fbpx

ವಕ್ಫ್ ಇಲಾಖೆಯಿಂದ ಗೌರವಧನ : ಅರ್ಜಿ ಆಹ್ವಾನ

 ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇಶ್ ಇಮಾಮ್ ಹಾಗೂ ಮೌಜ್ಜನಗಳಿಗೆ ಗೌರವಧನ ಮಂಜೂರಾತಿ ಕುರಿತಂತೆ ಅರ್ಜಿಗಳನ್ನು ಆಹ್ವಾನಿಸಿದೆ.
   ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಸರ್ಕಾರಿ ವಕ್ಫ್ ಸಂಸ್ಥೆಗಳು ವಾರ್ಷಿಕ ಆದಾಯ ೧ ಲಕ್ಷ ಒಳಗಾಗಿ ಹೊಂದಿರುವ, ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ, ಅಧಿಸೂಚಿತಗೊಂಡಂತಹ (ಗೆಜೆಟ್), ಎಲ್ಲಾ ಮಸೂತಿಗಳ, ರಾಜ್ಯ ವಕ್ಫ ಮಂಡಳಿಯಿಂದ ಅನುಮೋದನೆಗೊಂಡ ಹಾಗೂ ಆದೇಶ ಪ್ರತಿಯನ್ನು ಹೊಂದಿರುವ ಮುತವಲ್ಲಿಗಳು, ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಅಧಿಕಾರಿಗಳು ತಮ್ಮ ಮಸೂತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜ್ಜನಗಳ ಬಗ್ಗೆ ಸ್ವ ವಿವರವಾಗಿ ದಾಖಲೆಗಳನ್ನು ಜಿಲ್ಲಾ ವಕ್ಫ್ ಅಧಿಕಾರಿಗಳು, ವಕ್ಫ್ ಸಲಹಾ ಸಮಿತಿ ಕೊಪ್ಪಳ ಇವರಿಗೆ ಏ.೨೮ ರೊಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿಯೊಂದಿಗೆ ಭಾವಚಿತ್ರ, ಕರ್ನಾಟಕದಲ್ಲಿ ಸುಮಾರು ೩ ವರ್ಷಗಳಿಂದ ವಾಸವಾಗಿರುವಂತಹ ವಾಸಸ್ಥಳದ ದೃಢೀಕರಣದ ದಾಖಲೆಗಳಾದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕದವರಿಗೆ ಆದ್ಯತೆ ನೀಡಲಾಗುವುದು, ವಕ್ಫ್ ಸಂಸ್ಥೆಯಾದ ಮಸೂತಿಗಳಿಗೆ ಸಂಬಂಧಪಟ್ಟವರಾದ ಮುತವಲ್ಲಿಗಳು, ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಅಧಿಕಾರಿಗಳವರ ದೃಢೀಕೃತ ನಕಲು, ಅರ್ಜಿದಾರನು ಹೊಂದಿರುವ ಗಣಕೀಕೃತ ಬ್ಯಾಂಕಿನ ಖಾತೆ ಸಂಖ್ಯೆ ಮತ್ತು ಸಿಎಸ್‌ಟಿ ಚೆಕ್ ಪುಸ್ತಕಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ನೂರ ಅಹ್ಮದ್ ಹಣಜಗೇರಿ ಅವರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!