fbpx

ಜಿಲ್ಲಾ ಕಾರಾಗೃಹದಲ್ಲಿ ಬಸವ ಪಂಚಮಿ ನಿಮಿತ್ಯ ಹಾಲು-ಹಣ್ಣು ವಿತರಣೆ.

ಕೊಪ್ಪಳ – ಆ.೧೯ ನಗರದ  ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಗುರು ಬಸವಣ್ಣನವರ ಲಿಂಗೈಕ್ಯ ಸ್ಮರಣೆ ನಿಮಿತ್ಯ ಕಾರಾಗೃಹದಲ್ಲಿ ವಿಚಾರಾಣಾದೀನ ಖೈದಿಗಳಿಗೆ ವಿಶ್ವ ಗುರು ಬಸವೇಶ್ವರ ಟ್ರಸ್ಟ ಕೊಪ್ಪಳ ಇವರಿಂದ ಹಾಲು-ಹಣ್ಣು ವಿತರಿಸಲಾಯಿತು.
    ಸುಮಾರು ೧೫೦ಕ್ಕೂ ಹೆಚ್ಚು ಜನರಿದ್ದ ಕಾರ್ಯಕ್ರಮದಲ್ಲಿ ಬಸವಯ್ಯ ಸಸಿಮಠ ಮಾತನಾಡಿ ಹಾವು ಹಾಲು ಕುಡಿಯುವುದಿಲ್ಲಾ ಆದರೂ ಜನರು ಹಾಲನ್ನು ಕಲ್ಲನಾಗರಕ್ಕೆ ಹಾಲನ್ನು ಹಾಕುವಪದ್ದತಿಯಿದೆ ಇದನ್ನು
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹದ ಅಧೀಕ್ಷಕರಾದ ಸಂಜಯ ಜತ್ತಿ ಮಾತನಾಡಿ ಜನರು ದಿನ-ದಿನ ಮೂಡನಂಭಿಕೆ ದಾಸರಾಗುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ವೈಚಾರಿಕತೆ ಮೂಡಿಸುವ ಇಂತಹ ಕಾರ್ಯಕ್ರಮ ದಶಕದಿಂದಲೂ ಮಾಡುತ್ತಿರುವ ಟ್ರಸ್ಟಿನ ಕಾರ್ಯ ಶ್ಲಾಘನಿಯ ಎಂದು ಹೇಳಿದರು.
    ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರಾದ ಡಾ|| ಪಂಪಾಪತಿ ಹೊನ್ನಳ್ಳಿ, ಟ್ರಸ್ಟಿನ ಮುಖ್ಯಸ್ಥರಾದ ವಿಶ್ವನಾಥ ನಿಲೂಗಲ್ಲ, ಎಲ್.ಹೆಚ್. ಪಾಟೀಲ್, ಗದಿಗೆಪ್ಪ ಅಮಾತಿ, ಗವಿಸಿದ್ದಪ್ಪ ಪಲ್ಲೆದ, ಉಪನ್ಯಾಸಕರಾದ ರಾಘವೇಂದ್ರ ಆಚಾರ, ಶಿದ್ದಲಿಂಗಪ್ಪ ಕೊಟ್ನೆಕಲ್ಲ, ಶರಣಬಸಪ್ಪ ಮಟ್ಟಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಶರಣಮ್ಮ ಕಲ್ಮಂಗಿ ಪ್ರಾರ್ಥಿಸಿದರೆ, ಶಿವಕುಮರ ಕುಕನೂರ ಸ್ವಾಗತಿಸಿದರು, ಹನುಮೇಶ ಕಲ್ಮಂಗಿ ನಿರೂಪಿಸಿದರು, ರಾಜೇಶ ಸಸಿಮಠ ವಂದಿಸಿದರು.

೧೨ ಶತಮಾನದ  ನಮ್ಮ ಶರಣರು ಸ್ಪಷ್ಟವಾಗಿ ತೀರಸ್ಕರಿಸುತ್ತಿದ್ದರು ‘ಕಲ್ಲನಾಗರ ಕಂಡರೆ ಹಾಲನೇರೆಯಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರು’ ಎಂದು ಗುರು ಬಸವಣ್ಣನವರೆ ತಮ್ಮ ವಚನದಲ್ಲಿ ತಿಳಿಸಿದ್ದಾರೆ ಆದ್ದರಿಂದ ಹಾಲು ಕೆಡಿಸುವು ಬದಲು ಜನರು ಒಳ್ಳೆಯ ರೀತಿಯಲ್ಲಿ ಬಳಸಬೇಕು ಎಂಬ ಸಂದೇಶ ಸಾರುವ ಸಲುವಾಗಿಯೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Please follow and like us:
error

Leave a Reply

error: Content is protected !!