fbpx

ಈಶಾನ್ಯ ಸಾರಿಗೆ ನೌಕರರಿಗೆ ಶೀಘ್ರವೆ ಸುಸಜ್ಜಿತ ಸಮೂದಾಯ ಭವನ ನಿರ್ಮಾಣ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ೨೨: ನಗರದ ಈಶಾನ್ಯ ಸಾರಿಗೆ ಸಂಸ್ಥೆವತಿಯಿಂದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಅಭಿನಂದನಾ ಸನ್ಮಾನ ಸ್ವೀಕರಿಸಿ ಕೊಪ್ಪಳದ ಈಶಾನ್ಯ ಸಾರಿಗೆ ನೌಕರರಿಗೆ ಶೀಘ್ರವೆ ಒಂದು ಸುಸಜ್ಜಿತ ಸಮೂದಾಯ ಭವನ ನಿರ್ಮಾಣ ಮಾಡಲಾಗುವುದು. ಕೊಪ್ಪಳ ದಿಂದ ಬೆಂಗಳೂರಿಗೆ ಹಾಗೂ ಕೊಪ್ಪಳ-ಹೈದ್ರಾಬಾದ್‌ಗೆ ನಾಲ್ಕು ಹೈಟೆಕ್ ಲಕ್ಸುರಿ ಬಸ್‌ಗಳನ್ನು ಪ್ರಾರಂಭ ಮಾಡಲಾಗುವುದು ಕೊಪ್ಪಳ ಬಸ್ಸ್ ಡೀಪೂವನ್ನು ನವೀಕರಣ ಗೊಳಿಸಿ ಸಂಪೂರ್ಣ ಸಿ.ಸಿ. ಮಾಡಲಾಗುವುದು ಸಂಸ್ಥೆಯ ಎಲ್ಲಾ ಕಾರ್ಮಿಕರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗುವುದು ಹಾಗೂ ಶೀಘ್ರವೆ “ಕೊಪಣ ನಗರ ಸಾರಿಗೆ” ಪ್ರಾರಂಭಿಸಲಾಗುವುದೆಂದು ಹೇಳಿದರು.
  ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನಿಉಲ್ಲಾ ಸಾಬ, ವಿಭಾಗೀಯ ತಾಂತ್ರಿಯಕ ಅಧಿಕಾರಿಗಳು ನಾರಾಯಣ ಗೌಡಗೆರಿ, ಘಟಕ ವ್ಯವಸ್ಥಾಪಕರಾದ ಬಿ.ವ್ಹಿ.ಬಟ್ಟಣ್ಣನ್ನವರ, ಪ್ರಸನ್ನಗಡಾದ, ಮುತ್ತುರಾಜ ಕುಷ್ಟಗಿ, ಜಡಿಯಪ್ಪ ಬಂಗಾಳಿ, ಗಾಳೇಪ್ಪ ಪೂಜಾರ, ಹನುಮಂತ ವನಬಳ್ಳಾರಿ, ಪ್ರಶಾಂತ ಪಾಟೀಲ್ ಹಿಟ್ನಾಳ ಹಾಗೂ ಸಂಸ್ಥೆಯ ಅನೇಕ ನಿರ್ವಾಹಕರು, ಚಾಲಕರು, ಕಾರ್ಮಿಕರು,ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!