ನಾಳೆ ಬಸವಪಟ ಕಾರ್ಯಕ್ರಮ.

ಶುಕ್ರವಾರ ಸಾಯಂಕಾಲ ೦೫.೦೦ ಗಂಟೆಯಿಂದ ಜರುಗುವ ಬಸವಪಟ ಕಾರ್ಯಕ್ರಮದ ಮೂಲಕ ಶ್ರೀಗವಿಮಠ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ನಾಡಿನ ರೈತರ ಜೀವನ, ಸಮಸ್ತ ಭಕ್ತರ ಬದುಕು ಹಸನಾಗಲಿ, ನಾಡಿನಲ್ಲಿ ಸದಾ ಶಾಂತಿ ನೆಲಸಲಿ ಪ್ರತಿಯೊಬ್ಬರಿಗೂ ಶ್ರೀ ಗವಿಸಿದ್ಧೇಶ್ವರ ಮಹಾಮಹಿಮನು ಒಳಿತನ್ನು ಮಾಡಲಿ ಎಂದು ಭಕ್ತ ಸಮುದಾಯ ಸೇರಿ ಕತು ಗದ್ದಿಗೆಯ ಮೇಲೆ ಬಸವಪಟವನ್ನು ನೆರವೇರಿಸಲಾಗುತ್ತಿದೆ.

ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ : ಕೊಪ್ಪಳದ ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮುನ್ನ ದಿನಗಳು ವಿಭಿನ್ನ ಸಂಸ್ಕೃತಿಗೆ ಸಾಕ್ಷಿಯಾಗಿ ಬಹಳಷ್ಟು ಕಾರ್ಯಕ್ರಮಗಳು ಜರುಗುವವು. ನಾಳೆ ದಿನಾಂಕ : ೨೨-೦೧-೨೦೧೬ರ ಶುಕ್ರವಾರ ಸಾಯಂಕಾಲ ೦೫.೦೦ ಗಂಟೆಗೆ  ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. ಜಿಲ್ಲೆಯ ವಿವಿಧ ಹಳ್ಳಿಗಳಿಂದಮಹಿಳೆಯರು ಶ್ರೀಮಠಕ್ಕೆ ಆಗಮಿಸಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ
ಕಾರ್ಯದಲ್ಲಿ ತೊಡಗಿ ತಮ್ಮ ಹರಕೆಯನ್ನು ತಿರಿಸಿಕೊಳ್ಳುತ್ತಾರೆ. ಉಡಿ ತುಂಬುವ
ಕಾರ್ಯಕ್ರಮಕ್ಕೆ ಆಗಮಿಸುವ ಸಕಲ ಸದ್ಭಕ್ತರಿಗೆ ಸಾಯಂಕಾಲ ೦೫.೦೦ ಗಂಟೆಯಿಂದ
ಶ್ರೀಗವಿಮಠದಿಂದ ಉಚಿತವಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ.

ದಾಸೋಹಕ್ಕೆ ಕಾಣಿಕೆ ಸಮರ್ಪಣೆ : ಕೊಪ್ಪಳ ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಮಹಾ ದಾಸೋಹಕ್ಕೆ ಇಂದು ದಿನಾಂಕ : ೨೧-೦೧-೨೦೧೬ರಂದು ವಿವಿಧ ಗ್ರಾಮಗಳಿಂದ ಸದ್ಭಕ್ತರು ದವಸ, ದಾನ್ಯ, ರೊಟ್ಟಿ ಹಾಗೂ ತರಕಾರಿಗಳನ್ನು ಸಮರ್ಪಣೆ ಮಾಡಿದರು. ಕುಷ್ಟಗಿ ನಗರದ ಕೋಕಿಲಾ ಸರ್ಕಲ್, ಹಂಚಿನಾಳ, ಓಜಿನಹಳ್ಳಿ, ಗೋಸಲದೊಡ್ಡಿ, ಚಂಡೂರು, ಸಿದ್ನೆಕೊಪ್ಪ, ಗುಳೆ, ಹೊಸೂರು, ಹಗರಿಭೊಮ್ಮನಹಳ್ಳಿ ತಾಲೂಕಿನ ಕಡ್ಲಬಾಳು, ಕನಕಾಪೂರ, ಮತ್ತು ಕೇಸರಹಟ್ಟಿ ಗ್ರಾಮದ ಸದ್ಭಕ್ತರು ಮಹಾದಾಸೋಹಕ್ಕೆ ಕಾಣಿಕೆ ಸಮರ್ಪಿಸಿದರು. ಕಾಣಿಕೆ ಸಲ್ಲಿಸಿದ ಭಕ್ತರಿಗೆ ಶ್ರೀಗಳು ಆಶೀರ್ವದಿಸಿದ್ದಾರೆ.

Please follow and like us:
error