ಬಿಡಾಡಿ ದನಗಳ ಕಾಟ : ಕೊಪ್ಪಳ ನಗರಸಭೆ ಎಚ್ಚರಿಕೆ

  : ಕೊಪ್ಪಳ ನಗರದ ಹಲವು ರಸ್ತೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ಇದ್ದು, ಇದರಿಂದ ಜನ ಸಂಚಾರಕ್ಕೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.  ಬಿಡಾಡಿ ದನಗಳ ಮಾಲೀಕರು ತಮ್ಮ ಜಾನುವಾರುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.  ಇಲ್ಲದಿದ್ದಲ್ಲಿ, ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
  ಕೊಪ್ಪಳ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.  ಅಲ್ಲದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ.  ಬಿಡಾಡಿ ದನಗಳ ಮಾಲೀಕರು ತಾವಾಗಿಯೇ ಮುಂದೆ ಬಂದು, ೧೫ ದಿನಗಳ ಒಳಗಾಗಿ ತಮ್ಮ ಬಿಡಾಡಿ ದನಗಳ ಯಾದಿಯನ್ನು ನಗರಸಭೆಗೆ ಒಪ್ಪಿಸಿ, ಅವುಗಳನ್ನು ತಮ್ಮ ಸ್ವಂತ ಜಾಗೆಯಲ್ಲಿಯೇ ಸಾಕುವ ಕ್ರಮ ಕೈಗೊಳ್ಳಬೇಕು.  ಇಲ್ಲದಿದ್ದಲ್ಲಿ ಅವುಗಳ ಮಾಲೀಕರು ಯಾರೂ ಇಲ್ಲವೆಂದು ಪರಿಗಣಿಸಿ, ಊರಿನಿಂದ ಹೊರಗೆ ಹಾಕಲು ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.     
Please follow and like us:
error