ಅಪ್ಪ – ಕವಿತೆ

ಸಾವಿರ ಕುದುರೆಗಳ ಏರುವಾಸೆಯಲಿ
ಆಕಾಶ ಭೂಮಿಯಷ್ಟು ಪ್ರೀತಿ ಕೊಟ್ಟು
ಸಾವಿರ ಸಲ ಸೋತರೂ
ಫಿನಿಕ್ಸ್ ನ ಛಲದಿಂದ ಬದುಕಿ
ಅವಸರ ಆಕರ್ಷಣೆಗೆ ಸಿಲುಕಿ
ಪತಂಗವಾಗಿ ಸುಟ್ಟುಹೋದ ನನ್ನಪ್ಪ
ಕಾಣುತ್ತಾನೆ ನನಗೆ ಪ್ರತಿಸಲವೂ
ಸವಾಲುಗಳ ಎದುರು ನಿಂತಾಗ

ಉತ್ತರಿಸಲಾಗದ ನನ್ನ ಪ್ರಶ್ನೆಗಳಿಗೆ
ಮೌನವಾಗಿರುತ್ತಿದ್ದ ಅಪ್ಪನಂತೆ
ನಾನೀಗ ನನ್ನ ಮಗಳ ಮುಂದೆ !

ಬದುಕ ಪ್ರೀತಿಯ ಕಲಿಸಿ
ಇದ್ದಷ್ಟೂ ದಿನಗಳೂ ಬದುಕಿನ
ಹೋರಾಟದಕ್ಕೇ ಕಳೆದ ಅಪ್ಪ
ನೀನಂದು ಪ್ರಶ್ನೆಯಾಗಿದ್ದೆ

ಇಂದು ನಾನು ಹುಡುಕುತ್ತಿದ್ದೇನೆ
ಆ ಪ್ರಶ್ನೆಗಳಿಗೆ ಉತ್ತರ

ಆದರೂ ಅಪ್ಪ ,
ಅಂತಹ
ಅವಸರವಾದರೂ ಏನಿತ್ತು?

——–


 (ಮಗಳು ಝೇಭಾ ಜೊತೆ ನಾನು)

Please follow and like us:
error