ಕನ್ನಡನುಡಿ ಜಾತ್ರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿಬಣ)ಯು ೫೮ನೇ ರಾಜ್ಯೋತ್ಸವ ನಿಮಿತ್ಯ ಇದೇ ದಿನಾಂಕ ೧೮ರಂದು ಹಮ್ಮಿಕೊಂಡಿದ್ದ ಕನ್ನಡನುಡಿ ಜಾತ್ರೆ ಕಾರ್ಯಕ್ರಮವನ್ನು ಅನಿವಾರ್ಯಕಾರಣಗಳಿಂದ ಬರುವ ಡಿಸೆಂಬರ್ ೨೭ರಂದು ಮುಂದೂಡಲಾಗಿದೆ.
ಬರುವ ಡಿಸೆಂಬರ್ ೨೭ರಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕದಂಬಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ಕನ್ನಡ ಸಂಸ್ಕೃತಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. 
ಕಾರಣ ಜಿಲ್ಲೆಯ ಕನ್ನಡಿಗರು ಅಭಿಮಾನಿಗಳು ಕಾರ್ಯಕ್ರಮದ ದಿನಾಂಕ ಬದಲಾವಣೆಗೆ ಸಹಕರಿಸಿ ನಡೆಯಲಿರುವ ನುಡಿಜಾತ್ರೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬಾಕಾಗಿ ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿಬಣ)ಯ ಜಿಲ್ಲಾಧ್ಯಕ್ಷ ರಾಜೇಶ ಅಂಗಡಿ   ತಿಳಿಸಿದ್ದಾರೆ.
Please follow and like us:
error