ವಿವಿಧ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ- ಸಂಗಣ್ಣ ಕರಡಿ

ಕೊಪ್ಪಳ ಫೆ.  : ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ವಿವಿಧ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
  ಮುನಿರಾಬಾದ್-ಮೆಹಬೂಬ್‌ನಗರ ರೈಲ್ವೆ ಕಾಮಗಾರಿಗಾಗಿ ಬಜೆಟ್‌ನಲ್ಲಿ ಕ್ಯಾಪಿಟಲ್- ೩೫ ಕೋಟಿ ರೂ. ಹಾಗೂ ಇಬಿಆರ್ (ಎಕ್ಸ್‌ಟ್ರಾ ಬಜೆಟ್ ರಿಸೋರ್ಸ್) ನಲ್ಲಿ ರೂ. ೧೫೦ ಕೋಟಿ ರೂ. ಹಂಚಿಕೆ ಮಾಡಲಾಗಿದೆ.  ಗದಗ-ವಾಡಿ ರೈಲ್ವೆ ಯೋಜನೆಗೆ ಬಜೆಟ್‌ನಲ್ಲಿ ಕ್ಯಾಪಿಟಲ್- ೨೦ ಕೋಟಿ ರೂ. ಹಾಗೂ ಇಬಿಆರ್ (ಎಕ್ಸ್‌ಟ್ರಾ ಬಜೆಟ್ ರಿಸೋರ್ಸ್) ನಲ್ಲಿ ರೂ. ೧೦೦ ಕೋಟಿ ರೂ. ಹಂಚಿಕೆ ಮಾಡಲಾಗಿದೆ.  ಹೊಸಪೇಟೆ-ಕೊಪ್ಪಳ-ಹುಬ್ಬಳ್ಳಿ ಡಬಲ್ ಲೈನಿಂಗ್ ಕಾಮಗಾರಿಗಾಗಿ ಕ್ಯಾಪಿಟಲ್‌ನಡಿ ೨೫೦ ಕೋಟಿ ರೂ. ಅನುದಾನ ಒದಗಿಸಲಾಗಿದೆ.  ಹೆಚ್ಚುವರಿ ಅನುದಾನದ ತುರ್ತು ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಹ ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error