You are here
Home > Koppal News > ೩೭೧ ಅಂಗೀಕಾರ ಸುಧೀರ್ಘ ಹೋರಾಟದ ಫಲ

೩೭೧ ಅಂಗೀಕಾರ ಸುಧೀರ್ಘ ಹೋರಾಟದ ಫಲ

– ಗೊಂಡಬಾಳ
ಕೊಪ್ಪಳ, ಡಿ. ೧೮. ಹೈದರಾಬಾದ ಕರ್ನಾಟಕದ ೩೭೧ (ಜೆ) ಅಂಗೀಕರಿಸಿರುವದು ಸಂತಸದ ಸಂಗತಿ ಹಾಗೇ ಇದು ಇಲ್ಲಿನ ಜನರ ಸುಧೀರ್ಘ ಹೋರಾಟದ ಫಲ ಎಂದು ಜೆಡಿಎಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಹೇಳಿದ್ದಾರೆ.
ಅವರು ಈ ಕುರಿತು ನೀಡಿರುವ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಬಹಳ ದಿನಗಳ ನಂತರ ೩೭೧ ಜಾರಿ ಆಗುತ್ತಿರುವದು ಸಂತೋಷದ ವಿಷಯ, ಸದ್ಯ ಆಗುತ್ತಿರುವ ಎಲ್ಲಾ ನೇಮಕಾತಿಗಳನ್ನು ತತ್‌ಕ್ಷಣ ನಿಲ್ಲಿಸಿ, ಹೈ.ಕ. ಆರು ಜಿಲ್ಲೆಗಳಿಗೆ ಮಾತ್ರ ಹೊಸದಾಗಿ ಪ್ರಕ್ರಿಯೆ ಮಾಡಬೇಕು, ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಉತ್ತಮ ಹಾಗೂ ತುರ್ತಾಗಿ ಕಾರ್ಯ ಮಾಡಿ ಆರು ಜಿಲ್ಲೆಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
  ಅಲ್ಲದೇ ಬ್ಯಾಕ್‌ಲಾಗ್ ಹುದ್ದೆಗಳನ್ನು ಸಹ  ತುಂಬಬೇಕು ಎಂದು ಒತ್ತಾಯಿಸಿದ ಅವರು, ಹೋರಾಟದ ಕಿಚ್ಚು ಹಚ್ಚಿದ ವೈಜನಾಥ ಪಾಟೀಲ, ರಾಘವೇಂದ್ರ ಕುಷ್ಟಗಿ, ರಜಾಕ್ ಇನ್ನೂ ಅನೇಕರು ಅಭಿನಂದನಾರ್ಹರು ಅಂಥವರನ್ನು ಗುರುತಿಸಿ ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಲಾಗುವದು ಎಂದು ಹನುಮೇಶ ಕಡೆಮನಿ, ಜೆಡಿಎಸ್ ನಗರ ಎಸ್‌ಸಿ ಘಟಕದ ಅಧ್ಯಕ್ಷ ನಾಗರಾಜ ಚಲುವಾದಿ, ಆನಂದ ಗೊಂಡಬಾಳ, ದ್ಯಾಮಣ್ಣ ಮ್ಯಾದನೇರಿ, ಅಣ್ಣಪ್ಪ ತಳಕಲ್, ಶಂಕ್ರಪ್ಪ ವಾಲ್ಮೀಕಿ, ಬಸವರಾಜ ದೇಸಾಯಿ ಇತರರು ಹರ್ಷ ವ್ಯಕ್ತ ಪಡಿಸಿದ್ದಾರೆ.

Leave a Reply

Top