್ಪಣ್ಣ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಕೊಪ್ಪಳ ತಾಲೂಕು ಘಟಕ ಅದ್ಯಕ್ಷ ಗುರುರಾಜ ಹಲಗೇರಿ, ಪ್ರಧಾನ ಕಾರ್ಯದರ್ಶಿ ಬಿ.ಸಿ.ಐಗೋಳ, ಶಾಂತಣ್ಣ ಮುದುಗಲ್, ಹೆಚ್.ಎಲ್. ಹಿರೇಗೌಡ್ರು, ಬಸವರಾಜ ಬಳ್ಳೂಳ್ಳಿ, ಉಪಸ್ಥಿತರಿದ್ದರು.

Leave a Reply

Top