ಬೇಡಿಕೆ ಈಡೇರಿಕೆಗೆ ಪತ್ರ ಚಳುವಳಿ

ಕೊಪ್ಪಳ : ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಚಾರ್ಯರರ , ಉಪನ್ಯಾಸಕರುಗಳ ಹಾಗೂ ಭೋದಕೇಥರ ಸಿಬ್ಬಂದಿಗಳಿಗೆ ಉತ್ತಮ ಹಾಗೂ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸುವಂತೆ ಕೊಪ್ಪಳ ಜಿಲ್ಲಾ ಪದವಿ ಪುರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘ ಇಂದು ಪತ್ರ ಚಳುವಳಿ ನಡೆಸಿತು. ಈಗಾಗಲೇ ಪದವಿ ಪದವಿಪೂರ್ವ ಕಾಲೇಜುಗಳ ಒಕ್ಕೂಟ ವರ್ಷದ ಹಿಂದೆ ನೀಡಿದ್ದ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಪ್ರಾಥಮಿಕ ,ಪ್ರೌಢಶಿಕ್ಷಣ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಲಿಗೆ ಪತ್ರ ಬರೆಯುವ ಚಳುವಳಿ ನಡೆಯಿತು. ಪದವಿ ಪೂರ್ವ ಕಾಲೆಜುಗಳ ನೌಕರರು ಪ್ರತ್ಯೇಕವಾಗಿ ಮೂರು ಪತ್ರ ಬರೆದು ಪತ್ರ ಚಳುವಳಿ ಮೂಲಕ ಸರಕಾರಕ್ಕೆ ಮನದಟ್ಟು ಮಾಡುವ ಪ್ರಯತ್ನ ನಡೆಸಿತು. ಈ ಸಂದರ್ಭದಲ್ಲಿ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ವಿ.ಬಿ.ರಡ್ಡೇರ್ , ಉಪನ್ಯಾಸಕರ ಸಂಘದ ಅಧ್ಯಕ್ಷರಾದ ರಾಜಶೇಖರ ಪಾಟೀಲ್, ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯ ಪರಿಷತ್ ಸದಸ್ಯ ಐ.ಎಂ.ಚಿಕ್ಕರೆಡ್ಡಿ, ಪರಿಕ್ಷಿತರಾಜ್ , ಎ.ಜಿ.ತಮ್ಮಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Please follow and like us:
error

Related posts

Leave a Comment