ತಳಕಲ್: ರೇಣುಕಾದೇವಿ ದೇವಸ್ಥಾನದಲ್ಲಿ ನೀರನ ವ್ಯವಸ್ಥೆ ಕಲ್ಪಿಸಲು ಮನವಿ

 ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ರೇಣುಕಾದೇವಿ ದೇವಸ್ಥಾನಕ್ಕೆ ಭಕ್ರ ಸಂಖ್ಯೆ ಹೆಚ್ಚಿದ್ದು ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕನ್ನಡ ಕ್ರಾಂತಿ ದೀಪ ಕನ್ನಡಪರ ಸಂಘಟನೆ ಜಿಲ್ಲಾ ಘಟಕವು  ತಲಕಲ್ ಗ್ರಾ.ಪಂ.ಗೆ ಒತ್ತಾಯಿಸಿದೆ. 
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ದೇವಸ್ಥಾನಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಲಿದ್ದು ಪರಸ್ಥಳದಿಂದ ಆಗಮಿಸುವ ಜನತೆ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಇಲ್ಲಿನ ನೂತನ ನೀರಿನ ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ನೀರುನ ಕೊರತೆ ನೀಗಿಸಬಹುದಾಗಿದೆ

. ತಳಕಲ್ ಗ್ರಾಮ ಪಂಚಾಯತ ಕಾರ್ಯಾಲಯದ ವತಿಯಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಈ ಕುರಿತು ಹೆಚ್ಚೆತ್ತು ಒತ್ತು ನೀಡಿ ಸೂಕ್ತ ಅನುದಾನದಲ್ಲಿ ದೊಡ್ಡ ಪ್ರಮಾಣದ ನೀರಿನ ಟ್ಯಾಂಕ್ ನಿರ್ಮಿಸುವ ಇಚ್ಛಾಶಕ್ತಿ ತೋರಬೇಕಿದೆ ಎಂದು ಕನ್ನಡ ಕ್ರಾಂತಿ ದೀಪ ಕನ್ನಡಪರ ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಕಿನ್ನಾಳ ಗ್ರಾ.ಪಂ.ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆ ತಾಲೂಕಾಧ್ಯಕ್ಷ ಶ್ರೀಕಾಂತ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಮಂಜುಳಾ ಬಿ., ಉಪಾಧ್ಯಕ್ಷ ಆನಂದ ಸೇರಿದಂತೆ ಇತ್ತಿತರರು ಹಾಜರಿದ್ದರು.
Please follow and like us:

Leave a Reply