ಜನರ ಸಮಸ್ಯೆ ಬಗ್ಗೆ ರಕಾರದ ಗಮನ ಸೆಳೆಯಲು ಪಾದಯಾತ್ರೆ : ಬಿ. ಶ್ರೀ ರಾಮುಲು

ಕೊಪ್ಪಳ, ಮೇ, ೧೯: ಬಸವಕಲ್ಯಾಣದ ಅನುಭವ ಮಂಟಪದಿಂದ ಬೆಂಗಳೂರಿನ ವಿಧಾನಸಭೆಯ ಆಡಳಿತ ಮಂಟಪದವರೆಗೆ ನಡೆಸುತ್ತಿರುವ ಈ ಪಾದಯಾತ್ರೆ ಜನರ ನೋವು, ನಲಿವು ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯಲು ಆರಂಭಿಸಲಾಗಿದೆ. ಇದಕ್ಕೆ ಜನ ಬೆಂಬಲ ವ್ಯಕ್ತವಾಗಿದೆ ಎಂದು ಶಾಸಕ ಹಾಗೂ ಬಿಎಸ್‌ಆರ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಹೇಳಿದರು.
ಅವರು ಶನಿವಾರ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯ ಸರಕಾರದ ಕಣ್ಣು ತೆರೆಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಗದಗನಲ್ಲಿ ನೂರೆಂಟು ಪ್ರಶ್ನೆಗಳಿಗೆ ಉತ್ತರ ಎಂಬ ಉಪವಾಸ ಕಾರ್ಯಕ್ರಮ ಹಮ್ಮಿಕೊಂಡಾಗಲೂ ಸರಕಾರ ಸ್ಪಂದಿಸಲಿಲ್ಲ, ರಾಜ್ಯದ ೧೨೪ತಾಲೂಕುಗಳಲ್ಲಿ ತೀವ್ರ ಬರಗಾಲವಿದ್ದರೂ ಸಚಿವರು, ಶಾಸಕರು ತಮ್ಮ ಅಧಿಕಾರದ ಲಾಲಸೆಗಾಗಿ ಕಿತ್ತಾಟ ನಡೆಸಿದ್ದಾರೆ ಇವರನ್ನು ನಾಡಿನ ಜನರು ಕ್ಷಮಿಸಲಾರರು ಎಂದರು.    
ರಾಜ್ಯದ ಜನತೆಯ ಮುಖದಲ್ಲಿ ನಗು ಕಾಣಲು ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ. ಯಾವ ಜನ್ಮದ ಋಣವೋ ಏನೋ ಜನತೆ ನಾನು ಹೋದಲೆಲ್ಲ ಪ್ರೀತಿ-ವಿಶ್ವಾಸ ತೋರುತ್ತಿದ್ದಾರೆ ಎಂದರು.
ಮೊನ್ನೆ ಕೆಲ ಶಾಸಕರು-ಸಚಿವರು ರಾಜಿನಾಮೆ ನೀಡಿದರು. ಇವರು ಬರಗಾಲಕ್ಕಾಗಿ, ಕುಡಿವ ನೀರಿಗಾಗಿ ಅಥವಾ ಜನರ ಸಮಸ್ಯೆಗಳಿಗಾಗಿ ರಾಜಿನಾಮೆ ನೀಡಲಿಲ್ಲ ಬದಲಾಗಿ ತಮ್ಮ ವಯಕ್ತಿಕ ಹಿತಾಸಕ್ತಿಗಾಗಿ ರಾಜಿನಾಮೆ ನೀಡುವ ನಾಟಕವಾಡಿದರು. ಇಂತವರಿಗೆ ಮುಂದಿನ ಚುನಾವಣೆಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಎಂಟು ತಿಂಗಳು ಗತಿಸಿದರೂ ಬರಗಾಲದ ಬಗ್ಗೆ ರಾಜ್ಯ ಅಥವಾ ಕೇಂದ್ರ ಸರಕಾರವಾಗಲಿ ಗಂಭೀರವಾಗಿ ಯೋಚಿಸುವ ಗೋಜಿಗೆ ಹೋಗಿಲ್ಲ ಎಂದ ಅವರು, ಬಿಎಸ್‌ಆರ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ತುಂಗಭದ್ರಾ ಹೂಳು ಸಮಸ್ಯೆ, ಅಂಗವಿಕಲರಿಗೆ ಸ್ಕೂಟರ್ ವಿತರಣೆ, ಗುಡಿಸಲು ಮುಕ್ತ ರಾಜ್ಯ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ಸಂಸದೆ ಜೆ.ಶಾಂತಾ ಮಾತಾನಾಡಿ, ಎಲ್ಲರಿಗೂ ಸಮಬಾಳು, ಸಮಪಾಲು ಎಂಬ ಉದ್ದೇಶವಿಟ್ಟುಕೊಂಡು ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 
ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರು ಒರೆಸಲು ಈ ಪಾದಯಾತ್ರೆಯನ್ನು ಬಿ.ಶ್ರೀರಾಮುಲು ಅವರು ಬಿಎಸ್‌ಆರ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಿಣೀಭೂತರಾದ ಜಿ.ಜನಾರ್ಧನರೆಡ್ಡಿ, ಶ್ರೀರಾಮುಲು ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ವಿಶ್ವಾಸ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.
ಬಿಎಸ್‌ಆರ್ ಪಕ್ಷದ ಜಿಲ್ಲಾ ಮುಖಂಡ ಕೆ.ಎಂ.ಸಯ್ಯದ ಮಾತನಾಡಿ, ಶ್ರೀರಾಮುಲು ಪಾದಯಾತ್ರೆಗೆ ಎಲ್ಲ ಕಡೆಯಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ನೂತನ ಬಿಎಸ್‌ಆರ್ ಪಕ್ಷಕ್ಕೆ ಮತದಾರರು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದ ಅವರು, ಶ್ರೀರಾಮುಲು ಅವರ ಸೇವೆ ನಿಸ್ವಾರ್ಥದಿಂದ ಕೂಡಿದ್ದು, ಜನತೆ ಶ್ರೀರಾಮುಲು ಅವರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ವಾನರ ಸೈನ್ಯದಂತೆ ಬಂದು ಸೇರಿಕೊಳ್ಳುತ್ತಿರುವುದು ಪಾದಯಾತ್ರೆಗೆ ವಿಶೇಷ ಕಳೆ ಬಂದಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶ್ರೀರಾಮುಲ ಅವರ ಪಟ್ಟಾಭೀಷೇಕವಾಗುವುದರಲ್ಲಿ ಯಾವುದೆ ಸಂದೇಹವಿಲ್ಲ ಎಂದರು. 
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಂಎಲ್ಸಿ ಮೃತ್ಯುಂಜಯ ಜಿನಗಾ, ಮುಖಂಡರಾದ ವೈಎನ್ ಗೌಡರ, ಡಾ. ಮಹಿಪಾಲರೆಡ್ಡಿ, ಅರುಣಾ ತಿಪ್ಪಾರೆಡ್ಡಿ, ನಗರಗಡ್ಡಿಯ ಶ್ರೀ ಶಾಂತಲಿಂಗ ಶ್ರೀಗಳು ಮತ್ತಿತರರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರಕ್ಕೂ ಅಧೀಕ ಸಂಖ್ಯೆಯಲ್ಲಿ ಸಾರ್ವಜನಿಕರು, ಅಭಿಮಾನಿಗಳು, ಕಾರ್ಯಕರ್ತರು ಸೈಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶ್ರೀರಾಮುಲು ಪಾದಯಾತ್ರೆಯಲ್ಲಿ ಗಮನ ಸೆಳೆದ ಗುಡದಪ್ಪ ಹಲಿಗೇರಿಯವರ ದೀರ್ಘದಂಡ ನಮಸ್ಕಾರ
ಕೊಪ್ಪಳ,ಮೇ.೧೯: ಉತ್ತರ ಕರ್ನಾಟಕ, ಹೈದ್ರಬಾದ್ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ದಿ ಗಾಗಿ ಫಣತೊಟ್ಟು ನಿಂತಿರುವ ಈಗಾಗಲೇ ಉತ್ತರಕ್ಕಾಗಿ ಉಪವಾಸ ಎಂಬ ವಿನೂತನ ಮಾದರಿಯ ಹೋರಾಟ ನಡೆಸಿ ಈಗ ಬಸವಕಲ್ಯಾಣದ ಅನುಭವ ಮಂಟಪದಿಂದ ಬೆಂಗಳೂರಿನ ವಿಧಾನಸೌಧದ ಆಡಳಿತ ಮಂಟಪವರೆಗೆ ೯೨೧ ಕಿ.ಮೀ. ಪಾದಯಾತ್ರೆ ಮೂಲಕ ಹೋರಾಟನಡೆಸಿರುವ ಸ್ವಾಭಿಮಾನಿ ಬಿ.ಶ್ರೀರಾಮುಲು ನಾಯಕತ್ವಕ್ಕೆ ಬೆಂಬಲಿಸಿ ಮತ್ತು ಶ್ರೀರಾಮುಲುರವರ ಬಿಎಸ್‌ಆರ್ ಪಕ್ಷದ ಉಜ್ವಲ ಭವಿಷ್ಯಕ್ಕಾಗಿ ಕೊಪ್ಪಳದ ಅವರ ಅಭಿಮಾನಿ ಗುಡದಪ್ಪ ತಂದೆ ಬಸಪ್ಪ ಬನಪ್ಪರವರು ಶನಿವಾರ ಶಿವಪುರ ಗ್ರಾಮದಿಂದ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದವರೆಗೆ ಉರುಳು ಸೇವೆ ಮತ್ತು ದೀರ್ಘ ದಂಡ ನಮಸ್ಕಾರ ಸೇವೆಯನ್ನು ಸಲ್ಲಿಸಿ ವಿಶೇಷ ಗಮನ ಸೆಳೆದರೇ ಇದರ ನೇತೃತ್ವವನ್ನು ಸೈಯ್ಯದ್ ಫೌಂಡೇಶನ್ ಹಲಗೇರಿ ಗ್ರಾಮ ಘಟಕದ ಅಧ್ಯಕ್ಷ ಬಸವನಗೌಡ ಡಿ.ಪಾಟೀಲ್, ಉಪಾಧ್ಯಕ್ಷ ಮಲ್ಲಪ್ಪ ಬಿ. ವಹಿಸಿದ್ದರು. 
 ಬಿಎಸ್‌ಆರ್ ಪಕ್ಷ ರಾಜ್ಯದಲ್ಲಿ ಬೆಳೆಯಲಿ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ ಬಿ.ಶ್ರೀರಾಮುಲುರವರು ಮುಖ್ಯಮಂತ್ರಿಯಾಗಲೀ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪನವರು ಮತೊಮ್ಮೆ ಸಂಸದರಾಗಲಿ, ಕೆ.ಎಂ.ಸೈಯ್ಯದ್‌ರವರು ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸಲಿ ಎಂಬ ಹಾರೈಕೆಯನ್ನು ಹೊತ್ತಿಕೊಂಡು ಈ ಉರುಳು ಸೇವೆ ದೀರ್ಘ ದಂಡ ನಮಸ್ಕಾರ ಸೇವೆಯನ್ನು ಆ ಹುಲಿಗೆಮ್ಮ ದೇವಿಗೆ ಸಲ್ಲಿಸುವುದಾಗಿ ಈ ಮೂರು ಜನ ನಾಯಕರ ಕಟ್ಟಾ ಅಭಿಮಾನಿ ಗುಡದಪ್ಪ ತಂದೆ ಬಸಪ್ಪ ಬನಪ್ಪನವರ ಈ ದೀರ್ಘ ದಂಡ ನಮಸ್ಕಾರ ಸೇವೆ ೫ ಕಿ.ಮೀ.ವರೆಗೆ ಮಾಡಿ ವಿಶೇಷ ಗಮನ ಸೆಳೆದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮತ್ತು ಯುವ ಮುಖಂಡ ಕೆ.ಎಂ.ಸೈಯ್ಯದ್‌ರವರು ಗುಡದಪ್ಪ ಹಲಗೇರಿಯವರ ಈ ವಿನೂತನ ಮಾದರಿಯ ಸೇವೆಗೆ ಅಭಿನಂದಿಸಿ ಸತ್ಕರಿಸಿದರು
Please follow and like us:
error