ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ

       ಕೊಪ್ಪಳ : ಕಾರವಾರದ ಕನ್ನಡಪ್ರಭ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರ ಮೇಲೆ ಜುಲೈ ೨೯ ರಂದು ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಖಂಡಿಸಿದರು. ಬುಧವಾರ ಈ ಕುರಿತು ಸಭೆ ನಡೆಸಲಾಯಿತು. ಕ್ಲಬ್‌ನ ಗೌರವಾಧ್ಯಕ್ಷ ಶರಣಪ್ಪ ಬಾಚಲಾಪುರ ಮಾತನಾಡಿ, ಇತ್ತಿಚೆಗೆ ಪತ್ರಕರ್ತರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದು ಖೇದನೀಯ. ಸುದ್ದಿಯ ಬೆನ್ನು ಹತ್ತಿ ಹೊರಟ ಪತ್ರಕರ್ತ ಮರಳಿ ಮನೆಗೆ ಸುರಕ್ಷಿತವಾಗಿ ಬರುವ ಭರವಸೆ ಇಲ್ಲದೇ ಕೆಲಸ ಮಾಡುವ ಪರಿಸ್ಥಿತಿ ಈಚಿನ ದಿನಗಳಲ್ಲಿದೆ. ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡ ರಾಜ್ಯದಲ್ಲಿ ಮಾಧ್ಯಮದವರ ಮೇಲೆ ನಡೆಯುತ್ತಿರುವ ಹಲ್ಲೆಯಂಥ ಪ್ರಕರಣಗಳನ್ನು ತಡೆಗಟ್ಟಬೇಕು. 
ಈ ಬಗ್ಗೆ ಸೂಕ್ತ ಕಾನೂನು ಜಾರಿಗೊಳಿಸಲು ಪ್ರಯತ್ನಸಬೇಕು ಎಂದು ಆಗ್ರಹಿಸಿದರು. ಕ್ಲಬ್‌ನ ಅಧ್ಯಕ್ಷ ಸೋಮರಡ್ಡಿ ಅಳವಂಡಿ ಮಾತನಾಡಿ, ಈಗಾಗಲೇ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಬೇಕು. ಅಂದಾಗ ಮಾತ್ರ ಪತ್ರಕರ್ತರ ಮೇಲೆ ಹಲ್ಲೆ ನಡೆಸುವ ದುಷ್ಕರ್ಮಿಗಳಿಗೆ ಪಾಠ ಕಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಸಂತೋಷ ದೇಶಪಾಂಡೆ, ಬಸವರಾಜ ಬಿನ್ನಾಳ, ಮಲ್ಲಿಕಾರ್ಜುನಸ್ವಾಮಿ, ಗುರುರಾಜ ಬಿ.ಆರ್. ಹರೀಶ ಜಿನೂರು, ದತ್ತಪ್ಪ ಕಮ್ಮಾರ, ಶಂಕರ ಕೊಪ್ಪದ, ರವಿಕುಮಾರ, ಸತೀಶ ಮುರಾಳ, ನಾಭಿರಾಜ ದಸ್ತೇನವರ್, ದೊಡ್ಡೇಶ ಯಲಿಗಾರ, ದೇವು ನಾಗನೂರ, ಮಹೇಶಗೌಡ ಭಾನಾಪೂರ, ಗಂಗಾಧರ ಬಂಡಿಹಾಳ ಇದ್ದರು ಎಂದು ಕೊಪ್ಪಳ ಮೀಡಿಯಾ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಬಸವರಾಜ ಕರುಗಲ್   ತಿಳಿಸಿದ್ದಾರೆ. 

Leave a Reply